ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೪೯ ಧಾನಚಿತ್ತರಾಗಿ ಪರಾಂಬರಿಸುವಂತೆ ವಿಜ್ಞಾಪನೆಯಂ ಗೆಯ್ದಿರುವೆನು' ಎಂದು ಬಿನ್ನೆ ಸಲು; ಆ ರಾಯನು ಅವಳು ತಂದ ಪತ್ರಿಕೆಯ ಕರದಿಂದ ತೆಗೆದುಕೊಂಡು ಓದಿ, «« ಸಮುದ್ರವ್ಯಾಪಾರದಿಂ ಸಂಪಾದಿಸಿದ ದ್ರವ್ಯ ಸಮೂಹವುಳ್ಳ ಧನಮಿತ್ರನೆಂಬ ವರ್ತಕನು ಅನೇಕ ಹಡಗುಗಳು ಸಮುದ್ರದಲ್ಲಿ ಮುಳುಗಿಪೋದವೆಂಬ ವ್ಯಸನದಿಂದ ಮರಣವಂ ಪೊಂದಿರುವನು. ಅವನು ಆ ಪುತ್ರನಾಗಿ ದೀನನಾಗಿರ್ದನಾದ ಕಂದ ವನ ಸಮಸ್ತ ದ್ರವ್ಯ ಸಮೂಹವು ದೊರೆಗಳಿಗೆ ಸೇರಬೇಕಾಗಿ ಇರುವುದು' ಎಂದು ಬರೆದಿರುವುದನ್ನೋದಿ, 1 ಲೋಕದಲ್ಲಿ ಮಕ್ಕಳಿಲ್ಲದ ಭಾಗ್ಯವು ವ್ಯರ್ಥ ಮಾದು ದೆಂದು ನುಡಿದು, . ಎಲೆ ದ್ವಾರಪಾಲಕಿಯೇ, ಆ ಧನಮಿತ್ರನೆಂಬ ವರ್ತಕನು ಬಹು ದ್ರವ್ಯವುಳ್ಳವನಾದ್ದಂ ಬಹುಪತ್ನಿ ಯರುಳ್ಳವನಾಗಿರಬಹುದು. ನೀನು ಪೋಗಿ ಅವ ನ ಹೆಂಡತಿಯರಲ್ಲಿ ಯಾವಳಾದಾಗ ಗರ್ಭಿಣಿಯಾಗಿರುವಳೇ ಎಂದು ವಿಚಾರಣೆ ಯಂ ಮಾಡಿ ವಿಜ್ಞಾಪನೆಯಂ ಗೆಯ್ದೆ ಯಾದರೆ, ಮಂತ್ರಿ ಬರೆದಿರುವ ಪತ್ರಿಕೆಗೆ ಪ್ರತ್ಯು ತರವನ್ನೀಯುವೆನು ಎಂದು ಅಪ್ಪಣೆಯನ್ನೀಯಲು ; ಆ ದ್ವಾರಪಾಲಕಿಯು ಹೇಗೆ ಅಪ್ಪಣೆಯಾಗುವುದೋ ಆ ಪ್ರಕಾರಕ್ಕೆ ನಡೆದುಕೊಳ್ಳುವೆನು” ಎಂದು ನುಡಿದು, ಹಿಂದಿರುಗಿ ಬಂದು, ಮಂತ್ರಿಯ ಸಮಾ ಪವಂ ಸೇರಿ, ಆ ವೃತ್ತಾಂತವಂ ವಿಚಾರಣೆಯಂ ಗೆಯು ರಾಯನ ಸಮಾಜಕ್ಕೆ ಬಂದು, ಎಲೈ ಸ್ವಾಮಿಯೇ, ಆತನ ಮಿತ್ರನ ಪತ್ನಿ ಯೊರ್ವಳು ಗರ್ಭವಾಗಿ ಪುಂಸವನಕರ್ಮವು ನಡೆದಿರುವುದು ಎಂದು ವಿಜ್ಞಾಪಿಸಲು ; ಆ ಕಾಯನು ಎಲೆ ದ್ವಾರಪಾಲಕಿಯೇ, ಗರ್ಭದಲ್ಲಿರುವ ಶಿಶುವಾದರೂ ತಂದೆಯ ದ್ರವ್ಯವನ್ನ ನುಭವಿಸುವುದಕ್ಕೆ ಬಾಧ್ಯನಾಗುವನೆಂದು ಎನ್ನ ಅಪ್ಪಣೆಯಂ ಮಂತ್ರಿಗೆ ಪೇಳುವುದು” ಎಂದು ನುಡಿಯಲು; ಆ ದ್ವಾರಪಾಲಕಿಯು-ಅಪ್ಪಣೆಯಾದಂತೆ ನಡೆದುಕೊಳ್ಳುವೆನು.” ಎಂ ದು ಮಂತ್ರಿಯ ಸಮಾಪಕ್ಕೆ ಪೋಗುತ್ತಿರಲು ; ಆ ರಾಯನು ಅವಳಂ ಕರೆದು ಎಲೆ ಸ್ತ್ರೀಯೇ, ಆ ಧನಪಾಲನಿಗೆ ಮಕ್ಕ ಳಿರುವರೊ ಇಲ್ಲವೊ ಎಂಬ ವಿಚಾರಣೆಯಂ ಗೈದುದ೦ಪ್ರಯೋಜನವಿಲ್ಲ. ಆದರೂ ಎನ್ನ ರಾಜ್ಯದಲ್ಲಿ ಯಾವಯಾವ ಪ್ರಜೆಗಳು ಮಕ್ಕಳು ಅಣ್ಣ ತಮ್ಮಂದಿರು ಮೊದ ಲಾದ ಬಂಧುಗಳಿ೦ ನಿಯುಕ್ತರಾಗಿರುವರೋ ಪಾಪಕಾರ್ಯ ಒಂದು ಹೊತ್ತು ಮಿಕ್ಕ ಕಾರ್ಯoಗಳಲ್ಲಿ ಅವರುಗಳಿಗೆ ದುಷ್ಯಂತರಾಯನೇ ಮಗನಾಗಿ, ತಂದೆ