ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೬೧ ಹೇಗೆಂದರೆ:-ಆಯಿ೦ದ್ರನು ಕೊಡುವೆನೆಂದು ಮನದಲ್ಲಿ ಪ್ರಾರ್ಥನೆಯಂ ಗೆಯ್ಯುತ್ತ ಸವಿಾಪಸ್ಥನಾದ ಜಯಂತನಂ ನೋಡಿ ನಸುನಗುತ್ತ, ತನ್ನ ವಕ್ಷಸ್ಪಳದ ಗಂಧದಿಂ ಗುತಾಗಿರುವ ತನ್ನ ಕತ್ತಿನಲ್ಲಿರ್ದ ಮಂದಾರಮಾಲೆಯಂ ಎನ್ನ ಕತ್ತಿಗೆ ಹಾಯ್ಕೆ ದನಾದ್ದ೦ ಮಗನಾದ ಜಯಂತನಿಗಿಂತಲೂ ಆ ಶಚೀಪತಿಗೆ ನಾನು ಪ್ರೇಮಪಾತ್ರನಾನಿಗಿರುವೆನಾದ್ದಿ೦ದ ಅವನು ಮಾಡಿದ ಬಹುಮಾನವೇ ದೊಡ್ಡ ದೆಂದು ತಿಳಿಯುವೆನು ಎನ್ನಲು ; ಮಾತಲಿಯು ಆಯುಷ್ಮಂತನಾದ ಮಹಾರಾಯನೇ, ಕೇಳು. ದೇವಾ ಧಿಪತಿಯಿಂದ ಬಹುಮಾನವಂ ಪೊಂದುವುದಕ್ಕೆ ನೀನು ಯೋಗ್ಯನಲ್ಲವೋ ಏನು ? ಮತ್ತು ಪೂರ್ವದಲ್ಲಿ ನರಸಿಂಹಾಕಾರನಾದ ಮಹಾ ವಿಷ್ಣುವು ಬಗ್ಗಿರ್ದ ಗಿಣ್ಣುಗಳು ೬ ತನ್ನ ಹಸ್ತದ ಉಗುರುಗಳ ಕೊನೆಗಳಿಂ ಹಿರಣ್ಯಾಕ್ಷನ ಉದರವಂ ಸೀಟಿ' ಈ ಸ್ವರ್ಗವಂ ಶತ್ರುರಹಿತವನ್ನಾಗಿ ಮಾಡಿದನು. ಈಗಲೂ ಅದೇ ಪ್ರಕಾರವಾದ ನಿನ್ನ ಬಾಣಗಳಿಂ ಅನೇಕ ರಾಕ್ಷಸರ ಸಂಹರಿಸಿ ಈ ಸ್ವರ್ಗಕ್ಕೆ ಅದೇ ರೀತಿಯಿಂ ಸುಖ ವನ್ನುಂಟುಮಾಡಿರುವೆ. ಆದ್ದಿ೦ದ ಸುಖಪರನಾದ ಇಂದ್ರನಿಗೆ ನೀವೀರ್ವರು ಮಾಡಿದ ಉಪಕೃತಿಯು ಮಹತ್ತಾದುದು” ಎಂದು ನುಡಿಯಲು ; ರಾಯನು- ಎಲೈ ಮಾತಲಿಯೇ, ನಾವು ದೇವಾಧಿಪತಿಯಾದ ಇಂದ್ರನ ಮಹಿಮೆಯನ್ನೇ ಸ್ತೋತ್ರವಂ ಗೆಯ್ಯಬೇಕು. ಹೇಗೆಂದರೆ:-ಲೋಕದಲ್ಲಿ ಸೇವಕ ಜನರುಗಳು ಮಹತ್ತರವಾದ ಕಾರ್ಯoಗಳಲ್ಲಿ ಸಿದ್ದಿ ಯಂ ಪಡೆಯುವುದೆಂಬುದಾ ವದುಂಟೇ ಅದು ಅವರಿಗೆ ದೊರೆಯಾದವನ ಬಹುಮಾನಗುಣವೆಂದು ತಿಳಿಯ ಬೇಕು. ಹೇಗೆಂದರೆ- ಸೂರ್ಯನು ಹೆಳವನಾದ ಅರುಣನನ್ನು ತನ್ನ ರಥದ ಮುಂದೆ ಕುಳ್ಳಿರಸದಿರ್ದನಾದರೆ, ಅವನು ಅಂಧಕಾರವಂ ಪರಿಹರಿಸುವುದಕ್ಕೆ ಹೇಗೆ ಸಮರ್ಥ ನಾಗುವನು, ಪೇಳು ? ಯಾವ ಕಾರ್ಯನಿರ್ವಾಹವು ಪುಟ್ಟ ಬೇಕಾದರೂ ಪ್ರಭು ವಾದವನ ಮಾಹಾತ್ಮ ಯಿಂದಾಗಬೇಕಲ್ಲದೆ ಸೇವಾಜನರ ಸಾಮರ್ಥ್ಯದಿಂದಾಗ ಲಾಲಿದು. ಆದ್ದ೦ ಸಮಸ್ತರಾಕ್ಷಸರ ಸಂಹಾರವು ಪೂಜ್ಯನಾದ ಇಂದ್ರನ ಮಾಹಾತ್ಮಯಿ೦ ಸಿದ್ದಿಸಿತು ” ಎಂದು ನುಡಿಯಲು ; ಮಾತಲಿಯು- ಎಲೈ ಮಹಾರಾಜನೇ, ನಿನ್ನಲ್ಲಿ ಇಷ್ಟು ಮಾಹಾತ್ಮ ವಿದ್ದರೂ ನೀನಿಂತು ಇಂದ್ರನಂ ಸ್ತೋತ್ರವಂ ಗೆಯ್ಯುವುದು ಯುಕ್ತವೇ ಸರಿ ” ಎಂದು ನುಡಿಯುತ್ತ ಕೆಲವು ದೂರ ರಥವಂ ನಡೆಯಿಸಿ, ಎಲೈ ಸ್ವಾಮಿಯೇ, ಈ ಸ್ವರ್ಗಭಾಗದಲ್ಲಿ ಪ್ರತಿಷ್ಠೆ ಯಂ ವೊಂದಿದ ನಿನ್ನ ಕೀರ್ತಿಯ ಸೌಭಾಗ್ಯವಂ 21 S