ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಕರ್ಣಾಟಕ ಕಾವ್ಯಕಲಾನಿಧಿ - ಗೀರ್ವಾಣರು ಆ ಪಟ್ಟಣದ ಸೌಂದರ್ಯವಂ ನೋಡಲೋಸುಗ ಅನಿಮಿಷ ತೈವಂ ಪಡೆದುದು ಸಾಲದೆ ಈಗಲೂ ಸಹಸ್ರನಯನನ ಪ್ರಾರ್ಥನೆಯಂ ಮಾಡಿ ಬಳಲುತ್ತಿರುವರು. ರಾಹು ಕೇತುಗಳು ಗಗನವಂ ವ್ಯಾಪಿಸಿರುವ ಆ ಪುರದ ಚಂದ್ರಶಾಲೆಗಳಲ್ಲಿ ಕಟ್ಟಿರುವ ಗುಂಡುಗನ್ನಡಿಗಳಂ ನೋಡಿ ಸೂರ್ಯಚಂದ್ರರೆಂಬ ಭ್ರಾಂತಿಯಿಂದ ಪರ್ವಕಾಲಂಗಳಲ್ಲಿ ಅವರ ತುಡುಕಲಿಚ್ಛಿಸುತ್ತಿರುವರು. ಮತ್ತು ಪೋಷಿತಮಯರಂಗಳು ಆವುರದ ಉಪ್ಪರಿಗೆಗಳಲ್ಲಿ ಒತ್ತಿರುವ ಇಂದ್ರನೀ ಲಕಾಂತಿಪುಂಜವಂ ಅದರ ನಡುವೆ ಪಾದಸರ ಗಗ್ಗರ ಮೊದಲಾದ ಭೂಷಣಂಗಳ ಧ್ವನಿಯಿಂ ಕೂಡಿ ಮಿಂಚಿನ ಬಳ್ಳಿಗಳಂತೆ ಸಂಚರಿಸುವ ಚಂಚಲಾಕ್ಷಿಯರಂ ಅವರ ಮುಖಚಂದ್ರಕಾಂತಿಯಿಂ ಚಂದ್ರಕಾಂತಶಿಲೆಗಳಿಂ ಪೊರಮಡುವ ಜಲಬಿಂದು ಸಂದೋ ಹವಂ ಸಹ ಕಂಡು ವರ್ಷಾಕಾಲದ ಮೇಘೋದಯವಾಯಿತೆಂದು ಹರ್ಷಪರವಶಂಗ ಳಾಗಿ ಕೇಕಾಧ್ರನಿಯಂಗೆಯ್ಯುತ ಗ'ಗಳಂ ಕೆದ ಕತ್ತುಗಳನ್ನೆತ್ತಿ ಸುತ್ತಲೂ ನೋಡುತ ನಾಟ್ಯವಂ ಗೆಯ್ಯುತ್ತಿರುವುವು. ವತ್ರಂ ಆ ಪುರದ ಅಷ್ಟ ದಿಕ್ಕುಗಳಲ್ಲಿ ಬ್ರಾಹ್ಮಣಶ್ರೇಷ್ಠರುಗಳಿ೦ ವಿರಚಿಸಲ್ಪಟ್ಟ ರಾಜಸೂಯ ವಾಜಪೇಯ ಪೌಂಡೀರಕ ಮೊದಲಾದ ಯಜ್ಞಗಳ ಶಾಲೆಗಳಿ೦ ಪೊಮಡುವ ಧೂಮರಾಜಿಯು ಹವಿರ್ಭಾ ಗವ ಕೊಳ್ಳಲೋಸುಗ ಭೂಲೋಕಕ್ಕೆ ಬರುವ ಇಂದ್ರಾದಿ ದೇವಸಮುದಾಯಕ್ಕೆ ಇಂದ್ರನೀಲಸೋಪಾನವಂ ಗೈದಿರುವುದೋ ಎಂಬ ಶಂಕೆಯನ್ನುಂಟುಮಾಡುತ್ತ ಅಂಬರತಲವನ್ನವಲಂಬಿಸುತ್ತಿರಲದಂ ಕಂಡು ಚಾತಕಪಕ್ಷಿಗಳು ಮೇಘವೆಂಬ ಭ್ರಾಂತಿ ಯಿಂ ಚೆಂಬಿಡದೆ ಹಂಬಲಿಸುತ್ತ ಪೋಗಿ ಆ ಧೂಮ ಸೋಂಕಿದ ಅಂಬರದಲ್ಲಿರ್ದ ಸುರ ನಿತಂಬಿನಿಯರ ಕಂಬನಿಗಳಂ ಜಲಬಿಂದುಗಳೆಂದು ಪಾನವಂ ಗೈದು ಬೇಸkಧೆ ಆಸೆ ತೀರದೆ ಸಂಚರಿಸುತ್ತಿರುವುವು. ಮತ್ತು ಆಪುರದ ಲಕ್ಷ್ಮಿಯು ಧರಿಸಿದ ಒಡ್ಯಾಣವೋ ಎಂಬಂತೆ ವಿರಾಜಿಸುತ್ತಿರುವ ಅಗಳಿನಿಂದ, ಪುರದ ಸೌಭಾಗ್ಯವಂ ನೋಡುವೆನೆಂದು ಪಾತಾಳದಿಂ ಬಂದು ಶಿರವನ್ನೆತ್ತಿರುವ ಆದಿಶೇಷನ ಫಣೆಗಳೋ ಎಂಬಂತೆ ರಾಜಿ ಸುತ್ತಿರುವ ತನ್ನ ಮಯವಾದ ಕೋಟೆಯ ತೆನೆಗಳಿಂದಲೂ, ಸಾವಿರಾರು ಫಿರಂಗಿಗ ಳಿಂದ ಪರಿಶೋಭಿಸುತ್ತ ಒತ್ತಾಗಿ ಬಿಗಿದಿರುವ ವಜ್ರಶಿಲೆಗಳಿಂ ಬಿತ್ತರಂಗಳಾಗಿ ಉತ್ತ ಮಂಗಳಾದ ಅಗಣಿತವಾದ ಕೊತ್ತಲ೦ಗಳಿ೦ದಲೂ ಅಲಂಕೃತವಾಗಿರುವುದು. - ಆಪುರದ ಒಂದು ಸ್ಥಾನದಲ್ಲಿ ಅನೇಕರಾದ ರಾಜಪುತ್ರರು ಹಾರ ಕಂಕಣ ಕೇರೂರ ಮೊದಲಾದ ಆಭರಣಂಗಳಂ ಧರಿಸಿ, ಮದ್ದಾನೆಗಳ ಮಸ್ತಕಂಗಳಲ್ಲಿ ಕುಳಿತು, ಅಶ್ವಾರೋಹಣವಂ ಗೈದು, ಕೆಲವರು ರಥವನ್ನೇ ಜಯಂತನಂ ಒರೆ