ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಕುಂತಲನಾಟಕ ನವೀನಟೀಕೆ-. ೧೪೩ ರಾಯನು- 'ಎಲೈ ವಿದೂಷಕನೇ, ನಾನು ಇವಳು ಶಕುಂತಲೆಯೆಂದು ಹೇಳಲೊಲ್ಲೆನು, ನೀನು ಈ ಮು ಮಂದಿಗಳಲ್ಲಿ ಶಕುಂತಲೆಯು ಯಾವಳು ಎಂದು ಊಹಿಸುತ್ತಿರುವೆ ?” ಎನಲು; ವಿದೂಷಕನು - ಎಲೈ ಸ್ವಾಮಿಯೇ, ಶಿಥಿಲವಾದ ಬಂಧದಿಂ ಹೊ ಸೂಸಿ ಜಾರಿ ಬೀಳುತ್ತಿರುವ ತೋರಮದ ಮಲ್ಲಿಗೆಮೊಗ್ಗುಗಳಿ೦ ಯುಕ್ತ ಮಾದ ಕೇಶಾಗ್ರಮಳ್ಳವಳಾಗಿ, ಮುತ್ತಿನಂತೆ ಮುದ್ದಾಗಿರುವ ಬೆಮರ್ವನಿಗಳಿಂ ಮಂಡಿತ ಮಾದ ಮುಖಮಂಡಲವುಳ್ಳವಳಾಗಿ, ಹೆಚ್ಚಾಗಿ ನೀಡಿ ಇರುವ ನಳಿತೋಳು ಗಳಿo ರಮಣೀಯಳಾಗಿ, ನಾರಿಯಿಂ ಸಡಲವಂ ಗೆಯ್ದು ನಿಲ್ಲಿಸಿರುವ ಮನ್ಮಥನ ಧನುಸ್ಕೋ ಎಂಬಂತೆ ಪಿಡಿಗಡಗುವ ಬಡನಡುವಿನಿಂ ಬಳುಕುತ್ತಲಿರುವ ತನುವಿನಿಂ ಯುಕ್ತಳಾಗಿ, ಕೆಂದಳಿರ ಚೆಲ್ಲುವಂತಿರುವ ಸೀಮಾವಿನ ಮರದ ನೆರಳಿನಲ್ಲಿ ಸ್ವಲ್ಪ ಮಾಗಿ ಬಳಲಿರುವಳಂತೆ ನಿಂತಿರುವಳೇ ಆ ಶಕುಂತಲೆಯೆಂತಲೂ ಅವಳ ಪಾರ್ಶ್ವದಲ್ಲಿ ರುವನೇ ಅವಳ ಸಪಯರುಗಳೆಂತಲೂ, ಊಹಿಸುತ್ತಿರುವೆನು ಎಂದು ನುಡಿಯು ತಿರಲು; ರಾಯನು ಎಲೈ ವಿದೂಷಕನೇ, ನೀನು ಜಾಣೆಯುಳ್ಳವನು ಚೆನ್ನಾಗಿ ಹೇಳಿದೆ ಎಂದು ಶ್ಲಾಘನೆಯಂ ಗೆಯ್ಯು, ಎಲೈ ಸ್ನೇಹಿತನೇ, ಕೇಳು. ಈ ಶಕುಂತಲೆಯ ಭಾವಚಿತ್ರದಲ್ಲಿ ಎನಗೆ ಅಭಿಮತವಾದ ಕೆಲವು ಚಿಹ್ನೆ ಗ ಳಿರುವುವು. ಅದು ಹೇಗೆಂದರೆ:-ನಾನೀಭಾವಚಿತ್ರವಂ ಬರೆಯುವಾಗ್ಗೆ ಆ ಮನೋ ಹರಾಂಗಿಯ ಆಕಾರವಂ ಊಹಿಸುವುದಿ೦ ಸಾತ್ವಿಕಭಾವವು ಪಟ್ಟಿ ಬೆವರು ಗೂಡಿದ ಬೆರಳು ತಗಲಿದ್ದು, ಈ ರೇಖೆಗಳ ಸಮಾಸಗಳಲ್ಲಿ ಸ್ವಲ್ಪವಾಗಿ ಕಪ್ಪ ತೋರುವುದು. ಮತ್ತು ಅಲ್ಲಲ್ಲಿ ಉಬ್ಬಿ ಇರುವ ಹಳದಿ ಹಸರು ಮೊದಲಾದ ಬಣ್ಣಗಳಿಂದ ಆ ಶಕುಂತಲೆಯ ಸಂಗವು ಎಂದಿಗೆ ಉಂಟಾಗುವುದೋ ಎಂಬ ಚಿಂತೆಯಿಂ ಪುಟ್ಟಿದ ಕಣ್ಣೀರುಗಳು ಕಪೋಲಗಳಿ೦ ಜಾ” ಈ ಚಿತ್ರ ಪಠದಲ್ಲಿ ಬಿದ್ದಿ ರುವುದೆಂದು ಊಹಿಸುವುದಕ್ಕೆ ಯೋಗ್ಯವಾಗಿರುವುದು. ಇದೀಗ - ಚಿಹ್ನೆ ಗಳು ಎಂದು ಸುರಿದು ಒತ್ತಿನಲ್ಲಿ ಚಿತ್ರಫಲಕವಂ ಪಿಡಿದಿರುವ ಚತುರಿಕೆಯಂ ಕುಳಿತು, 14 ಎಲೆ ಚತುರಿಕೆಯೇ, ಶಕುಂತಲೆಯ ವಿಹಾರಸ್ಥಾನಂಗಳಂ ಅರ್ಧವಾಗಿ ಬರೆದ ರುವೆನು. ಸಂಪೂರ್ಣವಾಗಿ ಬರೆಯುವುದಕ್ಕೋಸುಗ ಚಿತ್ರದ ಕಡ್ಡಿ ಬಣ್ಣಗಳ ಜಾಗ್ರತೆಯಾಗಿ ತೆಗೆದುಕೊಂಡು ಬರುವುದು ' ಎಂದು ಆಜ್ಞೆಯನ್ನೀಯಲು; ಚತುರಿಕೆಯು- ಎಲೈ ಮಾಂಡವ್ಯ ನೇ, ಚಿತ್ರದ ಸೆಟ್ಟಿಗೆಯಂ ನಾನು