ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨ - ಕರ್ಣಾಟಕ ಕಾವ್ಯಕಲಾನಿಧಿ ವಾದ ಮಯೂರದ ಲಾವಣ್ಯವಂ ನೋಡೆಂದು ಹೇಳಿದೆನಲ್ಲದೆ ನಿನ್ನ ತಾಯಿಯಾದ ಶಕುಂತಳೆಯ ವರ್ಣವಂ ನೋಡೆಂದು ನುಡಿಯಲಿಲ್ಲ” ಎಂದು ನುಡಿಯಲು ಆ ರಾಯನು ಆ ಬಾಲಕನು ನುಡಿದ ವಾಕ್ಯವಂ ಕೇಳಿ, ಈ ಪುತ್ರನ ತಾಯಿಯ ಹೆಸರು ಶಕುಂತಳೆಯೆಂದು ಇರುವದೋ ಏನು ? ಲೋಕದಲ್ಲಿ ಒಂದೇ ನಾಮವುಳ್ಳವರು ಬಹುಜನವಿರುವರು. ಆದರೆ ಈ ಪುತ್ರನು ವುರುವಂಶದಲ್ಲಿ ಪಟ್ಟಿ ದವನೆಂತಲೂ ಇವನ ತಾಯಿ ಶಕುಂತಳೆಯಂತ ನುಡಿಯುವ ಈ ಸ್ತ್ರೀಯರುಗಳ ವಾಕ್ಯದಿಂ ಮೃಗತೃಷ್ಣಯಲ್ಲಿ ಜಲಭಾ೦ತಿಯುಂಟಾದಂತೆ ಸಾಮ್ರದಿಂದೆನಗೆ ಅಧಿ ಕಾಭಿಲಾಷೆಯು ಪಟ್ಟಿರುವುದು ಎಂದು ಯೋಚಿಸುತ್ತಿರಲು ; ಆ ಬಾಲಕನು ಆ ಖುಷಿಯಂ ಕು? ತು- ಎಲೌ ತಾಯೇ, ನಾನೀ ಮೃತ್ತಿಕಾಮಯರವನ್ನೊಲ್ಲೆ, ಎನಗೆ ಸಿಂಹದ ಶಿಶುವನ್ನೇ ತಂದು ಕೊಡು ” ಎಂದು ನುಡಿಯುತ್ತಿರಲು ; - ಆ ಬಾಲಕನ ದೇಹಸಂರಕ್ಷಣಾರ್ಥವಾಗಿ ಮಾರೀಚಮಹಾ ಮುನಿಯು ಕಟ್ಟಿದ್ದ ಅಪರಾಜಿತವೆಂಬ ಮಲಿಕೆಯ ಯಂತ್ರವನ್ನು ಆ ಕುಮಾರನ ಕೈಯಲ್ಲಿ ಕಾಣದೆ ಸಂತಾಪದಿಂ ಯುಕ್ತಳಾಗಿ ಪಾರ್ಶ್ವದಲ್ಲಿರುವಳಂ ಕುತು ಗಾಬರಿಯಿಂದ 1 ಎಲೆ ಸಖಿ, ಈ ಬಾಲಕನ ದೇಹಸಂರಕ್ಷಣೆಗೋಸುಗ ಕಟ್ಟಿದ್ದ ಯಂತ್ರವನ್ನಿ ವನ ಮುಂಗೈಯಲ್ಲಿ ಕಾಣೆನಲ್ಲಾ ! ' ಎಂದು ಭಯಭ್ರಾಂತಳಾ ಗುತ್ತಿರಲು ; ರಾಯನು. ಎಲ್‌ ಪೂಜ್ಯರಾದ ಸ್ತ್ರೀಯರುಗಳಿರಾ, ಏಕೆ ಭಯಾತುರ ರಾಗುತ್ತಿರುವಿರಿ? ಈ ಬಾಲಕನು ಸಿಂಹದ ಮಿಯಂ ಸೆಳೆದುಕೊಂಡು ಬರುವ ಸಮಯದಲ್ಲಿ ಇವನ ಹಸ್ತದಿಂ ಜಾರಿ ಇಲ್ಲಿ ಬಿದ್ದಿರುವುದು ” ಎಂದು ನುಡಿದು ಆ ಯಂತ್ರವಂ ತೆಗೆದು ಕೊಳ್ಳುವುದಕ್ಕೆ ಇಚ್ಛಿಸುತ್ತಿರಲು; ಅಷ್ಟ ಇಲ್ಲೇ ಆ ಋಷಿಯರು- ಎಲೈ ಪೂಜ್ಯನೇ, ಆ ಯಂತ್ರವಂ ಮುಟ್ಟದಿರೆಂದು ನುಡಿಯುವಪ್ಪ ಕಲ್ಲೇ ರಾಯನು ಆ ಯಂತ್ರವಂ ಹಸ್ತದಲ್ಲಿ ತೆಗೆ ದುಕೊಂಡದ್ದಂ ಅವರೀರ್ವರು ಕಂಡು, 1 ಈ ಪುರುಷನು ಯಂತ್ರವಂ ಹೇಗೆ ತೆಗೆ ದುಕೊಂಡನೋ ! ” ಎಂದಾಶ್ಚರ್ಯಯುಕ್ತರಾಗಿ, ತಮ್ಮ ಹಸ್ತಗಳಂ ಎದೆಯಲ್ಲಿಟ್ಟು ಒಬ್ಬರೊಬ್ಬರು ಮುಖಾವಲೋಕನವಂ ಗೆಯ್ಯುತ್ತಿರಲು ; ಆ ದುಷ್ಯಂತರಾಯನು, ಎಲೌ ಋಷಿಪತ್ನಿಯರುಗಳಿರಾ! ಈ ಯಂತ್ರ ವಂ ಮುಟ್ಟಿದಿರೆಂದು ಆಶ್ಚರ್ಯದಿಂ ಯುಕ್ತರಾಗಿ ನುಡಿದ ವಾಕ್ಯದ ಸಂಗತಿಯ