ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ -ಶಕುಂತಲವಾಟಿಕ ನವೀಸಟೀಕೆ ವಚನವಂ ಶಿರಸಾ ವಹಿಸಿದೆನು. ಈಗ ತಾವು ಎಲ್ಲಿಗೆ ಬಿಜಯಂಗೆಯ್ಯುವಿರಿ. ಎನಗಿನ್ನೇನು ಆಜ್ಞೆಯನ್ನೀಯುವಿರಿ ” ಎಂದು ನುಡಿಯಲಾವೈಖಾನಸರು ಪಿಯು ಈಗ ನಾವು ಸಮಿತ್ತು ದರ್ಭೆಗಳ ತರುವುದಕ್ಕೆ ಪೋಗುವೆವು, ಈ ಮುಂಭಾಗದಲ್ಲಿ ಮಾಲಿನಿಯೆಂಬ ನದಿಯ ತೀರದಲ್ಲಿ ನಮಗಧಿಪತಿಯಾದ ಕಶ್ಯಪಗೋತ್ರೋತ್ಪನ್ನನಾದ ಕಣ್ವಮುನೀಶ್ವರನ ಪುಣ್ಯಾಶ್ರಮವು ಕಾಣು ವುದು. ನಿಮಗೆ ಅನ್ಯತ್ರ ಕಾರ್ಯವಿಲ್ಲದಿದ್ದರೆ ಆ ಆಶ್ರಮಪ್ರವೇಶವಂ ಗೈದು ಅಲ್ಲಿ ಮಾಡತಕ್ಕ ಅತಿಥಿ ಸತ್ಕಾರವಂ ಪರಿಗ್ರಹಿಸಬಹುದು. ಮತ್ತು ತಪಸ್ಸ ದ್ರವ್ಯಂ ಗಳಾಗಿರುವಂಥ ಋಷಿಗಳ ಧರ್ಮಕರಂಗಳಾಗಿ ವಿಷ್ಣು ವಿಲ್ಲದೆ ಇರುವಂಥ ಸತ್ಕರ್ಮಿ ಗಳಂ ನೋಡಿ ಧನುಸ್ಸಿನ ನಾರಿಯ ಸಂಘರ್ಷಣೆಯಿಂ ಜಡ್ಡುಗಟ್ಟಿರುವ ಎನ್ನ ಭುಜವು ಸಮಸ್ತಋಷಿಗಳಂ ಧರ್ಮದಲ್ಲಿ ಸಂರಕ್ಷಿಸುವುದೆಂದು ನಿನ್ನ ಪರಿಯಂ ನೀನೇ ತಿಳಿ ಯುತ್ತಿರುವೆ ಎಂದು ನುಡಿಯಲಾರಾಯನು ಆಖುಷಿಯಂ ಕುತು- ಎಲೈ ಪೂಜ್ಯನಾದ ವೈಖಾನಸಋಷಿಶ್ರೇಷ್ಠನೇ, ನಿನಗಧಿಪತಿಯಾದ ಕಮಹಾಮು ನಿಯು ನೀನು ಪೇಳ ಆತಪೋವನದಲ್ಲಿ ಇರುವನೋ ಇಲ್ಲವೋ ” ಎಂದು ಬೆಸಗೊ ಳ್ಳಲು; ಆವೈಖಾನಸಮಪಿಯು-«« ಎಲೈ ಮಹಾರಾಜನೇ, ಈಗ ತಾನೆ ತನ್ನ ಪುತ್ರಿ ಯಾದ ಶಕುಂತಲೆಗೆ ತನ್ನ ಆಶ್ರಮಕ್ಕೆ ಬಂದಂಥ ಜನರುಗಳಿಗೆ ಉಪಚಾರವಂ ಗೆಯುವಂತೆ ಅಪ್ಪಣೆಯನ್ನಿತ್ತು ಆಶಕುಂತಲೆಗೆ ದೈವಸಂಘಟನೆಯಿಂದುಂಟಾಗುವ ಕಾರ್ಯ ಮಾಡುವುದಕ್ಕೋಸುಗ ಸೋಮ ತೀರ್ಥವೆಂಬ ಸಿದ್ಧಾಶ್ರಮವಂ ಕುತು ಪೋಗಿರುವರು. ನೀನು ಆ ತಪೋವನಕ್ಕೆ ಪೋದಲ್ಲಿ ಶಕುಂತಳೆಯು ನಿನಗೆ ಅನುರೂಪವಾದ ಸತ್ಕಾರವಂ ರಚಿ ಸುವಳು' ಎಂಬ ವಾಕ್ಯವಂ ಪೇಳಲಾರಾ ಯನು__“ಎಲೈ ಋಷಿಶ್ರೇಷ್ಟನೇ ನೀನು ಹೇಳಿದಂತೆ ಆ ತಪೋವನಕ್ಕೆ ಪೋಗಿ ಋಷಿ ಪುತ್ರಿಯಾದ ಶಕುಂತಲೆಯಂ ನೋಡುವೆನು. ಆಕಖಮೇಶ್ವರನು ಆ ಆಶ್ರಮದಲ್ಲಿ ಇಲ್ಲದೆ ಇದ್ದಲ್ಲಿಯ ಭಕ್ತಿಯುಕ್ತಳಾದ ಆಶಕುಂತಳೆಯು ನಾನು ಬಂದಿರ್ದ ವಾರ್ತೆ ಯನ್ನು ಋಷಿಯು ಬಂದ ಮೇಲೆ ಪೇಳುವಳು. ಆದ್ದರಿ೦ದಾತಪೋವನಕ್ಕೆ ಅಗತ್ಯ ವಾಗಿ ಪೋಗುವೆನು?' ಎಂದು ನುಡಿದ ಆ ರಾಯನ ವಾಕ್ಯಕ್ಕೆ ವೈಖಾನಸಋಷಿಯು ತಾನು ಸವಿತ್ತು ದರ್ಭೆಗಳ ತರುವುದಕ್ಕೆ ಪೋಗುವನೆಂದು ರಾಜಾಜ್ಞೆಯಂ ಪಡೆದು ಶಿಷ್ಯರಿಂದೊಡಗೂಡಿ ಪೋಗಲು ಆ ರಾಯನು ಸಾರಥಿಯಂ ಕುರಿತು “ ಎಲೈ ಸಾರಥಿಯೇ, ಕಣ್ವಮುನೀ ಶ್ವರನ ಪುಣ್ಯಾಶ್ರಮದ ಸಂದರ್ಶನದಿಂದೆನ್ನ ಶರೀರವಂ ಪಾಪರಹಿತವನ್ನಾಗಿ ಮಾಡು