ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಕುಂತಲನಾಟಕ ನವೀನಟೇಕೆ, ೧೫೫ ಪಶುವಂ ಕೊಲ್ಲುವಂತೆ ಎನ್ನಂ ಸಂಹರಿಸುತಿರ್ದ ಇವನಂ ಕುಸಿತು, “ ಇಂದ್ರಸಾರ ಥಿಯೇ ಕುಶಲವೆ ' ಯೆಂದು ಕೇಳುವ ನಿನ್ನ ವಾಕ್ಯವು ಬಹು ಚೆನ್ನಾದುದು ! ?? ಎಂದು ನುಡಿಯಲು ; ಮಾತಲಿಯು- ಎಲೈ ಮಹಾರಾಯನೇ, ತ್ರಿಲೋಕಾಧಿಪತಿಯಾದ ದೇವೇಂದ್ರನು ನಿನ್ನ ಬಳಿಗೆ ನನ್ನಲ್ಲಿ ಕಳುಹಿಸಿ ಇರುವನು. ಏಕೆಂದರೆ:-ಕಾಲನೇ ಮಿಯ ಪುತ್ರರಾದ ಮಹಾ ಪರಾಕ್ರಮಶಾಲಿಗಳಾದ ರಾಕ್ಷಸರಿರುವರು ” ಎನಲಾ ರಾಯನು, ೧೮ ಆ ರಾಕ್ಷಸರು ಮಹಾ ಬಲಿಷ್ಠರು! ಅಂತಹ ಪುರವಾದ ಸ್ವರ್ಗವನ್ನೂ ಆಕ್ರಮಿಸಿ ಬಾಧಿಸುತ್ತಿರುವರೆಂದು ದೇವಋಷಿಯಾದ ನಾರದರ ವಚನದಿಂ ತಿಳಿದಿ ರುವೆನು ಎನಲು; ಮಾತಲಿಯು- ಎಲೈ ಸ್ವಾಮಿಯೇ, ನಿನ್ನ ಸ್ನೇಹಿತನಾದ ಇಂದ್ರನ ಆ ಕಾಲನೇಮಿಪುತ್ರರಾದ ರಾಕ್ಷಸರೊಡನೆ ಯಥಾರ್ಥವಾಗಿ ರಣಭೂಮಿಯಂ ಕು' ತು ಪೋಗಿ ಅಲ್ಲಿ ಈ ರಾಕ್ಷಸರ ಸಂಹರಿಸುವುದಕ್ಕೆ ಯೋಗ್ಯನಾಗಿರುವನು ದುಷ್ಯಂತರಾಯನೇ ಸರಿ ಎಂದು ನಿನ್ನ ಸ್ಮರಿಸಿ, ಎನ್ನ ಇಲ್ಲಿಗೆ ಕಳುಹಿಸಿರುವನು, ಆದರೂ ಯಾವ ಅಂಧಕಾರವು ಸೂರ್ಯನ ತೇಜಸ್ಸಿನಿಂ ಪೋಗುವುದಕ್ಕೆ ಅಸಾಧ್ಯ ಮಾಗಿರುವುದೋ ಆ ಕತ್ತಲೆಯಂ ಚಂದ್ರನೆಂತು ಪರಿಹರಿಸುವನೋ ತಿಳಿಯದು. ತ್ರಿಲೋಕಾಧಿಪತಿಯಾದ ಇಂದ್ರನು ಸಂಹರಿಸಲಾದ ರಾಕ್ಷಸರಂ ನೀನೆಂತು ಸಂಹ ರಿಸುವೆಯೋ ಕಾಣೆನು. ಪೂಜ್ಯನಾದ ನೀನು ಧನುರ್ಬಾಣಬತ್ತಳಿಕೆಗಳಂ ಧರಿಸಿ ರತ್ನಮಯವಾದ ಈ ಇಂದ್ರ ರಥವನ್ನಾ ರೋಹಣವಂ ಗೆಯ್ದು ಸ್ವರ್ಗಕ್ಕೆ ಬಿಜಯಂ ಗೆಯ್ಯಬಹುದು ” ಎಂದು ನುಡಿಯಲು ; ರಾಯನು ಎಲೈ ಮಾತಲಿಯೇ, ಪೂಜ್ಯನಾದ ಇಂದ್ರನ ಆಜ್ಜೆಯು ಎಂತಾಗಿರುವುದೋ ಆಪ್ರಕಾರಕ್ಕೆ ನಡೆದುಕೊಳ್ಳುವೆನು” ಎಂದು ನುಡಿದು, 1 ಈ ವಿದೂಷಕನು ಏನು ಕಾರಣಕ್ಕೋಸುಗ ವ್ಯಥೆಪಡಿಸಿದೆ ? ಎನ್ನಲು; ಮಾತಲಿಯು ಅಯ್ಯಾ ಮಹಾರಾಜನೇ, ಆ ವೃತ್ತಾಂತವಂ ಪೇಳು ವೆನು ಕೇಳು, ಪ್ರಮದವನಮಧ್ಯದಲ್ಲಿ ಅತ್ಯಂತ ಚಿಂತಾನ್ವಿತನಾಗಿ ಕಾಂತಿಹೀನನಾಗಿ ರುವ ಪೂಜ್ಯನಾದ ನಿನ್ನ೦ ಕಂಡು-ಏನು ಕಾರಣದಿಂದಲೋ ಈ ಮಹಾರಾಯನು ವ್ಯಸನಾತುರನಾಗಿರುವನು, ಇವನಿಗೆ ವ್ಯಥೆಯಂ ಪುಟ್ಟಿಸಲು ಆ ಚಿಂತೆಯು ಪೋಗಿ ಕ್ರೋಧವುಂಟಾಗುವುದೆಂದು ಯೋಚಿಸಿ ಈ ವಿದೂಷಕನಂ ವ್ಯಥೆಪಡಿಸಿದನು. ಆದರೂ ಲೋಕದಲ್ಲಿ ಉರಿಯುತಿರ್ದ ಅಗ್ನಿಯಂ ಕಡ್ಡಿಯಿಂದ ಕೆದಕಲು ಪ್ರಜ್ವಲಿಸುತ್ತಿರು