ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಕರ್ಣಾಟಕ ಕಾವ್ಯಕಲಾನಿಧಿ ಮಿಸಿ ಪೋಗಬಾರದಾದ್ಧ'೦ದ ಹೇಮಕೂಟಪರ್ವತಾಗ್ರಕ್ಕೆ ರಥವಂ ತೆಗೆದ ಕೊಂಡು ನಡೆ ” ಎಂದು ನುಡಿಯಲು; 'ಮಾತಲಿಯುಅಯ್ಯಾ ಸ್ವಾಮಿಯೇ, ನೀನು ಯೋಚಿಸಿದ ಕಾರ್ಯವು ಅಗತ್ಯವಾಗಿ ಮಾಡತಕ್ಕದು ” ಎಂದು ನುಡಿದು ಆ ಪರ್ವತಾಗ್ರಕ್ಕೆ ಮಣಿಮa ರಥವನ್ನಿಳುಹಿಸಲು, ರಾಯನು ನಸುನಗುತ್ತ

  • ಎಲೈ ಮಾತಲಿಯೇ, ಕೇಳು. ಗಾಲಿಗಳಿ೦ ಶಬ್ದವು ಪುಟ್ಟದೆ, ಅಚ್ಚುಗಳಿ೦ ಧೂಳೇಳದೆ, ಭೂಮಿಯ ಸ್ಪರ್ಶದಿಂ ತಡೆಯಿಲ್ಲದೆ ಈ ಪರ್ವತಾಗ್ರಕ್ಕೆ ಇಳಿಯು ತಿರುವ ನಿನ್ನ ರಥವು ಪೋಗುವುದೇ ತಾಣದೆ ಇರುವುದು ” ಎಂದು ನುಡಿಯಲು;

ಮಾತಲಿಯು ಆಯುಷ್ಯಂತನಾದ ಮಹಾರಾಯನೇ? ನಿನಗೂ, ಇಂದ್ರ ನಿಗೂ ಈ ರಥವೊಂದಲಿ೦ ತಾರತಮ್ಯವಲ್ಲದೆ ಇನ್ಯಾವುದಕಲ್ಲಿಯ ನ್ಯೂನಾಧಿಕ್ಯ ಎಲ್ಲ” ಎನಲು ; ರಾಮನು - ಎಲೈ ಮಾತಲಿಯೇ, ಈ ಪ್ರದೇಶದಲ್ಲಿ ಮಾರೀಚಮಹಾ ಮುನಿಯ ಆಶ್ರಮವು ಯಾವುದು? ಎಂದು ನುಡಿಯಲು ; ಮಾತಲಿಯು ತನ್ನ ಬೆರಳ ಕೊನೆಯಿಂದ ಮಾರೀಚಾಶ್ರಮವಂ ತೋ' - «ಎಲೈ ಸ್ವಾಮಿಯೇ, ಹುತ್ತದಲ್ಲಿ ಅರ್ಧವಾಗಿ ಮುಳುಗಿರುವ ತನ್ನ ದೇಹವುಳ್ಳವ ನಾಗಿ, ವಕ್ಷಸ್ಪಳದಲ್ಲಿ ಹತ್ತಿಕೊಂಡಿರುವ ಹಾವಿನ ಸೋಲೆಗಳಿಂ ಯುಕ್ತನಾಗಿ, ಕತ್ತಿನಲ್ಲಿ ಸುತ್ತಿರುವ ಪುರಾತನವಾದ ಬಳ್ಳಿಗಳ ಬಳಗಗಳಿ೦ ಅತ್ಯಂತ ಪೀಡಿತನಾಗಿ ಎರಡು ಭುಜಗಳಂ ವ್ಯಾಪಿಸಿದ ಪಕ್ಷಿಗಳ ಗೂಡುಗಳಿಂ ಯುಕ್ತವಾದ ಜಟಾಮಂ ಡಲದಿಂ ಮಂಡಿತನಾಗಿ, ಚಂಡಕರ ಸೂರ್ಯಮಂಡಲಕ್ಕೆ ಅಭಿಮುಖನಾಗಿ, ಕೊಂಬೆ ಗಳಿಲ್ಲದ ವೃಕ್ಷಗಳಂತೆ ನಿಶ್ಚಲವಾಗಿ ಕಾಣುತ್ತ ಈ ಆಶ್ರಮದಲ್ಲಿ ತಪಸ್ಸಂ ಗೆಯು ತಿರುವನೇ ಕಶ್ಯಪಬ್ರಹ್ಮನು ; ಇದೋ, ನೋಡು ಎಂದು ತೋರಿಸಲು ; ಆ ರಾಯನು-ಇಂಥ ಕಷ್ಟ ತಪಸ್ಸಿಗೋಸ್ಕರ ನಮಸ್ಕಾರವು ! ” ಎಂದು ನುಡಿಯಲಾಮಾತಲಿಯು ವೇಗದಿಂ ಪೋಗುತ್ತಿರುವ ರಥಾಶ್ವಗಳ ರಜ್ಜುಗಳಂ ಸೆಳೆದು ಪಿಡಿದಾ ಹೇಮಕೂಟಪರ್ವತ ಶೃಂಗಕ್ಕೆ ರಥವನ್ನಿಳುಹಿ- ಎಲೈ ಸ್ವಾಮಿಯೇ, ಮಂದಾರವೃಕ್ಷಂಗಳಿಂ ಸುಂದರವಾಗಿ, ಸಮಸ್ತ ಸತ್ಕರ್ಮಾನುಷ್ಠಾನಕ್ಕೆ ವಾಸ ಭೂಮಿಯಾಗಿ, ಸ್ವಜಾತಿವೈರಗಳಂ ಬಿಟ್ಟು ಸಂತೋಷದಿಂ ಸಂಚರಿಸುತ್ತಿರುವ ಸಂಹ ಶಾರ್ದೂಲ ಮೊದಲಾದ ಮೃಗಗಳಿಂದಲೂ, ಗಿಣಿ ಕೋಗಿಲೆ ಮೊದಲಾದ ಪಕ್ಷಿಗಳ ಕಲಕಲಧ್ವನಿಗಳಿಂದ, ವ್ಯಾಪ್ತಮಾಗಿ ಕ೦ಗಳಿಗೆ ಕಾಂತಿಯಂ ಬೀತಿ