ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಕರ್ಣಾಟಕ ಕಾವ್ಯಕಲಾನಿಧಿವೃಕ್ಷಂಗಳ ನೆರಳುಗಳಲ್ಲಿ ಕುಳಿತು ವೀಣೆಗಳಂ ಕರದಲ್ಲಿ ಪಿಡಿದು ತಂತ್ರೀಸ್ವರದೊಡನೆ ತಮ್ಮ ಕಂಠನಾದವಂ ಜತೆಗೊಳಿಸಿ ಕಿವಿಗಿಂಪಾಗಿ ಮಾಡುವ ಸೊಂಪುವ ಗಾನಸ್ವರವನ್ನನುರಾಗದಿಂ ಕೇಳುತ್ತ-ನಂದನವನದಲ್ಲಿರುವ ಸುಂದರಂಗಳಾದ ಕ್ರೀಡಾ ಶೈಲ, ಲತಾವಿತಾನ, ಮಾಧವೀಮಂಟಪ ಮೊದಲಾದ ರಮ್ಯಸ್ಥಳಗಳಲ್ಲಿ ಕುಳಿತು ಸಿಹಿಮಾವಿನ ಹಣ್ಣುಗಳಂ ಕೊಕ್ಕಿನಿಂ ಕುಕ್ಕಿ ತನಿರಸವಂ ಪಾನವಂಗೆಯು ಧ್ವನಿಗೆ ಯ್ಯುತ್ತಿರುವ ಶುಕ, ಪಿಕ, ಮಯೂರ ಮೊದಲಾದ ಪಕ್ಷಿಗಳ ಕಲರವವನ್ನಾ ಕರ್ಣಿ ಸುತ್ತ-ಮುಂಭಾಗದಲ್ಲಿ ಸಮಸ್ತ ಮಂಗಳಗಳಿಗೆ ಮನೆಯಾಗಿ, ಕಂಗಳಿಗೆ ಕಾ೦ತಿರಾಶಿಯಾಗಿ, ಜನಗಳೆಶ್ವರ್ಯಕ್ಕೆ ವಾಸಭೂಮಿಯಾಗಿ, ಜಯಲಕ್ಷ್ಮಿಗೆ ನಾಟ್ಯಸ್ಥಾನವೆನಿಸಿ, ನವರತ್ನಂಗಳ ಕಾಂತಿಪುಂಜದಿಂ ಭಾಸ್ಕರನಂ ಭಂಗಿಸುತ್ತಿರುವ ದೇವಾಧಿಪತಿಯಾದ ಇಂದ್ರನ ವೈಜಯಂತವೆಂಬ ಪ್ರಾಸಾದವಂ ನೋಡುತ್ತ ವಸಿಷ್ಠ, ವಾಮದೇವ ಮೊದಲಾದ ಋಷಿ ಸಮಯದಿಂದಲೂ, ದೇವ ಯಕ್ಷ ಕಿನ್ನ ರ ಕಿಂಪುರುಷ ಮೊದಲಾದ ದೇವಯೋನಿಗಳಿಂದಲೂ, ವಾಜಪೇಯ, ರಾಜಸೂ ಯ ಮೊದಲಾದ ಯಜ್ಞವಿಧಾಯಕರಾದ ಕರ್ಮದೇವತೆಗಳಿಂದಲೂ, ಅಗ್ನಿ ಯಮ ಮೊದಲಾದ ದಿಕ್ಕಾಲಕರುಗಳಿಂದಲೂ, ರಂಭೆ ಊರ್ವಸಿ ಮೊದಲಾದ ದೇವ ವಾರಕಾ೦ತೆಯರಿಂದಲೂ, ನಾನಾ ಪ್ರಕಾರವಾದ ಜನಸಂದೋಹದಿಂದಲೂ, ಸುಂದರವಾಗಿರುವ ಸುಧರ್ಮೆಯೆಂಬ ಸಭೆಯಂ ಪ್ರವೇಶಿಸಿ-ದಿವ್ಯರತ್ನ ಸಿಂಹಾ ಸನಾರೂಢನಾಗಿರುವ ದೇವೇಂದ್ರನಂ ಕಂಡು ರಥದಿಂದಿಳಿದು ನಮಸ್ಕಾರವಂ ಗೆಯ್ಯಲು; ಆ ಯಿಂದ್ರನಾದುಷ್ಯಂತರಾಯನಂ ಆಲಿಂಗಿಸಿ, ಮೃದುಮಧುರೋಕ್ತಿಯಿಂ ಕುಶಲಪ್ರಶ್ನೆ ಯಂ ಗೆಯ್ಯು, ತಾನು ಕುಳ್ಳಿರುವ ಸಿಂಹಾಸನದ ಅರ್ಧಭಾಗದಲ್ಲಿ ರಾಯನಂ ಕುಳ್ಳಿರಿಸಿಕೊಂಡು, ಸ್ವಾಮಮಾತ್ಯ ಸುಹೃತ್ಕಶ ರಾಷ್ಟ್ರದುರ್ಗ ಬಲಂ ಗಳೆಂಬ ಸಪ್ತಾಂಗದ ಯೋಗಕ್ಷೇಮವಂ ಬೆಸಗೊಂಡು, ದುಷ್ಟರಾದ ಕಾಲನೇಮಿ ಪುತ್ರರುಗಳ ವೃತ್ತಾಂತವಂ ಪೇಳಲು; ಆ ರಾಯನು ಸಂತುಷ್ಟನಾಗಿ- ಎಲೈ ತ್ರಿಲೋಕಾಧಿಪತಿಯಾದ ಸ್ಯಾ ಮಿಯೇ, ನಿನ್ನ ಅನುಗ್ರಹದಿಂದ ಎನ್ನ ಸಮಸ್ತರಾಜ್ಯವು ಸುಭಿಕ್ಷವುಳುವಾಗಿರುವುದು, ಆದರೂ ಈಗ ಅಪ್ಪಣೆಯನ್ನಿತ್ತ ಕಾಲನೇಮಿಪುತ್ರರು ಮೊದಲಾದ ರಾಕ್ಷಸರ ಸಂಹ ರಿಸುವುದು ನಿಮ್ಮ ಅನುಗ್ರಹ ಶಕ್ತಿಯಲ್ಲಿದೆ ಎನ್ನಿಂದಾಗದು ” ಎಂದು ವಿನಯೋ ಕಿಗಳಂ ಪೇಳಲು;