ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೪ -ಕರ್ಣಾಟಕ ಕಾವ್ಯಕಲಾನಿಧಿ ಮುನಿಯು ಅಧಿಕಾನಂದಭರಿತನಾಗಿ- ಎಲೈ ಧರ್ಮಾತ್ಮಕನಾದ ರಾಯನೇ, ಇನ್ನೇನು ನಿನಗೆ ಪ್ರಿಯವಾದ ಕಾರ್ಯವಂ ಮಾಡಲಿ, ಆದಂ ಪೇಳು ಎನಲು; ರಾಯನು- ಎಲೈ ಸ್ವಾಮಿಯೇ, ನಿಮ್ಮ ಚಿತ್ರಕ್ಕೆ ಏನು ತೋರುತ್ತಿರು ವುದೋ ಅದೆಲ್ಲ ವಂ ಎನ್ನ ಶ್ರೇಯಸ್ಸಿಗೋಸುಗ ಮಾಡಬಹುದಲ್ಲದೆ ಇಂಥದಂ ಮಾಡೆಂದು ಬಿನ್ನ ಸಲಹಯೆನು ಎಂದು ಆ ಕಶ್ಯಪಬ್ರಹ್ಮನಿಂದಲೂ ಅದಿತಿದೇವಿ ಯಿಂದಲೂ ಅಪ್ಪಣೆಯಂ ಪಡೆದು ಮೇನಕೆಯಿರುವ ಸ್ಥಾನಕ್ಕೆ ಬಂದು, ಅವಳಂ ಮೃದುಮಧುರೋಕ್ತಿಯಿಂ ಸಂತುಷ್ಟಳಂ ಗೆಯ್ಯು ಅವಳ ಅನುಜ್ಞೆಯಂ ಕೈಕೊಂ ಡು, ಪತ್ನಿಪುತ್ರಸಹಿತನಾಗಿ ಆ ಯಿಂದ್ರರಥಾರೋಹಣವು ಗೆಯು ವಾಯುಮಾ ರ್ಗದಿಂ ನವರತ್ನ ಖಚಿತಚಂದ್ರಶಾಲಾಸಹಸ್ರಂಗಳಿಂ ಬಂಧುರವಾದ ತನ್ನ ಪ್ರತಿ ಜ್ಞಾನಪುರವಂ ಸೇರಿ, ಇಂದ್ರನಸಾರಥಿಯಾದ ಮಾತಲಿಗೆ ರತ್ನಾಭರಣಗಳಿಂದ ಆನಂ ದವ ಪುಟ್ಟಿಸಿ ಸ್ವರ್ಗಕ್ಕೆ ರಥವಂ ಕೊಂಡು ಪೋಗುವಂತೆ ಆಜ್ಞಾಪಿಸಿ, ತಾನು ದಿವ್ಯರತ್ನ ಸಿಂಹಾಸನದಲ್ಲಿ ಕುಳಿತು, ಸಂತುಷ್ಟ ಚಿತ್ತನಾಗಿ, ಧರ್ಮದಿಂ ಸಮಸ್ತ ಪ್ರಜಾಪಾಲನವಂಗೆಯ್ಯುತ್ತಿರ್ದನು. VSNANA {{{{}E: 4; REBSTRA8 :