ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಕರ್ಣಾಟಕ ಕಾವ್ಯಕಲಾನಿಧಿ ಶನಾದ ಸ್ವಾಮಿಯೇ, ನೀನು ಸುರಕ್ಕೆ ಪೋದಮೇಲೆ ಮರಳಿ ಎನ್ನ ಸ್ಮರಣೆ ಬಂದು ಯಾವಾಗ ನಿಮ್ಮ ಸನ್ನಿಧಿಗೆ ಎನ್ನ೦ ಕರೆಸಿಕೊಳ್ಳುವಿರಿ? ” ಎಂದು ನುಡಿಯಲಾಗ, ನಾನು ನಿನ್ನ ನಾಮಾಕ್ಷರಗಳಿಂದಂಚಿತವಾದ ಇನ್ನ ಮುದ್ರಿಕೆಯನ್ನವಳ ಕೋಮಲ ಮಾದ ಬೆರಳಿನಲ್ಲಿ ಕೂಡಿಸಿ,” »ಲೌ ಪ್ರಾಣಪ್ರಿಯಳೆ:, ಈ ಉಂಗರದಲ್ಲಿ ಬರೆದಿರುವ ಎನ್ನ ನಾಮಾಕ್ಷರಗಳಂ ದಿನವೊಂದಕ್ಕೆ ಒಂದಕ್ಷರಪ್ರಕಾರದಲ್ಲಿ ಎಣಿಕೆಗೆಯ್ಯುತ್ತಿರು. ಯಾವದಿವಸ ಅಕ್ಷರಂಗಳು ಸಮಾಪ್ತಿಯ ವೊಂದುತ್ತಿರುವುವೋ ಆದಿವಸ ನಿನ್ನ ಎನ್ನ ಅಂತಃಪುರಪ್ರವೇಶವಂ ಗೆಯ್ಯುವುದಕ್ಕೆ ಸೇವಕ ಜನರು ಈ ಆಶ್ರಮಕ್ಕೆ ಬರು ವರು' ಎಂದು ಅವಳಿಗೆ ನಂಬುಗೆಯನ್ನಿತ್ತು ಬಂದೆನು. ಆಬಳಿಕ ಕರನಾದ ನಾನು ಅಜ್ಞಾನದಿಂದವಳಂ ಕರೆಯಿಸುವುದಂ ಮರೆತೆನು ” ಎಂದು ಕಂಬನಿದುಂಬಿ ಕಾಂ ತಿಹೀನನಾಗುತ್ತಿರಲು ; ಸಾನುಮತಿಯು : ಈ ದುಷ್ಯಂತರಾಯನು ಈ ಶಕುಂತಲೆಯಂ ಕರೆ ಯಿಸುವ ನಿಬಂಧನೆಯಂ ಗೆಯುದು ರಮಣೀಯವಾಗಿರುವುದು. ಆದರೂ ದೈವ ವೆ: ಈ ರಾಯಂಗೆ ಅಜ್ಞಾನವನ್ನುಂಟುಮಾಡಿದುದು ಎಂದು ನುಡಿದುಕೊಳ್ಳು ತಿರಲು ; ವಿದೂಷಕನು 14 ಎಲೈ ಮಹಾರಾಯನೇ, ನೀನು ಕಣ್ಯಾಶ್ರಮದಲ್ಲಿ ಆ ಶಕುಂತಲಾದೇವಿಯ ಬೆರಳಲ್ಲಿಟ್ಟ ರತ್ನ ಮುದ್ರಿಕೆಯು ಬೆಸ್ತರವನು ಛೇದಿಸಿದ ಲೋ ಹಿತಮತೃ ದ ಉದರ ಮಧ್ಯಕ್ಕೆ ಹೇಗೆ ಬಂದುದು ? ” ಎಂದು ಕೇಳಲು ; ರಾಯನು - ಎಲೈ ಮಾಂಡವ್ಯನೇ, ಕೇಳು. ಪ್ರತಿಷ್ಠಾನನಗರಕ್ಕೆ ಬರು ತಿರ್ದ ನಿನಗೆ ದೇವಿಯಾದ ಶಕುಂತಲೆಯ ಮಾರ್ಗದಲ್ಲಿ ಗಂಗಾಪ್ರವಾಜದಲ್ಲಿರುವ ಶಚತೀರ್ಥಕ್ಕೆ ನಮಸ್ಕಾರವಂ ಗೆಯು ವಕಾಲದಲ್ಲಿ ಬಿದ್ದುದೆಂದು ಅವಳ ಸಂಗಡ ಬಂದಿರ್ದಗೌತಮಿಯೆಂಬ ಋಷಿಯು ಸೇಳಿದಳು ” ಎನ್ನಲು; ಆ ವಾಕ್ಯಕ್ಕೆ ವಿದೂಷಕನು- ಎಲೈ ಸ್ವಾಮಿಯೆ, ನೀನು ಅಪ್ಪಣೆ ಯ ನಿತ್ತುದು ಯುಕ್ತವಾಗಿ ನೋಡುವುದು ” ಎಂದು ನುಡಿಯಲು; ಸಾನುಮತಿಯು. ಈ ಪ್ರಕಾರಕ್ಕೆ ಇರುವಲ್ಲಿ ನಾವಭೀರುವಾದ ಈ ದುಸ್ವಂತರಾಯಂಗೆ ಈ ಶಕುಂತಲೆಯ ಗಂಧರ್ವವಿವಾಹದಲ್ಲಿ ಹೇಗೆ ಸ೦ದೆ ಹ ಪು ತೋ ಮತ್ತು ಮಟ್ಟು ಪೀ ** ರುವ ಇಂಥ ಅನುರಾಗವಿರುವಲ್ಲಿ ಆ ಶಕುಂತ ಲೆಯು ಗುತಿನ ರತ್ನ ದುಂಗರವಂ ಇವನಿಗೆ ತೋ' ಸುವುದಕ್ಕೆ ಏನು ನಿಮಿತ್ತವಿರು ವುದೋ ತಿಳಿಯದೆಂದು ಆಲೋಚಿಸುತ್ತಿರಲು;