ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೬೭ ಮಾಡದಿರು, ಮಾಡದಿರು ಎಂದು, (ತನ್ನಲ್ಲಿ) ಉತ್ಪತ್ತಿ ಸ್ವಭಾವವನ್ನೇ ಪೊಂದಿರು ವನೆನುತ್ತಿರಲು ; ರಾಯನು ಆ ಋಷಿಪತ್ನಿಯಾಡಿದ ವಾಕ್ಯವಂ ಕೇಳಿ, “ ವಿನಯಪೂರ್ವಕ ಮಾದ ಶಬ್ದವು ಕೇಳಿ ಬರುವುದು. ಯಾವ ಬಾಲಕನು ಬುದ್ದಿ ಯಂ ಪೇಳಿಸಿಕೊಳ್ಳು ವನು? ” ಎಂದು ಆ ಶಬ್ದವನ್ನೇ ಅನುಸರಿಸಿ, ಆ ವೃಕ್ಷಂಗಳ ಸಂದಿಗಳಲ್ಲಿ ಚೆನ್ನಾಗಿ ದೃಷ್ಟಿಯನ್ನಿಟ್ಟು, ಇಬ್ಬರು ಗತಿಸ್ತ್ರೀಯರುಗಳಿ೦ ಅನುಸರಿಸಲ್ಪಟ್ಟವನಾಗಿ ಅತ್ಯಂತ ಸಾಹಸದಿಂ ಯುಕ್ತನಾಗಿ, ತಾಯಿಯ ಸ್ತನ್ಯವು ಅರ್ಧಪಾನವಂ ಗೆಯ್ಯುತ್ತಿ ರುವ, ಎಳೆಯುವುದw೦ ಕ್ಷೇಶಯುಕ್ತವಾದ ಕೂದಲುಗಳುಳ್ಳ, ಸಿಂಹದ ಮರಿ ಯಂ ಬಾಲಕ್ರೀಡೆಗೋಸುಗ ಬಲಾತ್ಕಾರದಿಂದೆಳೆಯುತ್ತಿರುವ ಈಬಾಲಕನು ಯಾವನೋ ತಿಳಿಯದು? ” ಎಂದು ಸಂದೇಹಾಸ್ಪದನಾಗುತ್ತಿರಲು ; ಅಷ್ಟರಲ್ಲೇ ಆ ಬಾಲಕನು ಆ ಸಿಂಹದ ಮಿ ಯಂ ತನ್ನ ಹಸ್ತದಿಂದೆಳೆಯುತ್ತ ಖುಷಿಯರಿಬ್ಬರಿಂದೊಡಗೊಂಡು ಆ ದುಷ್ಯಂತರಾಯನಿರ್ದ ವೃಕ್ಷಸಮಿಾಪಕ್ಕೆ ಬಂದು, “ಎಲೈ ಸಿಂಹದ ಮರಿಯೇ, ನೀನು ಬಾಯ ತೆತಿದೆಯಾದರೆ ನಿನ್ನ ಹಲ್ಲು ಗಳಂ ಎಣಿಕೆಗೆಯುವೆನು” ಎನಲು ; ಆ ಋಷಿಪತ್ನಿಯರಲ್ಲೋರ್ವಳು-ಎಲೈ ಬಾಲಕನೇ, ಮಕ್ಕಳುಗಳಿಗಿಂತಲೂ ಅತಿಶಯವಾಗಿ ಪ್ರೇಮಾಸ್ಪದವಾದ ಆಶ್ರಮದಲ್ಲಿ ಬಳೆದ ಈ ಸಿಂಹವ ಏಕೆ ಬಾಧಿಸುತ್ತಿರುವೆ ? ನಿನ್ನ ಪರಾಕ್ರಮವು ಕ್ಷಣಕ್ಕೆ ಒಂದು ರೀತಿಯಾಗಿ ವೃದ್ದಿ ಯಂ ಪೊಂದುತ್ತಿರುವುದು. ಈ ಪ್ರಕಾರವಾಗಿ ಸಮಸ್ತ ಸಿಂಹಶಾರ್ದೂಲ ಮದಗಜ ಮೊದಲಾದ ಮೃಗಗಳಂ ಲಕ್ಷ್ಯವಿಲ್ಲದೆ ಸಂಹರಿಸುತ್ತಿರುವ ನಿನಗೆ ಋಷಿಗಳೆಲ್ಲರೂ ಸರ್ವದಮನನೆಂದು ನಾಮಧೇಯವಂ ಗೆದ್ದಿರುವುದು ಯುಕ್ತವಾಗಿರುವುದು' ಎಂದು ನುಡಿಯಲು ; ದುಷ್ಯಂತರಾಯನು, ಸರ್ವಾಂಗಸುಂದರನಾಗಿ ಶುಭಲಕ್ಷಣಲಕ್ಷಿತನಾ ಗಿರುವ ಆ ಪುತ್ರನಂ ನೋಡಿ, ಈ ಬಾಲಕನಲ್ಲಿ ಎನಗೆ ಸಾಕ್ಷಾತ್ಪುತ್ರನಲ್ಲಿ ಹುಟ್ಟು ವ ಪ್ರೇಮವು ಏನು ಕಾರಣದಿಂದುಂಟಾಗುತ್ತಿರುವುದೋ, ತಿಳಿಯದು. ಆದರೂ ಅಪುತ್ರಭಾವವು ಅನ್ಯಪುತ್ರರ ಸಂದರ್ಶನದಿಂದಿಂತು ಅನುರಾಗವನ್ನುಂಟುಮಾಡುತ್ತಿ ರುವುದು' ಎಂದು ಆಲೋಚಿಸುತ್ತಿರಲು ; ಮತ್ತೋರ್ವಳು(ಎಲೈ ಸರ್ವದಮನ! ನೀನು ಸಿಂಹದಮಯಂ ಬಿಡದೆ ಭಾದಿಸುತ್ತಿರುವೆ ? ಇದು ತಾಯಿಯು ನಿನ್ನಲಿ ಬಂದು ಕಚ್ಚುವುದು ಎನಲು;