ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ಕರ್ಣಾಟಕ ಕಾದ್ಯ ಕಲಾನಿಧಿ. ಚತುರ್ಥಕಲ್ಲೋಲದ ತೃತೀಯತರಂಗ. ಅನಂತರದಲ್ಲಿ ಆ ವಿದೂಷಕನು ಚತುರಿಕೆ ತಂದ ಶಕುಂತಲೆಯ ಭಾವಚಿತ್ರವಂ ನೋಡಿ, ರಾಯನಂ ಕು” ತು- ಎಲೈ ಸ್ವಾವಿಯೇ, ನೀನು ಮಾಡಿದ ಚಿತ್ರ ಕಾರ್ಯವು ಚೆನ್ನಾ ದುದು. ಈ ಪ್ರಕಾರವಾದ ರೂಪವಂ ನಾನೆಲ್ಲಿಯ ನೋಡಿದ್ದೇ ಇಲ್ಲ. ಮನೋಹರವಾದ ಆಕಾರದಿಂ ನೋಟಕ್ಕೆ ಯೋಗ್ಯಮದ ಈ ಚಿತ್ರ ಪ್ರತಿಮೆಯ ದೇಹದಲ್ಲಿರುವ ನಿಮ್ಮೊನ್ನೆ ತಪ್ರದೇಶಗಳಲ್ಲಿ ಎನ್ನ ದೃಷ್ಟಿಯು ಜಾಕುತ್ತಿರುವದೋ ಎಂಬಂತಿರುವುದು. ಎಂದು ಸ್ತೋತ್ರವಂ ಗೆಯ್ಯಲು ; - ಸಾನುಮತಿಯು ಆ ಭಾವಚಿತ್ರವಂ ನೋಡಿ, ಅತಿ ಸಂತೋಷಯುಕ್ತ ೪ಾಗಿ, « ರಾಯನು ತನ್ನ ಕರದಲ್ಲಿ ಸಿಡಿದು ಬರೆದ ಚಿತ್ರದ ಕಡ್ಡಿಯ ಕುಶಲತೆಯ ನೇನೆಂದು ಬಣ್ಣಿಸಲಿ ! ಪ್ರಿಯ ಸವಿಯಾದ ಶಕುಂತಲೆಯೇ ಎನ್ನ ಮುಂಭಾಗದಲ್ಲಿ ನಿಂತಿರುವಂತೆ ತೋಚುವುದು” ಎಂದು ನುಡಿದು ಕೊಳ್ಳುತ್ತಿರಲು; ರಾಯನು ಆ ಚಿತ್ರಫಲಕವಂ ನೋಡಿ - ಪ್ರಪಂಚದಲ್ಲಿರುವ ಸ್ಥಾವರ ಜಂಗಮಾತ್ಮಕವಾದ ಪದಾರ್ಥಗಳಲ್ಲಿ ಯಾವ ಯಾವ ಪದಾರ್ಥಗಳು ರೂಪಲಾ ವಣ್ಯ ವಿಹೀನಳಾಗಿರುವವೋ ಅವುಗಳನ್ನು ಚಿತ್ರಂಗಳಲ್ಲಿ ರಮ್ಮಂಗಳಾಗಿ ಬರೆಯ ಬಹುದು. ಹಾಗಾದರೂ ಈ ಶಕುಂತಲೆಯ ಉಾವಣಾತಿಶಯಗಳ ಸ್ಪಲ್ಪವಾಗಿ ಬರೆದಿರುವೆನಲ್ಲದೆ ಸಮಗ್ರವಾಗಿ ಬರೆಯುವುದಕ್ಕಾಗದು ಎಂದು ನುಡಿಯಲು; ಸಾನುಮತಿಯು ಇಂಥ ರೂಪವತಿಯಾದ ಶಕುಂತಲೆಗೋಸುಗ ರಾ ಯನು ತಿರಸ್ಕಾರವಂ ಗೆಯ್ದನೆಂದು ಪಶ್ಚಾತ್ತಾಪವಂ ಪೊಂಗುತ್ತಿರುವುದು ಯುಕ್ತ ಮಾಗಿರುವುದು' ಎಂದು ತಿಳಿಯುತ್ತಿರಲು; - ವಿದೂಷಕನು - ಎಲೈ ಸ್ವಾಮಿಯೇ, ಈ ಚಿತ್ರಪಠದಲ್ಲಿ ಸಮಾನವಾದ ವಯೋರೂಪಿ೦ ಜೆ.ಆರಾಗಿ, ನೋಡುವುದಕ್ಕೆ ಯೋಗ್ಯರಾಗಿರುವ ಈ ಮ೫) ಮಂದಿಯಲ್ಲಿ ಸೂಳಾದ ಶಕುಂತಲಾದೇವಿಯು ಯಾವಳಿರಬಹುದು?' ಎಂದು ಕೇಳಲು; ಸಾನುಮತಿಯು... ಅಜ್ಞಾನವೆಂಬ ಅಂಜನವುಳ್ಳ ಈ ವಿದೂಷಕನು ನಮ್ಮ : ಖಿ ಮಾದ ಶಕ೦ತಲೆಯ ರೂಪವೆ೦ ನೋಡಿದವನಂತೆ ತೋಜಿಲಾ ಇದು? ಎಂದು ನುಡಿಯುತ್ತಿರಲು;