ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ -ಕರ್ಣಾಟಕ ಕಾವ್ಯ ಕಲಾನಿಧಿ ತೆಗೆದುಕೊಂಡುಬರುವವರೆಗೂ ಈ ಚಿತ್ರದ ಫಲಕವಂ ಪಿಡಿದಿರುವುದು ಎನ್ನ ಲು; « ರಾಯನ ಪ್ರೇಮಪಾತ್ರವಾದ ಈ ಚಿತ್ರಫಲಕವಂ ನಾನು ಪಿಡಿದಿರು ವೆನು' ಎಂದು ಆ ಚತುರಿಕೆಯ ಹಸ್ತದಿ ಅದಂ ತೆಗೆದುಕೊಂಡು ಹಿಡಿಯಲು; ಚತುರಿಕೆಯು ಚಿತ್ರಸಾಮಗ್ರಿಯಂ ತರುವುದಕ್ಕೆ ಪೋಗಲು; ರಾಯನು- ಎಲೈ ವಿದೂಷಕನೇ, ಪ್ರತ್ಯಕ್ಷವಾಗಿ ಬಂದ ಕೋಮ ಕಾಂಗಿಯಾದ ಶಕುಂತಲೆಯಂ ತಿರಸ್ಕಾರವಂ ಗೆಯ್ದು ಚಿತ್ರದಲ್ಲಿ ಬರೆದಿರುವ ಅವಳ ರೂಪವಂ ಪ್ರೇಮಾಸ್ಪದವೆಂದು ತಿಳಿದಿರುವ ನಾನು ಮಾರ್ಗದಲ್ಲಿ ನಿರ್ಮಲಜಲದಿಂ - ಪೂರಿತವಾದ ನದಿಯಂ ಬಿಟ್ಟು ಬಿಸಲುಜಳದಲ್ಲಿ ಆಸೆಯುಳ್ಳ ಮನುಜನೆಂತಾದೆನು ಎನ್ನಲು; ವಿದೂಷಕನು ತನ್ನ ಮನದಲ್ಲಿ ನಿಶ್ಚಯವಾಗಿ ಈ ರಾಯನು ನದಿಯಂ ದಾಂಟಿ ಮೃಗತೃಷ್ಣ ಯಲ್ಲಿ ಜಲಭ್ರಾಂತಿಯಿಂ ತೊಳಲುತ್ತಿರುವನಂತಾದನು, ಎಂದು ಆಲೋಚಿಸಿ, ರಾಯನಂ ಕು ತು- ಎಲೈ ಸ್ವಾಮಿಯೇ, ಈ ಚಿತ್ರದ ತದಲ್ಲಿ ಇನ್ನೇನು ಬರೆಯತಕ್ಕದ್ದಿರುವುದು ? ಎನ್ನ ಲು; ಸಾನುಮತಿಯು, ಯಾವ ಸ್ಥಳಗಳಲ್ಲಿ ಆ ಶಕುಂಲೆಯಿಂದೊಡಗೂಡಿ ನಿಸ್ಸಂಶಯವಾಗಿ ವಿಹಾರಮಂ ಗೆಯ್ದಿರುವನೋ ಆ ಸ್ಥಳಂಗಳೆಲ್ಲವೂ ಬರೆಯತಕ್ಕ ವಾಗಿ ಇರುವುವು ಎಂದು ಯೋಚಿಸುತ್ತಿರಲು; « ಮಿತ್ರನೇ, ಬರೆಯತಕ್ಕ ವಂ ಕೇಳು. ಬಿಳ್ಳುಗೂಡಿದ ಮರಳಿನಲ್ಲಿ ವಿಹಾರಾ ಸಕ್ರಂಗಳಾದ ಹಂಸಮಿಥುನಗಳುಳ್ಳ ಮಲಿನಿಯೆಂಬ ನದಿಯಂ, ಆ ನದಿಯ ಸುತ್ತಲೂ ಸಂಚರಿಸುತ್ತಿರುವ ಹರಿಣಂಗಳ ಸುಂದರವಾದ ಹಿಮತ್ರರ್ವತದ ಸಮಾ ಪದಲ್ಲಿರುವ ಗಿರಿಗಳು, ನಾಜುಮಡಿಗಳಂ ಕಟ್ಟಿರುವ ಆ ತಪೋವನದ ವೃಕ್ಷಗಳ ಕೊಂಬೆಗಳಂ, ಗಂಡು ಹುಲ್ಲೆಯ ಶೃಂಗದಿಂ ಎಡಗಣ್ಣಂ ತುರಿಸಿಕೊಳ್ಳುತ್ತಿರುವ ಹೆಣ್ಣು ಹುಲ್ಲೆಯಂ ಬರೆಯಬೇಕು' ಎಂದು ನುಡಿಯಲು; ವಿದೂಷಕನು. ಎಲೈ ಸ್ವಾಮಿಯೇ, ಇವೆಲ್ಲವಂ ಒರೆದಮೇಲೆ ಜೋಲು ತಿರುವ ಭೂಮಧ್ಯದಿಂ ವಿಕಾರಸ್ವರೂಪರಾದ ಖುಷಿಗಳಂ ಈ ಚಿತ್ರಪಠದಲ್ಲಿ ಬರೆ ಯಬೇಕಾಗಿರುವುದು ಎನಲು; ರಾಯನು ಋಷಿಗಳಂತಿರಲಿ, ಆ ಶಕುಂತಲೆಯ ಈ ಭಾವಚಿತ್ರಕ್ಕೆ ಇನ್ನು ಕೆಲವು ಅಲಂಕಾರವಂ ಗೆಯ್ಯುವುದಂ ಮಯಿ' ತೆನು ಎನಲು; ವಿದೂಷಕನು...!! ಅದೇನೀರುವುದು: ಅಪ್ಪಣೆಯನ್ನೀಯಬೇಕು ಎನ್ನಲು;