ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ೧೨ -ಕರ್ಣಾಟಕ ಕಾವ್ಯಕಲಾನಿಧಿ ಧಕಾರ ಚಟಾವಿಘಟನ ಪಟುನಟನ್ಮಹಾನಟನಕುಟತಟಕರ್ಯಟಟನೀತವಾಂತರಂಗದಳಂಗೋ ತುಂಗತರಂಗ ಸಂಗರಭಂಗಸಂಭ್ರಮೋಜೃಂಭಮಾಣಗಂಭೀರವಾಗು೦ಭ ಸಂಭಾವಿತ ಗರನಗರ ವರನಿಲಯ ಚಂದ್ರ ಚೂಡಚರಣಾರವಿಂದ ಸೇವಾಮರಂದ ನಿರಂತರನಿಷೇವಣ ಸ್ವಯಂವೃತಕವಿತಾವಧೂ ರತ್ನ ರಾಜಾಧಿರಾಜಮಹಾರಾಜ ಚಾಮರಾಜ ಪುತಾತ್ರೇಯಸಗೋತ್ರ ಪವಿತ್ರಚರಿತ ಶಂಖ ಚಕ್ರ ಮಕರ ಮತ್ತ್ವ, ಶರಭಸಾಳ್ವ ಗಂಡಭೇರುಂಡ ಧರಣೀವರಾಹ ಹನುಮದ್ದುರುದ ಕಂಠೀರವಾದ್ಯನೇಕ ಬಿರುದಾಂಕಿತ ನರಸತಿಬಿರುವ ಶ್ರೀ ಚಾಮುಂಡಿಕಾವರಪ್ರಸಾದಲಬ್ದ ಮಹಿಶೂರಮಹಾಸಂಸ್ಥಾನ ಧ್ಯದೇದೀಪ್ಯಮಾನಕುಲಕ್ರಮ ಗತ ದಿವ್ಯರತ್ನಸಿಂಹಾಸನಾರೂಢ ಶ್ರೀಕೃಷ್ಟರಾಜ ಕಂಠೀರವರು ಸರಸಜನಾನಂದ ಕರವಾಗಿ ಲೋಕೋಪಕಾರಾರ್ಥವಾಗಿ ನವರಸಭರಿತವಾಗಿ ಕರ್ನಾಟಕಭಾಷೆಯಿಂ ವಿರಚಿಸಿದ ಕೃಷ್ಣರಾಒ ವಾಣೀವಿಲಾ ಸರಿತ್ಸಾ ಕರವೆಂಬ ಶಾಕುಂತಳನಾಟಕದ ನವೀನ ಟೀಕಿನಲ್ಲಿ ದುಷ್ಯಂತರಾಯನು ಮೃಗಯರ್ಥವಾಗಿ ಅರಣ್ಯಕ್ಕೆ ಬಂದನೆಂಬ ಪ್ರಥಮಕಲ್ಲೋಲದಲ್ಲಿ ಪ್ರಥಮತರಂಗಂ. - ಇ ದೆ .- ಪ್ರಥಮಕಲ್ಲೊಲದಲ್ಲಿ ದ್ವಿತೀಯ ರಂಗ ಅನಂತರದಲ್ಲಾದುಷ್ಯಂತರಾಯನು ರಥದೊಳು ಕುಳಿತು ಇನ್ನೂ ಅನೇಕ ಮೃಗಸಮೂಹವಂ ಸಂಹರಿಸುವೆನೆಂಬ ಇಚ್ಛೆಯಿಂ ಆ ಅರಣ್ಯದಲ್ಲಿ ಮೃಗಗಳಂ ಹುಡು ಕುತ್ತಿರಲು - ಅಷ್ಟಲ್ಲೆ ಒಂದಾನೊಂದು ಗಂಡು ಹುಲ್ಲೆಯ ಮುಂಭಾಗದಲ್ಲಿ ಸಂಚರಿ ಸಲಾದುಷ್ಯಂತರಾಯನಾಮೃಗವನ್ನನುಸರಿಸಿ ರಥವು ನಡೆಸುವಂತೆ ಸಾರಥಿಗೆ ಆಜ್ಞೆಯನ್ನೀಯಲಾಸಾರಥಿಯು ಸಮಸ್ತ ಸೇನೆಯು ಹಿಂದುಳಿಯುವಂತೆ ರಥವ ನಡೆಸುತ್ತ ರಥದಲ್ಲಿದ್ದ ರಾಯನಂ ಕುಲಿತು ಓಡುತ್ತಿರುವ ಮೃಗವಂ ನೋಡಿ, « ಎಲೈ ಸ್ವಾಮಿಯೇ ಕೃಷ್ಣ ಸಾರಂಗದಲ್ಲಿಯೂ ನಾರಿಯಿಂ ಸೇರಿದ ಧನುಸ್ಸಂ ಧರಿಸಿರುವ ನಿನ್ನಲ್ಲಿಯೂ ಇರಿಸಲ್ಪಟ್ಟ ದೃಷ್ಟಿಯುಳ್ಳ, ನಾನು ಪೂರ್ವದಲ್ಲಿ ಮೃಗರೂ ಪಿನ ರಾಕ್ಷಸನು ಅನುಸರಿಸಿ ಹೋಗುತಿರ್ದ ಪರಶಿವನನ್ನಾಗಿ ನಿನ್ನಂ ತಿಳಿಯುವೆನು.” ಎಂದು ನುಡಿಯಲಾರಾಯನು- ಎಲೈ ಸಾರಥಿಯೇ, ಈ ಮುಂಭಾಗದಲ್ಲಿ