ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಕರ್ಣಾಟಕ ಕಾವ್ಯಕಲಾನಿಧಿ ಪುಣ್ಯಜನಪರಿವೃತನಾಗಿ, ವರುಣನಂತೆ ಸ್ವರ್ಣಕ್ಕೊಮಾಭಿವೃದ್ಧಿಯ ಪಡೆದು, ವಾಯುವಿನಂತೆ ಜಗತ್ರಾಣನಾಗಿ, ಕುಬೇರನಂತೆ ರಾಜರಾಜನೆನಿಸಿ, ಆದಿಶೇಷನಂತೆ ಅನೇಕ ಭೋಗಾನುಷಕ್ತನಾಗಿ ಭೂಭಾರವಾಹಿಯೆನಿಸಿ, ಸೂ‌ನಂತೆ ಪದ್ಮಾಹಾ ದಕಾರಿಯಾಗಿ ಸನ್ನಿಹಿತಬುಧನೆನಿಸಿ, ಚಂದ್ರನಂತೆ ಕುವಲಯಾನಂದಜನಕನಾಗಿ ಸನ್ಮಾರ್ಗನಿರತನೆನಿಸಿ, ವರ್ಷಾಕಾಲದ ಮೇಘದಂತೆ ವಿಮಲತರವಾರಿಧಾರಾತಿರಸ್ಕೃತ ರಾಜಹಂಸನೆನಿಸಿ, ಸರ್ವದೇವಮಯೊರಾಜಾ, ಎಂಬ ಖುಷಿವಾಕ್ಯವಂ ಯಥಾ ರ್ಥವಂ ಗೆಯ್ಯುತ ಸತ್ಯಾಚಾರನಾಗಿ ಪ್ರಕಾಶಿಸುತ, ಗಾಮನಂತೆ ಪ್ರೇಮದಿಂ ರಾಜ್ಯವನ್ನಾಳುತ್ತಿರಲು:- ಕಾಲಕಾಲಕ್ಕೆ ಆಗುವ ಮಳೆಗಳಿಂದಲೂ, ದಿನದಿನದಲ್ಲೂ ಅಭಿವೃದ್ಧಿಯಂ ಪೊಂದುತ್ತಿರುವ ಬೆಳೆಗಳಿಂದಲೂ,ನಾನಾವಿಧ ಪುಷ್ಪವಾಸನೆಗೆ ಮೊತ್ತವಾಗಿ ಎರಗು ತಿರುವ ಅಳಿಗಳಿಂದಲೂ ಇಳೆ ಯೆಲ್ಲಾ ಕಳೆಯಿರಿ ಸಂಪೂರ್ಣವಾಗಿ, ಗೋವುಗಳೆಲ್ಲಾ ಅಧಿಕಕ್ಷೀರಂಗಳುಳುವಾಗಿ, ಸಮಸ್ತ ಸ್ತ್ರೀಯರುಗಳು ಸುಮಂಗಲಿಯರಾಗಿ ಪತಿ ವ್ರತಾಶಿರೋಮಣಿಗಳೆನಿಸಿ ತಮ್ಮ ತಮ್ಮ ಪತಿಗಳಲ್ಲಿ ಅತಿಶಯವಾದ ಭಕ್ತಿಯುಕ್ತ ರಾಗಿ, ಪುತ್ರಪೌತ್ರಾಭಿವೃದ್ಧಿ ಯಂ ಪಡೆದಿರುವರು. ಸಮಸ್ತ ಪ್ರಜೆಗಳು ಈತಿ ಬಾಧೆಗಳಿಲ್ಲದೆ ಧನಧಾನ್ಯಗಳಿಂ ಪುಷ್ಟರಾಗಿ, ಪ್ರಭುವಿನಲ್ಲಿ ವಿಶ್ವಾಸಶಾಲಿಗಳಾಗಿ, ತಾವು ಬಿತ್ತಿದ ಧಾನ್ಯಂಗಳಂ ನಷ್ಟವಂ ವೊಂದದಂತೆ ಸಮಸ್ತ ಸಸ್ಯ ಸಮೃದ್ಧಿಯಂ ಪಡೆದು ಜೋರೋಪದ್ರವಶೂನ್ಯರಾಗಿ ಅಧಿಕಾನಂದಯುಕ್ತರಾಗಿರುವರು. ಈಪ್ರಕಾರವಾಗಿರುವಲ್ಲಿ ಒಂದಾನೊಂದು ದಿನದಲ್ಲಾ ದುಷ್ಯಂತರಾಯನು ತನ್ನ ಸಭೆಯಂ ಪ್ರವೇಶಿಸಿದನು. ಆ ಸಭೆಯಂತಿರುವುದೆಂದರೆ:-ವಜಸ್ತಂಭಗಳಿಂ, ಸಜ್ಜೆಲೋವೆಗಳಿ೦, ಕಡೆದು ಮಾಡಿದ ಪವಳದ ಮೊಗಸರಗಳಿಂ, ಇಂದ್ರನೀಲದ ತೊಲೆ ಜಂತಿಗಳಿಕೆ ಸುಂದರವಾಗಿ, ರತ್ನಮಯಭಿತ್ತಿಗಳಿ೦ ರಂಜಿಸುತ, ಸುಧರ್ಮಸಭೆಯ ಸೊಗಸು ಒಳಗೊಂಡಿರುವ, ಅನೇಕ ರತ್ನಗನ್ನಡಿಗಳೆಂ ರಾಜಿಸುತ, ಪ್ರಭಾತಕಾಲ ದಂತ ಪದ್ಮರಾಗಭಾಸುರಮಾಗಿ, ತಪೋವನದಂತೆ ಮುಕ್ತಾಹಾರವಿಭೂಷಿತವಾಗಿ, ಉಪವನದಂತೆ ಪ್ರವಾಳಮಯಮೆನಿಸಿ, ಅನೇಕ ಮಂಡಲಿಕರ ತಂಡಂಗಳಿಂ ಮಂಡಿತ ಮಾಗಿ, ಒಂದೆಡೆಯಲ್ಲಿ ವೇದಾಂತ ಮಿಮಾಂಸೆ ಮೊದಲಾದ ಶಾಸ್ತ್ರಂಗಳರಿ ವಿಚಾರಿ ಸುತ ಅನೇಕ ಜಯಪತ್ರಗಳ ಸಂಪಾದಿಸಿರುವ ವಿದ್ವಾಂಸರುಗಳ ಶಬ್ದ ಕೋಲಾಹಲದಿ ಯುಕ್ತವಾಗಿ, ಒಂದು ಪ್ರದೇಶದಲ್ಲಿ ಉಪಮಾನೋಲ್ಲೇಖರೀತಿಪಾಕವೃತ್ತಿಗುಣಾ ಲಕಕಾರ ಯಮಕನುಪ್ರಾಸ ಶಯ್ಯಾ ವ್ಯಂಗ್ಯ ಮೊದಲಾದ ಕವಿತಾಪರಿಪಾಕವ