ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಕರ್ಣಾಟಕ ಕಾವ್ಯಕಲಾನಿಧಿ ನಿಶ್ಚಯ ಮ್ರದ ವಿಶ್ವಾಸವಂ ಪಟ್ಟಿ ಸುತ್ತಿರುವುದು' ಎಂದು, ಆ ಬಾಲಕನ ಭಾಷೆ ಗಳಂ ಕೇಳುತ್ತ ಸಂತುಷ್ಟನಾಗುತ್ತಿರಲು; ಅಷ್ಟ ಅಲ್ಲೇ ಶಕ೦ತಳೆ - ಅಲ್ಲಿ ನಡೆದ ವೃತ್ತಾಂತವಂ ಋಷಿ ಮುಖ ವಚನದಿಂ ಕೇಳೆ, ಅಧಿಕ ಸಂತೋಷಯುಕ್ತಳಾಗಿ, ಪರ್ಣಶಾಲೆಯಿಂ ಪೊ ಪಿಟ್ಟು, ಒಡೆಯ ಗಂಟಿನಿಂದ ಒ:ದಾಗಿರುವ ಕೇಳಸಮಪದಿಂದಲೂ ಮಲಿನವಸ್ತ್ರದಿಂ ದಲೂ ವಿರಾಜಮಾನಳಾಗಿ ಜಲಪಾನವಂ ಗೆಯ್ಯು ತಪವಂ ಗೆಯ್ಯುತ್ತಿರ್ದ ವನ ಲಕ್ಷ್ಮಿಯೋ ಎಂಬಂತೆ ಬಿಳೋ ದ ಶರೀರದಿಂ ರಾಜಿಸುತ್ತ, ಮಲಿನವಸ್ತ್ರದಲ್ಲಿ ಕಟ್ಟಿದ ದಿವ್ಯರತ್ನ ದಂತೆ ನಾರಸೀರೆಯಲ್ಲಿ ಅಡಗಿರುವ ದೇಹಕಾಂತಿ ಯುಳ್ಳವಳಾಗಿ, ಬರುತ, ಎನ್ನ ಪುತ್ರನಾದ ಸರ್ವದಮನನ ಶರೀರದಲ್ಲಿದ್ದ ಮಲಿಕೆಯು ಭೂಮಿಗೆ ಬೀಳಲದಂ ಸುಲಭವಾಗಿ ತನ್ನ ಕರದಿಂ ತೆಗೆದು ಕೊಂಡವನು ಒಬ್ಬಾನೊಬ್ಬ ಪುರುಷನು ಯಾವನೋ ಎಂಬ ವಿಚಾರದಲ್ಲಿ ಅಭಿಲಾಷೆಯಿಲ್ಲದೆ, ಅವನೇ ದುಷ್ಯಂತಮಹಾ ರಾಯನಾಗಿರುವನೆಂದು ಎನ್ನ ಅದೃಷ್ಟದಲ್ಲಿ ಅಭಿಲಾಷೆಯುಂಟಾದುದು ಎಂದೂ, ಮತ್ತು ಇವನೇ ದುಷ್ಯಂತರಾಯನು ನಿಜಮಾದಲ್ಲಿ, ಎನ್ನೊ ಡನೆ ಸಾನುಮತಿಯು ಬಂದು ರಾಯನೂ ನಿನ್ನ೦ ಸ್ಮರಿಸಿಕೊಂಡು ಅಧಿಕ ವಿರಹವ್ಯಥೆ ಋ೦ ಪೊಂದುತ್ತ, ಆಹಾರವಂ ವರ್ಜಿಸಿರುವನೆಂದು ಹೇಳಿದ ವಾಕ್ಯವು ಯಥಾರ್ಥವಾಗಿ ನೋವು ದೆಂದೂ ಮನದಲ್ಲಿ ಯೋಚಿಸುತ್ತ ಬರುತ್ತಿರಲು ; - ರಾಯನು ಸ್ವಲ್ಪ ದೂರದಲ್ಲಿ ಬರುವ ಶಕುಂತಳೆಯಂ ಕಂಡು, ರೋಮಾಂ ಚದಿಂ ವ್ಯಾಪ್ತವಾದ ಶರೀರನಾಗಿ-ಅತ್ಯಂತ ಮಲಿನವಾದ ಸೀರೆಯನ್ನುಟ್ಟು ತಪ ವಂ ಗೆಯ್ಯುವುದ೬೦ ಕೃಶಾಂಗಿಯಾಗಿ, ಅತಿದು ಖದಿಂ ತೈಲಾದಿಸಂಸ್ಕಾರವಿಲ್ಲದೆ ಒಂದಾಗಿ ಬತ್ತಿಗಟ್ಟಿರುವ ಕೇಶಪಾಶವನುಳ್ಳವಳಾಗಿ, ಪರಿಶುದ್ಧ ಸ್ವಭಾವಶಾಲಿ ಯಾಗಿ, ನಿಷ್ಕರುಣಿಯಾದ ಎನ್ನಂತೆ ಬಹುಕಾಲದೀ ಬಂದ ವಿರಹವ್ಯಥೆ ಯಂ ವಹಿಸಿ ರುವಂತೆ ತೋರುವಳು ” ಎಂದು ನುಡಿಯುತ್ತಾ, ಅವಳ ಮುಖಕಮಲ ನನ್ನೇ ನೋಡುತ್ತಿರಲು; ಶಕುಂತಳೆಯು ಪಶ್ಚಾತ್ತಾಪದಿಂ ಕಾಂತಿಹೀನನಾಗಿರುವ ದುಷ್ಯಂತರಾಯನ ಕಂಡು, 6 ಇವನಾರೋ ದುಷ್ಯಂತರಾಯನಂತೆ ತೋತ್ರ ಮಂಗಳಾಂಗನಾದ ಎನ್ನ ಪುತ್ರನ ಸರ್ವಾಂಗವನ್ನಾ ಲಿಂಗಿಸಿ ತನ್ನ ಶರೀರಸಂಗದಿಂದವನ ದೇಹವಂ ಕಂದಿ ಸುತ್ತಿರುವನು! ” ಎಂದು ಸಮಾಜಕ್ಕೆ ಬರಲು ; ಆ ಬಾಲಕನು ಆ ದುಷ್ಯಂತರಾಯನ ಸಮಾಜವಂ ಬಿಟ್ಟು ಶಕುಂತಳೆಯ