ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲರ್ನಾಟಕ ನವೀನಟೀಕೆ ೧೬೩ ರಾಯನು ಎಲೈ ಮಾತಲಿಯೇ, ಅತಿವೇಗದಿಂದ ರಥವು ಕೆಳಕ್ಕೆ ಇಳಿಯುವುದ೫೦ ಭೂಲೋಕವು ಅತ್ಯಾಶ್ಚರ್ಯಯುಕ್ತವಾಗಿ ಕಾಣುತ್ತಿರುವುದು, ಹೇಗೆಂದರೆ:-ಮೇಲೆ ನೋಡುವಲ್ಲಿ ಭೂಮಿಯಲ್ಲಿ ಮುಳುಗಿದ್ದಂತೆ ತೋಲುತ್ತಿರ್ದ ಪರ್ವತದ ಕೊನೆಗಳಿ೦ದೀಗ ಭೂಮಿಯೇ ಇಳಿಯುವುದೋ ಎಂಬಂತೆ ಪರ್ವತಂಗಳು ಉನ್ನ ತಂಗಳಾಗಿ ಭೂಮಿಯು ತಗ್ಗಾಗಿ ಕಾಣುತ್ತಿರುವುದು, ವೃಕ್ಷಂಗಳು ಕೊಂಬೆ ಗಳು ವ್ಯಕ್ತವಾಗಿ ಕಾಣುವುದಿಲ್ಲ ಮೊದಲು ಎಲೆಗಳ ಗುಂಪಿನಲ್ಲಡಗಿರ್ದ ಭಾವವಂ ಬಿಡುವಂತೆಯೂ ತೋಟವುವು, ನದಿಗಳು ಮೊದಲು ತಮ್ಮ ಪ್ರವಾಹ ವೆಲ್ಲಾ ಅಡಗಿ ಅತಿಸೂಕ್ಷ್ಮ೦ಗಳಾಗಿ ಕಾಣುತ್ತಿರ್ದು ಈಗ ಸುತ್ತಲೂ ಇರುವ ಕಾಲುವೆ ಮೊದಲಾದವುಗಳಿಂದ ವ್ಯಕ್ತವಾಗಿ ಕಾಣುತ್ತಿರುವುವು. ಮತ್ತು ಭೂಮಿ ಯು ಯಾವ ಪುರುಷನಿಂದ ಮೇಲಕ್ಕೆ ಎಸೆಯಲ್ಪಟ್ಟು ಎನ್ನ ಸಮೀಪಕ್ಕೆ ಬರುವುದೋ ಎಂಬಂತೆ ತೋರುವುದು' ಎಂದು ನುಡಿಯಲು ; ಈ ಮಾತಲಿಯು: ಆಯುಷ್ಮಂತನಾದ ಮಹಾರಾಯನೇ, ಚೆನ್ನಾಗಿ ನೋಡಿ ಹೇಳಿದೆ. ಆದರೂ ಭೂಲೋಕವು ಸಮಸ್ತ ಸತ್ಕರ್ಮಂಗಳ ಸಾಧನೆಗೆ ಯೋಗ್ಯ ಮಾ ದುದ ಅತ್ಯುತ್ತಮವಾಗಿ ಮನೋಹರವಾಗಿ ತೋವುದು ” ಎಂದು ನುಡಿಯಲು: ರಾಯನು- ಎಲೈ ಮಾತಲಿಯೇ, ಪೂರ್ವಪಶ್ಚಿಮ ಸಮುದ್ರವಂ ವ್ಯಾಪಿಸಿ ಸುವರ್ಣರಸವಂ ಸುರಿಯತ್ತ ಸಂಧ್ಯಾಕಾಲದ ಮೇಘದಂತೆ ಒಪ್ಪುತ್ತ ಕಾಣುವ ಆ ಪರ್ವತವು ಯಾವುದು ?” ಎಂದು ಬೆಸಗೊಳಲು ; ಮಾತಲಿಯು« ಇದೇ ಕಿಂಪುರುಷಖಂಡದಲ್ಲಿರುವ ಹೇಮಕೂಟ ನಾಮಕ ವಾದ ಪರ್ವತವು. ಈ ಪರ್ವತದಲ್ಲಿ ವಾಸವಂ ಗೆಯ್ಯುವ ಋಷಿಗಳಿಗೆ ತಪಸ್ಸಿದ್ದಿ ಕರ ಮಾದ ಪುಣ್ಯಕ್ಷೇತ್ರಗಳಂ ನೋಡು, ಎಷ್ಟು ಪವಿತ್ರಕರವಾಗಿರುವುದು. ಮತ್ತು ಸ್ವಾ ಯಂಭುವ ಮನುವಿನ ಪುತ್ರನಾದ ಮರೀಚಿಖುಷಿಯ ದೆಸೆಯಿಂದ ಯಾವ ಕಶ್ಯಪ ಬ್ರಹ್ಮನು ಪುಟ್ಟಿ ದೇವತೆಗಳಿಗೂ ರಾಕ್ಷಸರುಗಳಿಗೂ ತಂದೆಯಾಗಿ ಮಹಾಪ್ರಭಾ ವಶಾಲಿಯಾಗಿರುವನೋ ಆ ಕಶ್ಯಪಬ್ರಹ್ಮನು ದಿತಿ ಅದಿತಿ ಯೆಂಬ ಧರ್ಮಪತ್ನಿ ಯರಿಂದೊಡಗೂಡಿ ಈ ಪರ್ವತದ ಪುಣ್ಯಕರವಾದ ಕ್ಷೇತ್ರದಲ್ಲಿ ತಪಸ್ಸಂಗೆಯ್ಯುತಿ ರುವನು ಎಂದು ನಿಡಿಯಲು; ರಾಯನು(ಎಲೈ ಮಾತಲಿಯೇ, ತೇಜೋನಿಧಿಯಾಗಿ ಸಮಸ್ತ ಶ್ರೇಯ ಸೃನ್ನುಂಟು ಮಾಡುತ್ತಿರುವ ಆ ಕಶ್ಯಪಋಷಿಗಳಿಗೆ ವಂದನೆಯಂ ಮಾಡದೆ ಅತಿಕ್ರ