ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ -ಕರ್ಣಾಟಕ ಕಾವ್ಯಕಲಾನಿಧಿ ನೀನು ಶೀಘ್ರವಾಗಿ ನಿನ್ನ ಧರ್ಮ ಪತ್ನಿಯಾದ ಶಕುಂತಲೆಯಂ ಕೂಡಿ ಸಂತುಷ್ಟ ನಾಗೆಂದು ಹೇಳಿದರೆಂಬ ವಾರ್ತೆಯಂ ಕೇಳಿರ್ದೆನು. ಆ ವಾರ್ತೆಯು ಸ್ಮರಣೆಗೆ ಬಂದಿರುವುದು. ಈ ರಾಯನು ಎರಹಾತುರನಾಗಿ ನಾನಾವಿಧಾವಸ್ಥೆಗಳಂ ಪೋಂ ದುವುದನ್ನಾಶಕುಂತಲೆಗೆ ಪೇಳಿ, ಅವಳಂ ಸಂತಸಂಗೊಳಿಸುವೆನು. ಇನ್ನು ಕಾಲ ವಿಳಂಬನವಂ ಮಾಡುವುದು ಯುಕ್ತವಲ್ಲ” ಎಂದು ವಿಮಾನಾರೂಢಳಾಗಿ ಗಗನ ಮಾರ್ಗವಂ ಕುತು ಹೊಗಲು; ಇತ್ತಲು ವಿದೂಷಕನು ಮೇಘಪ್ರತಿಜೃಂದವೆಂಬ ಉಪ್ಪರಿಗೆಯಲ್ಲಿ ಭಾವ ಚಿತ್ರದ ಪಟವಂ ಪಿಡಿದು ಇರುತ್ತಿರಲು; ಇಂದ್ರನು ಸ್ವರ್ಗವನ್ನಾಕ್ರಮಿಸಿ ಯುದ್ಧವಂ ಗೆಯ್ಯುತ್ತಿರುವ ರಾಕ್ಷಸರಂ ನಿಗ್ರಹಿಸುವುದಕ್ಕೋಸುಗ ಮಾತಲಿ ಎಂಬ ಸಾರಥಿಗೆ-ಭೂಲೋಕಕ್ಕೆ ರಥವಂ ತೆಗೆದು ಕೊಂಡು ಪೋಗಿ ಶೂರಾಗ್ರೇಸರನಾದ ದುಷ್ಯಂತರಾಯನಂ ಸ್ವರ್ಗಕ್ಕೆ ಕರೆದು ಕೊಂಡುಬರುವುದೆಂದು ಅಪ್ಪಣೆಯನ್ನೀಯಲಾಮಾತಲಿಯು ರತ್ನ ಮಯವಾದ ರಥಮಂ ತೆಗೆದುಕೊಂಡು ಬರುತ್ತಾ ಪ್ರಮದಾನದ ಸಮೀಪದಲ್ಲಿರುವ ಉಪ್ಪರಿಗೆ ಯಲ್ಲಿ ಒಬ್ಬನೇ ಇರ್ದ ವಿದೂಷಕನಂ ಕಂಡು ಇವನಂ ಎನೋದವಂ ಗೆಯ್ಯಬೇ ಕೆಂದು ತಿರಸ್ಕರಣೀವಿದ್ಯದಿಂದ ರಥವಂ ಮಹಗೆಯು ತಾನು ಕಾಣದಂತೆ ಬಂದು ಆ ವಿದೂಷಕನ ಕತ್ತಂ ಪಿಡಿದು ನೋಯಿಸಲು ; ವಿದೂಷಕನು ಭಯಭ್ರಾಂತನಾಗಿ « ಇದೇನೋ ಒಂದು ಪಿಶಾಚವೋ ಅಲ್ಲವಾದಲ್ಲಿ ರಾಕ್ಷಸನೋ, ಯಾರೋ ಎನ್ನ ಕೊಲ್ಲುವರು ಸಂರಕ್ಷಿಸು, ಸರ ಸು!” ಎಂದು ಘೋರವಾಗಿ ರಾಯನಂ ಕೂಗಲು; ರಾಯನು ಮೂರ್ಛದಿಳಿದು ಆ ಶಬ್ದವನ್ನು ಕಿವಿಗೊಟ್ಟು ಕೇಳಿ- ಎಲೆ ವೇತ್ರವತಿಯೇ, ಈ ದೀನಸ್ವರವು ವಿದೂಷಕನದಾಗಿ ತೋಯುವುದು??” ಎನಲಾ ದ್ವಾರಪಾಲಕಿಯು ಭಯಾನ್ವಿತಳಾಗಿ,- ಎಲೈ ಸ್ವಾಮಿಯೇ, ನಿನ್ನ ಮಿತ್ರನಾದ ಮಾಂಡವ್ಯನು ಯಾವನಿಂದಲೋ ಕಾತಿಯಂ ಹೊಂದಿದಂತೆ ಕೂಗುತ್ತಿರುವನು ) ಎನ್ನ ಲಾರಾಯನು- ಎಲೆ ಸ್ತ್ರೀಯೇ, ಯಾವನಿಂದ ಮಾಂಡವ್ಯನು ಆರ್ತಸ್ವರೂ ಪವುಳ್ಳವನಾದನು?” ಎನ್ನಲಾಯು -(ಎಲೈ ಸ್ವಾಮಿಯೇ ಅದೃಶ್ಯರೂಪ ವಂ ತಾಳಿ ಒಂದಾನೊಂದು ಪಿಶಾಚವು ಆ ಉಪ್ಪರಿಗೆಯನ್ನೇ ವಿದೂಷಕನಂ ಬಾಧಿ ಸುವಂತೆ ತೋರುವುದು ” ಎನ್ನಲಾ ರಾಯನ-4 ಎಲೆ ಸ್ತ್ರೀಯೇ, ಎನ್ನ ಮನೆ ಯನ್ನು ಪಿಶಾಚಗಳು ಎಂತು ಪ್ರವೇಶವಂ ಗೆಯ್ಯುವುದು ?” ಎಂದು ನುಡಿದು,