ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲ ನಾಟಕ ನವೀನಟೀಕೆ ೧೬೯ ಆ ರಾಯನು, ದುಷ್ಟನಾದ ಈ ಕುಮಾರನಲ್ಲಿ ಅಧಿಕಾಭಿಲಾಷೆಯಿಂ ಯುಕ್ತನಾಗುವೆನು. ಮತ್ತು ಲೋಕದಲ್ಲಿ ಪುಣ್ಯಶಾಲಿಗಳಾದ ಜನಗಳು ನೆವವಿ ಲ್ಲದೆ ನಗುವುದ ಅ೦ ಸ್ವಲ್ಪವಾಗಿ ಹೊಂದುತ್ತಿರುವ ಮೊಲ್ಲೆ ಮೊಗ್ಗುಗಳಂತಿ ರುವ ದಂತಾಗ್ರಗಳುಳ್ಳ, ಸ್ಪುಟವಾಗಿ ತೋರ್ಪಡದೆ ಇರುವ ಅಕ್ಷರಗಳಿಂದ ರಮ ಣೀಯವಾದ ತೊದಲ್ಲೂಡಿದ ವಾಗ್ತಾಪಾರಮಳ್ಳ, ತೊಡೆಗಳನ್ನಾಶ್ರಯಿಸುವು ದಳಲ್ಲಿ ಅತ್ಯಂತ ವಿಶ್ವಾಸಿಗಳಾದ ಮಕ್ಕಳುಗಳಂ ಎತ್ತಿಕೊಂಡು ಅವರ ಅಂಗಗಳಲ್ಲಿ ಇದ್ದ ದೂಳುಗಳಿ೦ ಮಲಿನಾ೦ಗರಾಗುತ್ತಿರುವರು ! ಆ ಪುಣ್ಯವಂ ನಾನು ಪಡೆ ಯಲಿಲ್ಲ ವಾದ್ದ೦ದೇ ಸಮಸ್ಯೆ ಶ್ವರ್ಯವು ವ್ಯರ್ಥವಾಗಿ ತೋಯುವುದು | ಎಂದು ವ್ಯಸನಾತುರನಾಗುತ್ತಿರಲು ; ಆ ಋಷಿ ಸ್ತ್ರೀಯು ಆ ಬಾಲಕನು ಸಿಂಹದ ಶಿಶುವ ಹಿಂಸೆಗೆಯ್ಯುವುದಂ ನೋಡಿ_ ಈ ದುಷ್ಟನಾದ ಬಾಲಕನು ಎನ್ನ೦ ಲಕ್ಷ್ಯಂಗೆಯ್ಯದೆ ಇರುವನು. ಇವನು ಶಿಕ್ಷಿಸುವುದಕ್ಕೆ ದಕ್ಷರಂ ಕಾಣುವೆನು ಎಂದು ಎಡಬಲವಂ ನೋಡಿ, * ಎಲೈ ಋಷಿಕುಮಾರರುಗಳಲ್ಲಿ ಯಾರು ? ” ಎಂದು ಕೂಗಿ, ದುಷ್ಯಂತರಾ ಯನಂ ಕಂಡು, “ಎಲೈ ಭಜ್ರಾಕಾರನಾದ ಪುರುಷನೇ, ಇಲ್ಲಿ ಬಂದು ಬಿಡಿಸಲಸದ ಳವಾದ ಹಸ್ತಮುಷ್ಟಿಯುಳ್ಳ ಈ ದುಷ್ಟ ಬಾಲಕನಿಂ ಬಾಲಕ್ರೀಡೆಗೋಸುಗ ಬಾಧಿ ಸಲ್ಪಟ್ಟ ಸಿಂಹದ ಶಿಶುವಂ ಬಿಡಿಸಿ ಸಲಹುವುದು ” ಎಂದು ನುಡಿಯಲು ; ಆ ವಾಕ್ಯಕ್ಕೆ ರಾಯನು ಸಂತುಷ್ಟನಾಗಿ, ನಸುನಗುತ ಬಂದು, ಆ ಬಾಲ ಕನಂ ಕು೫೨ ತು,_* ಎಲೈ ಮಹರ್ಷಿಕುಮಾರನೇ, ಈ ರೀತಿಯಿಂ ಫಟ್ಟಿದು ಮೊದಲಾಗಿ ತಪೋವನಕ್ಕೆ ವಿರೋಧ ಕಾರ್ಯದಲ್ಲಿ ಆಸಕ್ತನಾದ ನೀನು ತಪಸ್ಸ ನೈ೦ತು ಮಾಡುತ್ತಿರುವೆ ? ಮತ್ತು ಕಾಂಗದ ಶಿಶುವಿನಿಂದ ಆಶ್ರಿತವಾದ ಈ ಗಂಧವೃಕ್ಷವು ಹೇಗೆ ಸರ್ವರಿಂದಲೂ ದೂಷಿಸಲ್ಪಟ್ಟದ್ದಾಗಿರುವುದೋ ಅದಕಿಂತ ದುಷ್ಟ ಕ್ರೀಡೆಗಳಿಂದ ಆಶ್ರಿತವಾದ ಗುಣವುಳ್ಳ ಪುರುಷನು ಸಮಸ್ತ ಋಷಿಗಳಿಂ ನಿಂದಿತನಾಗುವನು ಎಂದು ನುಡಿಯಲು ; ಖುಷಿಪತ್ನಿ ಯು- ಅಯ್ಯಾ ಸುಂದರಾಕಾರನಾದ ಪುರುಷನೇ, ಈ ಪತ್ರನಂ ಋಷಿಕುಮಾರನೆಂದು ಕರೆದೆಯಷ್ಟೆ, ಇವನು ಖುಷಿಪುತ್ರನಲ್ಲ' ಎಂದು ನುಡಿಯಲು ; ಆ ವಾಕ್ಯಕ್ಕೆ ರಾಯನು - ಎಲೆ ಪೂಜ್ಯಳಾದ ಸ್ತ್ರೀಯ, ಮನೋಕಗ ಮಾದ ಇವನ ಆಕಾರಕ್ಕೆ ಅಸದೃಶವದ ಚೇಷ್ಟೆ ಯಿಂ ಇವನು ಮುನಿಪುತ್ರನಲ್ಲ 22 s