ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೫೩ 1ಹಾಗಲ್ಲದಿದ್ದರೆ ಲೋಕದಲ್ಲಿ ಜನಗಳು ಪ್ರತಿದಿನದಲ್ಲಿ ನಡೆಯುವ ವ್ಯಾಪಾರ ರಂಗಳ ಅಜ್ಞಾನದಿಂದ ತಿಳಿಯದೆ ಇರುವಲ್ಲಿ ಪ್ರಾಣಿಗಳಲ್ಲಿ ಯಾವನು ಯಾವ ಮಾ ರ್ಗದಲ್ಲಿ ಸಂಚರಿಸುತ್ತಿರುವನೋ ತಿಳಿಯುವುದಕ್ಕಾಗಲಾದು. ಅದಕ್°ಂದ ಪಿಶಾ ಚಂಗಳು ಎನ್ನ ಉಪ್ಪರಿಗೆಯಲ್ಲಿ ಸೇರಿರ್ದರೂ ಇರಬಹುದು.” ಎಂದು ನುಡಿ ಯುತ್ತಿರಲು; - ವಿದೂಷಕನು_“ನಾನು ರಕ್ಷಕರಿಲ್ಲದೆ ಕಷ್ಟಪಡುವೆನು' ಎಂದು ಮರಳಿ ಕೂಗಲು; ರಾಯನು ತಾನಿರ್ದ ಮಾಧವೀಮಂಟಪವಂ ಬಿಟ್ಟು ಕೆಲವುದರ ಬಂದು, ct ಎಲೈ ಮಿತ್ರನಾದ ಮಾಂಡವ್ಯನೇ, ಭಯವಂ ಪೊಂದಬೇಡ' ಎಂದು ಕೂಗಲು; ವಿದೂಷಕನು-ಎಲೈ ಮಹಾರಾಯನೇ, ಯಾವನೋ ಒಬ್ಬನು ಎನ್ನ ಕತ್ತನ್ನು ಹಿಂದಕ್ಕೆ ಎಳೆದು ಕಬ್ಬು ಮುರಿಯುವಂತೆ ತೀಕ್ಷ್ಯವಾಗಿ ಮುರಿಯುತ್ತ ಲಿರುವನಾದ್ದಿ೦ದ ನಾನು ಭಯವಂ ಪೊಂದದೆ ಹೇಗೆ ಇರುವುದಕ್ಕೆ ಆಗುವುದು?' ಎಂದು ಕೂಗಲು; ರಾಯನು ನಾಲ್ಕು ದಿಕ್ಕಂ ನೋಡಿ ಚಂಡಮಾದ ಕೋದಂಡಮಂ ಪಿಡಿದು ಆ ಧನುಸ್ಸಿನಲ್ಲಿ ತೀಕ್ಷ್ಯಮಾದ ಬಾಣಸಂಧಾನವಂ ಗೆಯ್ಯುತ್ತಿರಲು; ಅಷ್ಟಲ್ಲೇ ಸಾರಥಿಯು ಎಲೈ ವಿದೂಷಕನೇ, ನಿನ್ನ ಕತ್ತಿನಲ್ಲಿರುವ ಬಿಸಿಯ ರಕ್ತವನ್ನು ಅಪೇಕ್ಷಿಸುತ್ತಿರುವ ಈ ನಾನು ವ್ಯಾಘ್ರವು ಓಡಿಹೋಗುತ್ತಿ ರುವ ಗೋವಂ ಪಿಡಿದು ಸಂಹರಿಸುವಂತೆ ಕೊಲ್ಲುವೆನು. ಸಮಸ್ತ ದೀನರಾದವರ ಭಯವಂ ಪರಿಹರಿಸುವುದಕ್ಕೋಸುಗ ಪಿಡಿದು ಇರುವ ಧನುಸ್ಸಿನಿಂ ಯುಕ್ತನಾದ ದುಷ್ಯಂತರಾಯನು ಈಗ ನಿನಗೆ ಸಂರಕ್ಷಕನಾಗಲಿ! ” ಎಂದು ಘೋರವಾಗಿ ಕೂಗಿದ ಶಬ್ದ ವಂ ರಾಯಂ ಕೇಳಿ, ಯಾವನೋ ಒಬ್ಬ ರಾಕ್ಷಸನಾಗಿರಬಹುದು' ಎಂದು ಮನದಂದು, ಎಲೆ ಸ್ತ್ರೀಯೇ, ಎನ್ನ ನಾಮವಂ ತೆಗೆದುಕೊಂಡು ಯಾವ ನೋ ರಾಕ್ಷಸನು ಕೂಗುವನು' ಎಂದು ನುಡಿದು, ಅಧಿಕರೋಷದಿಂ ಯುಕ್ತ ನಾಗಿ- ಎಲೈ ರಾಕ್ಷಸಾಧಮನೇ, ನಿನ್ನಂ ದಿಗ್ಟಲಿಯನ್ನೀಯುವೆನು' ಎಂದು ಧನುಸ್ಸಿನಲ್ಲಿ ಬಾಣವನ್ನು ಹೂಡಿ, ಎಲೆ ಸ್ತ್ರೀಯೇ, ಆ ಉಪ್ಪರಿಗೆಯಂ ಕುತು ನಡೆ ಎಂದು ನುಡಿಯಲವಳು ಆ ಉಪ್ಪರಿಗೆಯ ಸೋಪಾನಮಾರ್ಗವನ್ನನುಸರಿಸಿ 'ರಾಯನಂ ಕರೆದುಕೊಂಡು ಬರಲು; 20 S