ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಕರ್ಣಾಟಕ ಕಾವ್ಯಕಲಾನಿಧಿವುದು. ಸರ್ಪವು ವ್ಯಥೆಯಂ ಹೊಂದಿಸಲು ಹೆಡೆಯನ್ನೆ ಕಚ್ಚುವುದಕ್ಕೆ ಬರುವು ದು, ಸಮಸ್ತ ಜನರು ಒಬ್ಬನಿಂ ಕ್ಲೋಭೆಯುಂಟಾದ ಕಾಲದಲ್ಲಿ ತಮ್ಮ ತಮ್ಮ ಮಹಾ ತೈಯಂ ತೋಜ' ಸುತ್ತಿರುವರಾದ್ದಲಿಂ ನಿನಗೆ ಕೋಪವುಂಟಾದಕಾಲದಲ್ಲಿ ಏನು ಕಾರ್ಯವಂ ಗೆಯ್ಯುವೆಯೇ ನೋಡು ವೆನೆಂದು ಈರೀತಿಯಿಂ ಗೆಯ್ದನು ” ಎಂದು ನುಡಿಯಲು; " ರಾಯನು'ಎಲೈ ಮಾತಲಿಯೇ, ಚೆನ್ನಾಗಿ ಮಾಡಿದೆ !' ಎಂದು ನಸು ನಗುತ, ವಿದೂಷಕನಂ ಏಕಾಂತಕ್ಕೆ ಕರೆದು, ಎಲೈ ವಿದೂಷಕನೇ ತ್ರಿಲೋಕಾಧಿ ಪತಿಯಾದ ಇಂದ್ರನ ಆಜ್ಞೆಯು ಮಿಾಕತಕ್ಕದ್ದಲ್ಲವಾಗಿರುವುದಿ೦ದ ಈ ವೃತ್ತಾಂ ತವಂ ಮಂತ್ರಿಯಾದ ಆರ್ ಪಿಶುನಂಗೆ ಹೇಳುವುದಲ್ಲದೆ ಇನ್ನು ಕೆಲವು ವಾಕ್ಯವು ಪೇಳತಕ್ಕುದಿರುವುದು. ಏನೆಂದರೆ ನಾನು ಧನುರ್ಧಾರಿಯಾಗಿ ರಾಕ್ಷಸ ಸಂಹಾರ ಕ್ರೋಸುಗ ಸ್ವರ್ಗಕ್ಕೆ ಪೋಗುವೆನಾದ್ದ°೦ ನಾನು ಬರುವವರೆಗೂ ಸಮಸ್ತ ಪ್ರಜೆ ಗಳಂ ಧರ್ಮದಿಂ ಸಲಹುತ್ತಿರುವುದೆಂದು ಎನ್ನಾಜ್ಞೆಯಂ ಪೇಳುವುದು ' ಎಂದು ಅಪ್ಪಣೆಯನ್ನೀಯಲು; ವಿದೂಷಕನು ನಿನ್ನ ಆಜ್ಞೆಯಾದಂತೆ ನಡೆದುಕೊಳ್ಳುವೆನು ” ಎಂದು ಪೋಗಲು; ಮಾತಲಿಯು ರಥವಂ ತಂದು ರಾಯನ ಮುಂಭಾಗದಲ್ಲಿರಿಸಲಾರಾಯನು ಧನುರ್ಬಾಣವಂ ಧರಿಸಿ ಆ ಇಂದ್ರರಥಾರೋಹಣಂವಂ ಗೆಯ್ಯುವುದಕ್ಕೆ ಉದ್ಯುಕ್ತ ನಾದನು. ಎಂಬಲ್ಲಿಗೆ ಕೃಷ್ಣರಾಜಕ೦ಠೀರವರು ರಚಿಸಿದ ಕೃಷ್ಣರಾಜವಾಣೀವಿಲಾಸರತ್ನಾಕರವೆಂಬ ಶಾಕುಂತಲನಾಟಕ ನವೀ: ಟೀಕಿನಲ್ಲಿ ದುಷ್ಯಂತರಾಯನು ಮಾತಲಿ ತಂದ ಇಂದ್ರರಥಾರೋಹಣವಂ ಗೆಯು ಸ್ವರ್ಗಕ್ಕೆ ಪೋಗಲ್ಲುದ್ಯುಕ್ತನಾದನೆಂಬ ಚತುರ್ಥಕಲ್ಲೋಲದಲ್ಲಿ ತೃತೀಯ ತರಂಗಂ ಸಂಪೂರ್ಣ೦. ೪