ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 - ... " -ಶಕುಂತಲನಾಟಕ ನವೀನಟೀಕೆ. ಇನ್ನು ಮೇಲೆ ಎನಗೆ ಆ ಶಕುಂತಲೆಯ ಸಂದರ್ಶನವಾಗುವುದು ಅತಿ ದುರ್ಲಭವು ? ಎಂದು ನುಡಿಯಲು ; ವಿದೂಷಕನು- ಎಲೈ ಸ್ವಾಮಿಯೇ, ಹಾಗೆ ಹೇಳಲಾಗದು. ಬರತ ಕ್ಯ ಪ್ರಯೋಜನಗಳು ಅವುಗಳ ಯೋಚನೆ ಇಲ್ಲದಿರ್ದ ದೈವವಶದಿಂ ಒ೦ದೇ ಬ ರುವುವಲ್ಲದೆ ನಿಲ್ಲಲಾ.ಕವೆಂಬುವುದಕ್ಕೆ ನಿನ್ನ ರತ್ನ ಮುದ್ರಿಕೆಯೇ ನಿದರ್ಶನವಾಗಿ ರುವುದಾದ'೦ದ ಅಗತ್ಯವಾಗಿ ಶಕುಂತಲೆಯ ಸಮಾಗಮವು ನಿನಗುಂಟಾಗು ವುದು ಎಂದು ನುಡಿಯಲು ; ರಾಯನು ತನ್ನ ರತ್ನ ಮುದ್ರಿಕೆಯಂ ನೋಡಿ- ಎಲೈ ಮಿತ್ರನಾದ ವಿದೂ ಷಕನೇ, ಯಾರಿಗೂ ದುರ್ಲಭಮಾದ ರಮಣೀಯವಾಗಿರುವ ಆ ಶಕುಂತಲೆಯ ಬೆರಳಿನಿಂ ಚಾಲಿ ಬಿದ್ದ ಈ ಉಂಗುರವು ಮಹತ್ತಾದ ದುಃಖಕ್ಕೆ ಯೋಗ್ಯವಾದು ದು' ಎಂದು ನುಡಿದು ಉನ್ಮಾದದೆಚ್ಚಿ ಆ ಉಂಗುವಂ ಕುತು- ಎಲೈ ಉಂಗರವೇ ಯಾವ ಕಾರಣದಿಂದ ಕೆಂಪಾದ ನಖಕಾಂತಿಗಳಿ೦ ಸುಂದರವಾದ ಆ ಶಕುಂತಲೆ ಬೆರಳುಗಳಲ್ಲಿ ವಾಸವಂ ಗೆದ್ದಿದ್ದು ಚಾ ಬಿದ್ದಿರುವೆಯೋ ಆ ಕಾರಣದಿಂ ನಿನ್ನ ಪುಣ್ಯವು ಎನ್ನ ಪುಣ್ಯದಂತೆ ಸ್ವಲ್ಪವಾದುದೆಂಬದಾಗಿ ನೀನು ಮಾಡಿದ ಕಾರ್ಯ ದಿಂದಲೇ ಊಹೆದೋಯುತ್ತಲಿದೆ ” ಎಂದು ನುಡಿಯಲು ; ಸಾನುಮತಿಯು ಆ ವಾಕ್ಯವಂ ಕೇಳಿ “ ಈ ಮುದ್ರಿಕೆಯು ಇನ್ನಾರ ಹಸ್ತ ಕಾದರೂ ದೊರತಿರ್ದಲ್ಲಿ ದುಃಷಿಪಡುವುದು ಯುಕ್ತವಲ್ಲದೆ ತನ್ನ ಕೈಯೊಳಿರುವಲ್ಲಿ ಅದಂ ನೋಡಿ ರಾಯನು ವ್ಯರ್ಥವಾಗಿ ವ್ಯಸನಮಂ ಪೊಂದುತ್ತಿರುವನು” ಎಂದು ಯೋಚಿಸುತ್ತಿರಲು ; ವಿದೂಷಕನು- ಅಯ್ಯೋ ಮಹಾರಾಯನೇ, ಪೂಜ್ಯಳಾದ ಶಕುಂತಲಾ ದೇವಿಯ ಹಸ್ತಕ್ಕೆ ಈ ರತ್ನ ಮುದ್ರಿಕೆಯು ಯಾವ ಉಪಾಯದಿಂದ ಕೊಡಲ್ಪಟ್ಟಿ ತೋ ತಿಳಿಯದು ” ಎನಲು ; ಸಾನುಮತಿಯು ಇದೇ ವಾರ್ತೆಯಂ ಕೇಳಬೇಕೆಂದು ಎನಗೂ ಬಹಳ ವಾಗಿ ಕುತೂಹಲವುಂಟಾಗಿರ್ದಂತೆ ಈ ವಿದೂಷಕನು ರಾಯನಂ ಪ್ರಶ್ನೆ ಯಂ ಗೆಯ್ಲಿ ರುವನು ” ಎಂದು ತನ್ನ ಮನದಲ್ಲಿ ಯೋಚಿಸುತ್ತಿರಲು ; ರಾಯನು ಎಲೈ ವಿದೂಷಕನೇ, ಅದಕ ಸಂಗತಿಯಂ ಸಂಗತವಾಗಿ ಪೇಳುವೆನ್ನು, ಕೇಳು. ನಾನು ಆ ಕಣ್ಣಾಶ್ರಮದಿಂ ಪೊದುಟ್ಟು ನಗರವಂ ಕು? ತು ಬರಲುದ್ಯೋಗಿಸಲಾ ಶಕುಂತಲೆಯು ಕಣ್ಣೀರು ಬಿಡುತ್ತಾ- ಎಲೈ ಪ್ರಾಣಕಾಂ