ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆಯುತ, ನಳಕಖರನಂ ನಾಚಿಸುತ, ವಾಜೆಗಳ ರಾಜೆಗಳಿಂ ಪರಿವೃತರಾಗಿ, ಜೋಳ ರಿಗೆ ಸೋಜಿಗವಂ ಪುಟ್ಟಿಸುತಿಹರು. ಮತ್ತೊಂದು ಸ್ಥಾನದಲ್ಲಿ ವರ್ತಕರು ಬೀದಿಬೀದಿಗಳಲ್ಲಿ ನವರತ್ನರಾಶಿಗಳಂ ಅನೇಕ ದ್ರವ್ಯ ಸಮೂಹವಂ ಇದಿರೊಳಿರಿಸಿ ಬಹುಜನ ಕುಬೇರರುಗಳು ಈಪುರದಲ್ಲಿ ರುವರೋ ಎಂಬಂತೆ ಶಂಕೆಯನ್ನುಂಟುಮಾಡುತಿರುವರು ಮತ್ತೊಂದೆಡೆಯಲ್ಲಿ ಮಾಲೆಗಾರ್ತಿಯರು ತಮ್ಮ ಕಣ್ಣುಗಳಂ ತೇಲಿಸುವುಧ ಇಂದಲೇ ಮುಖವಂ ಸೋಲಿಸುವರೋ ಎಂಬಂತೆ ಕೊಂಕುಗೂಡಿದ ಕೊನೆ ಹುಬ್ಬುಗಳಿ೦ ಯುಕ್ತರಾಗಿ, ಪುಷ್ಪಂಗಳು 6 ವಾರನಿಗೆ ಶರಂಗಳಾಗಿ ನಾರಿಯರಾದ ಎಮ್ಮ ಹೃದಯಂಗಳಂ ಸೂರೆಗೊಳ್ಳುತಿರುವುವಾದ್ದ ದ ಇವಂ ಬಂಧಿಸಿ ಬೀಧಿ ಗಳಲ್ಲಿ ತುಂಡುಗೈದು ಮಾಡದೆ ಬಿಡುವೆವೇ ಎಂಬ ಜೋಧದಿಂದಲೋ ಎಂಬಂತೆ ಕರಕಂಕಣಂಗಳ ಝಣತ್ಕಾರಗಳುಂಟಾಗುವಂತೆ ಅವಂ ಬಂಧಿಸುತ್ತ, ಪೂಗೊಳಲು ಬಂದ ಒಟಪುರುಷರು ತಮ್ಮ ಕಡೆಗಣ್ಣ ಕುಡಿನೋಟಗಳಿ೦ ನೋಡಿ ಸವಿನುಡಿಗಳು ನುಡಿಯುತ್ತ, ಜಾಜದ ಸೆಗಂ ಬಾರಿಬಾರಿಗೂ ಮೇಲಕ್ಕೆ ಸೇರಿಸುತ್ತ, ತಮ್ಮ ಸೊಗಸುಗಳನ್ನೇ ಬೀಜ.”, ಪೂಸರವನ್ನಿಯದೆ ದ್ರವ್ಯಾಕರ್ಷಣಮಂ ಗೈಯುತ್ತಿ ರುವರು. ಮತ್ತೊಂದು ದಿಕ್ಕಿನಲ್ಲಿ ವೇದವೇದಾಂತ ಮೀಮಾಂಸಾದಿ ಶಾಸ್ತ್ರಂಗಳ ನೆಲೆ ಗಳಂ ತಿಳಿದು ಅನೀಶ್ವರ ಅನೇಕೇಶ್ವರ ವಾದಿಗಳಾದ ಬೌದ್ದ ಚಾರ್ವಾಕರ ಮತ ಸಿದ್ದಾಂತವಂ ಖಂಡಿಸುತ, ಸಮಸ್ತ ಶಾಸ್ತ್ರಾರ್ಥಂಗಳಂ ತಮ್ಮ ತಮ್ಮ ಶಿಷ್ಯರಿಗೆ ಬೋಧಿ ಸುಶ, ಸತ್ಕರ್ಮಾನುಷ್ಟಾನಪರರಾಗಿ, ತೇಜೋಮಯರಾಗಿ, ಸ್ವಾಶ್ರಮಧರ್ಮಗಳ ನೈತಿಕ್ರಮಿಸದೆ ಇರುವ ಬ್ರಾಹ್ಮಣಶ್ರೇಷ್ಠರುಗಳಿ೦ ನಿಬಿಡಿತವಾಗಿರುವುದು. ಮತ್ತೊಂದು ದೆಸೆಯಲ್ಲಿ ವೇಶ್ಯಾಂಗನೆಯರು ಮನ್ಮಥಮಾಯಾವಿದ್ಯೆಯೇ ಬಹುರೂಪವ ತಾಳಿರುವುದೋ ಎಂಬಂತೆ ಪೊಳೆಯುತ ಹಾರ ಪದಕಂಕಣ ತೋಳ್ಳಳೆ ಮೊದಲಾದ ಆಭರಣಗಳಂ ಧರಿಸಿ, ತಮ್ಮ ಅಂಗಸೌಂದರ್ಯವು ಒಂದು ಮಟ್ಕಾಗಿ ಹೊಸೂಸುವಂತೆ ನಯವಾದ ಸೀರೆಗಳನ್ನು ಟು ಗಂಟಿನಿಂದ ಊಹಿಸು ವುದಕ್ಕೆ ಯೋಗ್ಯವಾದ ಕುಪ್ಪಸವಂ ತೊಟ್ಟು, ಒತ್ತಿನಲ್ಲಿರುವ ಬಿತ್ತರಿಯರ ಕೈಗಳಿಂದ ವೀಳ್ಯದೆಲೆಯ ಮಡಿಪುಗಳಂ ಮಡಿಸಿಕೊಳ್ಳುತ್ತ ಬಂದು, ಪವಳದ ಕಂಭಗಳಿಂದಲಂಕೃ ತಮಾದ ವಜ್ರದ ಮೊಗಸಾಲೆಯಲ್ಲಿ ನಿಂತು, ಬೀದಿಯಲ್ಲಿ ಬರುವ ಸೊಗಸುಗಾರರಾದ ಎಟ ವಿದೂಷಕ ಪೀಠವರ್ದಕ ನಾಗರಿಕ ಮೊದಲಾದ ವಿಟವರುಷರುಗಳಂ ತಮ್ಮ