ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಕುಂತಲನಾಟಕ ನವೀನಟೀಕೆ ೧೪೫ ಆ ಸಾನುಮತಿಯು ಈ ರಾಯನು ಶಕುಂತಲೆಯ ವನವಾಸಕ್ಕೂ ಅವ ಳ ದೇಹದ ಸೌಕುಮಾರಕ್ಕೂ ಅನುಕೂಲಮಾದ ಚಿತ್ರವಂ ಬರೆಯುವುದಕ್ಕೆ ಯತ್ನ ವಂ ಗೆಯ್ಯುವನು ಎಂದು ತೋಯುವುದು ಎಂದು ಊಹಿಸುತ್ತಿರಲು ; ರಾಯನುಎಲೈ ವಿದೂಷಕನೇ, ನಾನು ಬರೆಯದೆ ಮರೆತಿರುವುದಂ ಕೇಳು, ಕಪೋಲಗಳಲ್ಲಿ ಜೋಲುತ್ತಿರುವ ಬಾಗೆಹೂವಿನ ಕೇಸರಗಳುಳ್ಳ ಕರ್ಣಾವ ತಂಸವಂ ಆ ಪ್ರಾಣಕಾಂತೆಯ ಕರ್ಣಂಗಳಿಗೆ ಅಲಂಕಾರವಂ ಗೆಯ್ದ೦ತೆ ಬರೆಯ ಲಿಲ್ಲ. ಮತ್ತು ಶರಚ್ಚಂದ್ರನ ಕಿರಣಗಳಂತೆ ಅತಿ ಬೆಳ್ಳಾದ ತಾವರೆದಂಟಿನಲ್ಲಿರುವ ತಂತುವಿನ ಹಾರವಂ ಆ ಕಾಂತೆಯ ತೋರವಾದ ಸ್ತನಮಧ್ಯಕ್ಕೆ ಸೇರಿಸಿದಂತೆ ಬರೆ ಯಲಿಲ್ಲ” ಎಂದು ಹೇಳಲು ; ವಿದೂಷಕನು- ನಮ್ಮ ದೇವಿಯಾದ ಶಕುಂತಲೆಯಂ ಕೆಂದಾವರೆಯ ಚೆಂದವುಳ್ಳ ತನ್ನ ತುದಿಗೈಯಿಂ ಮುಖವಂ ಮುಚ್ಚಿ ಸ್ವಲ್ಪ ಭಯವಂ ಪೊಂದಿದವ ಳಂತೆ ಚಿತ್ರದಲ್ಲಿ ಬರೆದಿರುವೆ” ಎಂದು ನುಡಿದು, ಆಮೇಲೆ ಆ ಪಟವಂ ಚೆನ್ನಾಗಿ ನೋಡಿ ಹಾಹಾಕಾರವಂ ಗೆಯ್ಯು, ದಾಸೀಪುತ್ರನಾದ ಮಕರಂದಚೋರನಾದ ದುಷ್ಟಭ್ರಮರನು ಪೂಜ್ಯಳಾದ ನಮ್ಮ ಶಕುಂತಲಾದೇವಿಯ ಮುಖವಂ ಕುಲಿತು ಬರುವನು ” ಎಂದು ನುಡಿಯಲು ; ರಾಯನು- ಎಲೈ ಮಾಂಡವ್ಯನೇ, ಆ ದುಷ್ಟ ಭ್ರಮರವು ಬಾರದಂತೆ ನಿವಾರಣೆಯಂ ಗೆಯ್ಯುವುದು? ” ಎನಲು ; ವಿದೂಷಕನು- ಎಲೈ ಸ್ವಾಮಿಯೇ, ಜಗತ್ತಿನಲ್ಲಿರುವ ದುಷ್ಪರಂ ಶಿಕ್ಷೆ ಸುವುದಕಲ್ಲಿ ದಕ್ಷಕನಾಗಿರುವುದಿಂದೀಭ್ರಮರವಂ ನಿವಾರಿಸುವುದಕ್ಕೆ ನೀನೇ ಸಿನ ರ್ಥನಾಗುವೆ ಎನಲು; ರಾಯನು, ಯುಕ್ತವೇ ಸರಿಯೆಂದು, ಆ ಭ್ರಮರವಂ ಕು ತು,. (( ಎಳ್ಳೆ ಕುಸುಮಲತಾಯತಿಥಿಯಾದ ಭ್ರಮರವೇ, ನೀನು ವ್ಯರ್ಥವಾಗಿ ಈ ಶಕುಂತ ಲೆಯ ಸಮೀಪದಲ್ಲಿ ಸುತ್ತಿ ಆಯಾಸವಂ ಪೊದುತ್ತಿರುವೆ. ಮತ್ತು ಪತಿವ್ರತೆಯಾಗಿ ನಿನ್ನಲ್ಲಿಯೇ ಅತಿ ಪ್ರೇಮಶಾಲಿಯಾದ ಹೆಣ್ಣು ಭ್ರಮರವು ಅಧಿಕ ಕ್ಷು ದ್ವಾಧಾತುರ ವಾದರೂ ನಿನ್ನ ಬಿಟ್ಟು ಮಕರಂದವಾನವಂ ಗೆಯ್ಯದೆ ಇರುವುದು; ಅಲ್ಲಿಗೆ ಪೋಗ ದ ಇಲ್ಲಿ ಏಕೆ ಭ್ರಮಿಸುತ್ತಿರುವೆ ?” ಎಂದು ನುಡಿಯಲು ; ವಿದೂಷಕನು- ಅಯ್ಯಾ ರಾಯನೇ, ಈ ಭ್ರಮರವು ಉತ್ಪತ್ತಿಸಿದ್ದ ಮಾಗಿ ವಕ್ರ ಜಾತಿಯಾದ್ದ ಅಂದ, ಯುಕ್ತವಾಕ್ಯವಂ ಪೇಳಲು ಕೇಳುವುದೆ ??? 19 ...