ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಕರ್ಣಾಟಕ ಕಾವ್ಯಕಲಾನಿಧಿ ಆ ಪುತ್ರನು ಉದಯಾದಿತ್ಯನಂತೆ ದಿನಕ್ರಮವಾಗಿ ವೃದ್ದಿ ಯಂ ಪೊಂದಿ ಸಿಂ ಹದ ಮಗಳಂ ಪಿಡಿದು ಮರ್ದಿಸುತ್ತ,ಮದ್ದಾನೆಗಳ ಸೊಂಡಿಲಂ ಸಿಡಿದು ಕೀಳು ರಾಕ್ಷಸರುಗಳಂ ಪಿಡಿದು ಆಶ್ರಮವೃಕ್ಷಗಳಿಗೆ ಬಂಧಿಸುತ, ಬಾಲಕ್ರೀಡೆಯಂ ಗೆಯ್ಯುತ್ತಿರಲು; “ಆಶ್ರಮವಾಸಿಗಳಾದ ಋಷಿಗಳೆಲ್ಲರೂ ಆ ಶಿಶುವನ್ನೋಡಿ ಅತ್ಯಾಶ್ಚರಯು ಕರಾಗಿ ಆ ಬಾಲಕನಿಗೆ ಸರ್ವವಂ ಸಂಹರಿಸುವುದ೬೦ ಸರ್ವದಮನನೆಂದು ನಾನು ಧೇಯವನ್ನಿಟ್ಟು ಸಂತೋಷಯುಕ್ತರಾಗಿ ಸಲಹುತ್ತಿರಲು; ಸಾನುಮತಿಯು ಪ್ರತಿಷ್ಟಾನಪಟ್ಟಣದ ಪ್ರಮನವನದಿಂ ಬಂದು ಆ ವನದಲ್ಲಿ ಆ ದುಷ್ಯಂತರಾಯನು ಶಕುಂತಲೆಯಂ ಸ್ಮರಿಸಿಕೊಂಡು ವಿರಹಾತುರನಾಗಿ ವ್ಯಥೆ ಯಂ ಪೊಂದುತ್ತಿರುವ ರೀತಿಯೆಲ್ಲ ವಂ ವಿಸ್ತಾರವಾಗಿ ಶಕುಂತಲೆಗೆ ವಿಸ್ತರಿಸಲಾ ಶಕುಂತಳೆಯು ಆನಂದಸಾಗರದೊಳ್ ಮುಳುಗಿ ಅದೃಷ್ಟ ದಿಂದ ರಾಯಂಗೆ ಎನ್ನ ಸ್ಮರಣೆಯು ಪುಟ್ಟಿತೆಂದು ತನ್ನ ಮನದಲ್ಲಿ ತಿಳಿದು ಬಾಲಕನ ಬಹುಳಮಾದ ಚೇಷ್ಟೆ ಗಳಂ ನೋಡುತ್ತ ಸಂತೋಷ ಸಾಮ್ರಾಜ್ಯದಲ್ಲಿ ಇರುತ್ತಿರಲು: ಇತ್ತ ರಾಯನು ಭೂಲೋಕಾಭಿಮುಖನಾಗಿ ರಥವಂ ನಡೆಯಿಸಿಕೊಂಡು ಬರುವ ಮಾತಲಿಯಂ ಕು” ತು_66 ಎಲೈ ಇಂದ್ರಸಾರಥಿಯೇ, ಆ ತ್ರಿಪುರಾಧಿ ಪತಿಯಾದ ಇಂದ್ರನು ಅಪ್ಪಣೆಯನ್ನಿತ್ತಂತೆ ಸಮಸ್ತರಾಕ್ಷಸರಂ ಸಂಹರಿಸಿದೆನು ಆದರೂ ಅವನು ಮಾಡಿದ ಅತಿಶಯವಾದ ಬಹುಮಾನಕ್ಕೆ ಎನ್ನ ಶರೀರವು ಯೊ ಗ್ಯವಲ್ಲ ಎಂದು ನಿಶ್ಚಿಸುತ್ತಿರುವನು.” ಎನ್ನಲು: ಮಾತಲಿಯು ನಸುನಕ್ಕು, ಎಲೈ ಮಹಾರಾಜನೇ, ಮೊದಲು ಆ ಇಂದ್ರನು ಅತ್ಯಂತ ಪ್ರೀತಿಯಿಂದ ಸ್ವಲ್ಪ ಮಾಗಿ ಮಾಡಿದ ಮರ್ಯಾದೆಯಂ ನೀನು ಪರ್ವತಕ್ಕೆ ಸಮಾನವಾದುದೆಂದು ತಿಳಿಯುತ್ತಿರುವೆ. ಆ ಇಂದ್ರನು ನೀನು ಮಾ ಡಿದ ರಾಕ್ಷಸಸಂಹಾರ ಮೊದಲಾದ ಕಾರ್ಯದಲ್ಲಿ ಆಶ್ಚರ್ಯಯುಕ್ತನಾಗಿ, * ಆ ದುಷ್ಯಂತರಾಯಂಗೆ ಇಷ್ಟು ಬಹುಮಾನವಂ ಮಾಡಿದರೂ ಅವನು ಮಾಡಿದ ಕಾರ್ಯಕ್ಕೆ ಅನುಗುಣವಾಗಿ ಮರ್ಯಾದೆಯನ್ನು ಮಾಡಲಿಲ್ಲ' ಎಂದು ಎಣಿಸು ತಿರುವನು ” ಎಂದು ನುಡಿಯಲು ; ದುಷ್ಯಂತರಾಯನು- €ಎಲೈ ಮಾತಲಿಯೇ, ಅಂತು ನುಡಿಯದಿರು, ಆ ಇಂದ್ರನು ಸಮಸ್ತ ದೇವತೆಗಳಗಿದಿರಾಗಿ ಎನ್ನ೦ ತಾನು ಕುಳಿತಿರ್ದ ಸಿಂಹಾಸ ನದ ಅರ್ಧಭಾಗದಲ್ಲಿ ಕುಳ್ಳಿರಿಸಿ, ಕುಶಲಪ್ರಶ್ನೆಯಂ ಗೆಯ್ತು, ನಾನು ಬರುವ ಕಾಲದಲ್ಲಿ ಮಾಡಿದ ಬಹುಮಾನವು ಮನೋರಥದ ಎಲ್ಲೆ ಗಂಟು ಮೂರುವುದು,