ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೩ ೫. ರುವ ಕಶ್ಯಪಬ್ರಹ್ಮನ ಆಶ್ರಮವೆ೦ ನೋಡು !” ಎಂದು ಹೇಳಲಾ ರಾಯನು ಅಧಿಕ ಹರ್ಷದಿಂದ ಯುಕ್ತನಾಗಿ, ( ಎಲೈ ಇಂದ್ರಸಾರಥಿಯೇ, ಈ ಆಶ್ರಮವು ಸ್ವರ್ಗಕ್ಕಿಂತಲೂ ಸಂತೋಷಕರವಾಗಿ ಇರುವುದು' ಎಂದು, << ಈ ಆಶ್ರಮವಂ ನೋಡಿದ್ದ ನಾನು ಆನಂದಸುಧಾ ಸಮುದ್ರದಲ್ಲಿ ಮುಳುಗಿದಂತೆ ಇರುವೆನು ಎಂದು ನುಡಿಯಲು ; ಮಾತಲಿಯು ರಥವು ನಿಲ್ಲಿಸಿ- ಎಲೈ ರಾಯನೇ, ರಥದಿಂದಿಳಿ ?” ಎಂದು ನುಡಿಯುವ ಸಾರಥಿಯ ವಾಕ್ಯಾನುಸಾರವಾಗಿ ರಭದಿಂ ರಾಯನು ಇಳಿದು, ಎಲೈ ಮಾತಲಿಯೇ, ರಥವಂ ಬಿಟ್ಟು ಎನ್ನೊಡನೆ ಹೇಗೆ ಬರುವೆ ? ?, ಎನ್ನ ಲು ; ಈ ಮಾತಲಿಯು- ಎಲೈ ಸ್ವಾಮಿಯೇ, ಈ ಕುದುರೆಗಳಂ ವೃಕ್ಷದ ಮಲ ದಲ್ಲಿ ಕಟ್ಟಿರುವೆನು ” ಎಂದು ರಥದಿಂದಿಳಿದಾರ ಥಾಶ್ವಂಗಳಂ ವೃಕ್ಷದಲ್ಲಿ ಬಂಧಿಸಿ, ರಾಯಂಗೆ ಮಾರ್ಗವಂ ತೋಯ ಸುತ್ತ ಮುಂಭಾಗದಲ್ಲಿ ಬರುತ್ತ, “ಎಲೈ ರಾ ಯನೇ, ಜ್ಯೋತಿಷ್ಟೋಮ, ಅತಿರಾತ್ರ ಮೊದಲಾದ ಯಾಗಗಳಂ ಮಾಡುವ ಶಾಲೆಗಳಿಂ ಪೊಡಮಡುವ ಧಮ್ರಾಜಿಯು ಈ ತಪೋವನಲಕ್ಷ್ಮಿಯ ಜಡೆಯೆಂಬ ಶಂಕೆಯನ್ನುಂಟುಮಾಡುತ್ತಿರುವುದು ಚೆನ್ನಾಗಿ ನೋಡು' ಎಂದು ಮರಳಿಮರಳಿ ಹೇಳುತ್ತಿರಲು ; ರಾಯನು - ಎಲೈ ಮಾತಲಿಯೇ, ನಾನು ಅತ್ಯಾಶ್ಚರ್ಯ ಯುಕ್ತನಾಗಿ ನೋಡುತ್ತಿರುವೆನು. ಆದರೂ ಇನ್ನೂ ಕೆಲವು ಋಷಿಗಳು ಯಾವ ತಪೋವನದಲ್ಲಿ ಉಗ್ರತಪವಂ ಮಾಡಬೇಕೆಂದು ಆಸೆ ಯಂ ಮಾಡುತ್ತಿರುವರೋ ಆಯಾ ಪುಣ್ಯಕರ ವಾಗಿ ಪಾಪಪರಿಹಾರಿಯಾದ ಮಾರೀಚ ಖುಷಿಯ ಆಶ್ರಮದಲ್ಲಿ ತಪಸ್ಸಂ ಗೆಯ್ಯುವ ಖುಷಿಗಳಿಗೆ ವಾಯುವಿನಿಂ ಪ್ರಾಣಧಾರಣೆಯಂ ಮಾಳ್ಳುದು ಉಚಿತವಾಗಿರುವುದು; ಕಲ್ಪವೃಕ್ಷವನದಲ್ಲಿ ಸುವರ್ಣಕಮಲಂಗಳ ಪರಾಗಂಗಳಿ೦ ಹೊಂಬಣ್ಣ ಮಾಗಿರುವ ಜಲದಲ್ಲಿ ಪುಣ್ಯಕರವಾದ ಸ್ಥಾನವ್ಯಾಪಾರವು ಯುಕ್ತವಾಗಿರುವುದು; ಮತ್ತು ರತ್ನಮಯವಾದ ಶಿಲೆಗಳಲ್ಲಿ ಪರಬ್ರಹ್ಮನ ಧ್ಯಾನವಂ ಗೆಯ್ಯುವುದು ಯೋಗ್ಯಮಾ ಗಿರುವುದು; ಸುರಸ್ತ್ರೀಯರ ಸವಿಾಪದಲ್ಲಿ ಚಲಿಸದೆ ಇರುವ ತಪಸ್ಸಿನಿಂ ಯುಕ್ತ ರಾಗಿ ಪ್ರಜ್ವಲಿಸುತ್ತಿರುವದು ಯೋಗ್ಯವಾಗಿರುವುದು ” ಎಂದು ನುಡಿಯಲು ; ಮಾತಲಿಯು ಅಯ್ಯಾ ಮಹಾರಾಯನೇ, ಸತ್ಪುರುಷರಾದ ಈ ಋಷಿ ಗಳ ಪ್ರಾರ್ಥನೆಯು ವೃದ್ಧಿಯಂ ಹೊಂದತಕ್ಕದು ” ಎಂದು ನುಡಿಯುತ್ತಿರಲು ;