ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತ ನಾಟಕ ನವೀನಬೇಳ ೧೭ & ಪೇಳಿರಿ ಎನ್ನಲು; ಆ ಸ್ತ್ರೀಯರಲ್ಲೊಬ್ಬಳು(ಎಲೈ ಪೂಜ್ಯನೇ, ಕೇಳು, ಮಾರೀಚಮಹಾ ಮುನಿಯು ಈ ಪ್ರತ್ರನ ಜಾತಕರ್ಮವಾಗುವ ಕಾಲದಲ್ಲಿ ಅಪರಾಜಿತವೆಂಬ ಮಲಿಕೆ ಯಿಂದ ಯಂತ್ರವಂ ಮಾಡಿ ರಾಕ್ಷಸಾದಿಗಳ ಬಾಧೆಯಾಗದಂತೆ ಈ ಬಾಲಕನ ದೇಹದಲ್ಲಿ ಕಟ್ಟಿದನು ಎನು ; ರಾಯನು--- ಅಥವಾ ಕಟ್ಟಿದಾಕ್ಷಣವೆ ಇದಂ ಮುಟ್ಟಬಾರದೆಂಬ ನೆವ ವೇನು ??” ಎಂದು ಕೇಳಲ. ; ಆ ಸ್ತ್ರೀಯರು. ಎಲೈ ಪೂಜ್ಯನೇ, ಆ ಖಷಿಯು ಈ ಬಾಲಕನ ತಾಯಿ ತಂದೆಗಳು ಹೊಳಿತು ಭೂಮಿಗೆ ಬಿದ್ದ ಈ ಯಂತ್ರವನಿನ್ನಾ ರು ಮುಟ್ಟಿದಾಗ ಆಕ್ಷಣದಲ್ಲೇ ಅದು ಸರ್ಪವಾಗಿ ಅವರು ಕಚ್ಚುವಂತ ವರವನ್ನಿ ತಿರುವನು? ಎನ್ನಲು, ರಾಯನು ನೀವು ಹೇಳಿದಂತೆ ಪೂರ್ವದಲ್ಲಿ ಯಾರಾದರೂ ಮುಟ್ಟಿದ್ದಕ್ಕೆ ಅವರಂ ಕಚ್ಚಿದ ಸಂಗತಿಯಂ ನೀವು ಕಂಡಿರುವಿರಾ??” ಎನ್ನಲು; ಆ ವಾಕ್ಯಕ್ಕೆ ಆ ಸ್ತ್ರೀಯರು ಅನೇಕ ಪ್ರಕಾರವಾಗಿ ಕ೦ಡಿರುವೆವೆನ್ನ ಲು ; ರಾಯನು ಆನಂದಸುಧಾಸಮುದ್ರದಲ್ಲಿ ಮುಳುಗಿ, ನಾನು ಮನೆ ರಥದಿಂ ಸಂಪೂರ್ಣನಾದರೂ ಇನ್ನು ಆ ಶಕುಂತಳೆಯ ಸಂದರ್ಶನವಿಲ್ಲದೆ ಇರು ವುದ್ದಿ, ಅಧಿಕ ಸಂತೋಷವಂ ಪೊಂದಲಾರೆನು?' ಎಂದು, ಆ ಬಾಲಕನಂ ಮರಳಿ ಆಲಿಂಗಿಸಿ ಮುದ್ದಾಡುತ್ತಿರಲು ; 6 ಎಲೆ ಸುವ್ರತೆ ನಡೆ, ನಾವೀ ವೃತ್ತಾಂತವೆಲ್ಲವಂ ಶಕುಂತಳೆಗೆ ತಿಳಿಸುವ' ಎಂದು ನುಡಿದು, ಅವಳಿರುವ ಪರ್ಣಶಾಲೆಗೆ ಪೋಗಿ ನಾರಿಸೀರೆಯನ್ನುಟ್ಟು ಕೃಶ ಳಾಗಿರುವ ಶಕುಂತಲೆಯಂ ಕಂಡು ಈ ವೃತಾಂತವೆಲ್ಲ ವಂ ತಿಳುಹುತ್ತಿರಲು; ಅತ್ತಲಾಬಾಲಕನು- ಎಲೈ ಪುರುಷನೇ, ಎನ್ನ ಬಿಟ್ಟು ಕಳುಹು. ಎನ್ನ ತಾಯಿಯ ಸಮಾಸಕ್ಕೆ ಹೋಗುವೆನು ಎನ್ನ ಲು; ರಾಯನು-ಪುತ್ರನೇ, ನಾವಿಬ್ಬರೂ ಪೋಗಿ ನಿನ್ನ ತಾಯಿಗೆ ಸಂತೋಷ ವನ್ನು ಂಟುಮಾಡುವೆವು' ಎನ್ನ ಲು; ಬಾಲಕನುಎನ್ನ ತಂದೆಯಾದವನು ದುಷ್ಯಂತರಾಯನಾಗಿರುವಲ್ಲಿ ಎನ್ನ ತಾಯಿಯ ಸನ್ನಿಧಿಗೆ ಬರುವುದಕ್ಕೆ ನೀನಾರು? ” ಎಂದು ನುಡಿಯಲು; ರಾಯನು ಮುಗುಳ್ಳಗೆಯಿಂ ಯುಕ್ತನಾಗಿ ಈ ಬಾಲಕನ ನುಡಿಯು K ) )