ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

එන ಕರ್ಣಾಟಕ ಕಾವ್ಯಕಲಾನಿಧಿ. ವೆನು, ಆ ಆಶ್ರಮವಂ ಕು" ತು ಅಶ್ವಗಳಂ ನಡೆಸಂದು ಅಪ್ಪಣೆಯನೀಯಲಾಸಾರ ಥಿಯು ಆಯುಷ್ಮಂತನಾದ ನಿನ್ನಾಜ್ಞೆಯು ಎಂತಾಗುವುದೂ ಆರೀತಿಯಿಂ ನಡೆದು ಕೊಳ್ಳುವೆ ನೆಂದು ಆಕಣಾಶ್ರಮದ ಸಮೀಪಕ್ಕೆ ಮರಳಿ ರಥವಂ ನಡೆಸಲಾರಾಯ ನು ಆ ತಪೋವನದ ನಾಲ್ಕು ದಿಕ್ಕಿನಲ್ಲಿರುವ ರಮ್ಯವಾದ ಪ್ರದೇಶವಂ ನೋಡಿ ಎಲೆ ಸಾರಥಿಯೇ, ಸುಂದರವಾದ ಈತಪೋವನದ ಮುಂಭಾಗದಲ್ಲಿ ಕಾಣುವ ವಿಸ್ತಾರವಾದ ಪ್ರದೇಶದ ಸೌಂದರ್ಯವು ಅನ್ಯರಿಂಪೇಳಲ್ಪಡದೆ ಇದ್ದರೂ ಚೆನ್ನಾಗಿ ತಿಳಿಯುತಿರುವು ದೆಂದು ನುಡಿಯಲಾಸಾರಥಿಯು-ಎಲೈ ಸ್ವಾಮಿಯೇ, ಯಾರೂ ಹೇಳದೆ ಈತಪೋವ ನದ ಸೌಂದರ್ಯವು ಎಂತು ಕಾಣುವುದು? ಎನ್ನಲಾರ:ಯನು 'ಎಲೈ ಸಾರಥಿಯೇ, ನೀನು ನೋಡುವುದಿಲ್ಲವೋ ಏನು, ಇದೋ ಈ ಸ್ಥಳದಲ್ಲಿ ಹುಲ್ಲುಗಳಿ೦ ಪ್ರಟ್ಟಿದ ಧಾನ್ಯ ಗಳು ಶುಕಂಗಳನ್ನೊಳಗೊಂಡಿರುವ ಕೋಟರಂಗಳ ಮುಖದಿಂ ವೃಕ್ಷಗಳ ಬುಡಂ ಗಳಲ್ಲಿ ಬಿದ್ದು ಚೆಲ್ಲಿರುವುವು. ಆದ್ಮಿ೦ದಲೇ ಬೇಡರು ಮೊದಲಾದ ದುಷ್ಟ ಜನರ ಬಾಧೆಯಿಲ್ಲ ವೆಂದು ತೋಚುವುದು. ಒಂದು ಪ್ರದೇಶದಲ್ಲಿ ಇಂಗಳದ ಹಣ್ಣುಗಳು ಭೇದಿಸಿದ್ದ ಹಿ೦ದಲೇ ನುಣುಪಾಗಿರುವ ಶಿಲೆಗಳು ಈತೈಲನಂ ನೆತ್ತಿಗೆ ಹತ್ತಿಸಿಕೊಂಡು ಸ್ವಲ್ಪ ಹೊತ್ತಿನಲ್ಲಿ ಬರುಷಿಗಳು ಸ್ನಾನಾರ್ಥವಾಗಿ ನದೀತಟಾಕಸರೋವರಂಗಳಂ ಕುತು ಹೋಗಿರುವರೆಂಬ ಅಭಿಪ್ರಾಯವಂ ಸೂಚಿಸುತ್ತಿರುವವು. ಹುಲ್ಲೆ ಸಾರಂಗ ಕರಡಿ ಕಾಡೋಣ ಮೊದಲಾದ ಮೃಗಂಗಳು ಬಾಲ್ಯದಿಂ ಖುಷಿಗಳಲ್ಲಿ ವಿಶ್ವಾಸವಂ ಪಡೆದಿರುವುದಿಂದಲೇ ನಮ್ಮ ರಥಧ್ವನಿಗಳಂ ಕೇಳಿ ಬೆದರಿ ಓಡಿಹೋಗದೆ ಜಾತಿ ವೈರಸಂ ಬಿಟ್ಟು ಭಯರಹಿತವಾಗಿ ಸಂಚರಿಸುತ್ತಿರುವುವು. ಸರೋವರ ಮೊದ ಲಾದ ಜಲಾಶಯಂಗಳ ಮಾರ್ಗoಗಳು ನಾರುಮಡಿಯ ಅಂಚಗಳಿ೦ ಸುರಿವ ಜಲ ಧಾರೆಗಳ ರೇಖೆಗಳಿಂವಂಚಿತಂಗಳಾಗಿ ವಿರಾಜಿಸುತ್ತಿರುವುವ ಎಂದು ನುಡಿಯಲು; ಆ ಸಾರಥಿಯು ಸ್ವಾಮಿಯವರು ಅಪ್ಪಣೆಯ ತುದು ಯುಕ್ತವೇ ಸರಿ, ಎಂದು ರಥಮಂ ನಡೆಸುತ ಬರಲು ; ರಾಯನು ಕೆಲವು ದೂರ ಆ ತಪೋವನದಲ್ಲಿ ರಥದಲ್ಲಿ ಕುಳಿತು ಬಂದು ಎಲೈ ಸೂತನೇ, ಈ ವನವಾಸಿಗಳಾದ ಋಷಿಗಳಿಗೆ ನಾನು ರಥದೊಳ್ ಕುಳಿತು ಪೋಗುವುದ೬೦ ಬಾಧೆಯುಂಟಾಗಬಾರದು. ಸ್ಥಳದಲ್ಲೇ ರಥವು ನಿಲ್ಲಿಸು ” ಎಂದು ಹೇಳಿ, ಸಾರಥಿಯು ರಥವು ನಿಲ್ಲಿಸುವಂತೆ ಮಾಡಿ, .ಆ ರಥವನ್ನಿಳಿದು, “ ಎಲೈ ಸಾರಥಿಯೇ, ಈ ತಪೋವನವು ಸೌಮ್ಯಾಕಾರವುಳ್ಳವರಿಂ ಪ್ರವೇಶಿಸುವುದಕ್ಕೆ ಯೋಗ್ಯವಲ್ಲದೆ ಕ್ರೂರವೇಷಧಾರಿಗಳಿ೦ ಹೊಗುವುದಕ್ಕೆ ಸಾಧ್ಯ ವಲ್ಲವಾಗಿರುವುದಾದಿಂದ ಈ ಆಯುಧಾಭರಣ ಮೊದಲಾದ ವಸ್ತುಗಳು