ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಕರ್ಣಾಟಕ ಕಾವ್ಯಕಲಾನಿಧಿ ಕಾರರಾದ ಈ ಸುಂದರಿಯರ ಸಂದರ್ಶನವು ಹೃದಯಾನಂದವನ್ನುಂಟುಮಾಡುತ್ತಿರು ವುದು ಆಶ್ಚರ್ಯವಾಗಿ ತೋಡುವುದು. ಏಕೆಂದರೆ ಈ ತಪೋವನದಲ್ಲಿ ಕಂದ ಮಲಂಗಳಂ ಭಕ್ಷಿಸಿಕೊಂಡು ವಾಸವಂ ಗೆಯ್ಯುವ ಈ ಸ್ತ್ರೀಯರುಗಳ ರೂಪಲಾ ವಣ್ಯ ಸೌಂದರ್ಯಾದಿಗುಣಗಳು ದೊರೆಯಾದ ಎನ್ನ ಅಂತಃಪುರದಲ್ಲಿರುವ ಸ್ತ್ರೀಯ ರುಗಳಿಗೂ ದುರ್ಲಭಂಗಳಾಗಿರುವುವು. ಇದಲ್ಲದೆ ಈ ವನದಲ್ಲಿ ವೃದ್ಧಿಯಂ ಪೊಂದಿ ರುವ ದುಂಡುಮಲ್ಲಿಗೆ ಜಾಜೆ ಸೇವಂತಿಗೆ ಮೊದಲಾದ ಲತೆಗಳು ಪುಷ್ಪಪರಿಮಳ ಮೊದಲಾದ ತಮ್ಮ ತಮ್ಮ ಗುಣಗಳಿ೦ ಎನ್ನ ಉಪವನದಲ್ಲಿರುವ ಲತೆಗಳಂ ತಿರಸ್ಕಾ ರವಂ ಗೈಯ್ಯುತಿರುವುವು-ಎಂದು ತಿಳಿದು, ಆದರೂ ಈ ಸ್ತ್ರೀಯರುಗಳು ಮಾಡುವ ಚೇಷ್ಟೆಗಳು ಇವರ ಶೀಲಾದಿಗುಣಗಳಂ ಈ ವೃಕ್ಷದ ಮಹಿಳೆಯನ್ನನುಸರಿಸಿ ತಿಳಿ ಯುವೆನೆಂದು ಸಂತುಷ್ಟನಾಗಿ ಬರುತಿರ್ದನು. ಎಂಬಲ್ಲಿಗೆ ಗದ್ಯ-ಚಂಡಕರಮಂಡಲೋತ್ಸಂಡತೇಜಃಪ್ರಕಾಂಡಕಾಂಡಷಂಡಖಂಡಿತಾಖಂಡ ಶೌರ್ಯ ಪರಿಮಂಡಿತ ಭಂಡದ್ದಂಡಾರಿ ಮಂಡಲಕಂಡೂಲದೋರ್ದಂಡಪಾಂಡಿತ್ಯ ಪಾಂಡುರುಚಖಂಡಡಿಂ ಡೀರಪುಂಡರೀಕ ಪರಿಪಾಂಡುರಯಶಃ ಪಿಚಂಡಿಲ ಬ್ರಂಹಾಂಡಭಾಂಡೋದ್ಭಟ ಕಾಲಕೂಟಪ್ರತಿಭಟ ಕಟುಕಪಟ ನಿಶಾಟಕೂಟ ಪಾಟನಲಂಪಟನಿಟಿಲಪುಟಘಟಿತ ವಿಕಟ ಕೃಷಿಟಯೋನಿ ಕುಟಿಲಮೊಹಾಂ ಧಕಾರಚ್ಚ ಟಾವಿಘಟನ ಪಟುನಟನ್ಮಹಾನಟ ಮಕುಟತಟಪಟ ಟನೀತಲಾಂತರಿಂಗದಭಂಗೋ ತುಂಗತರಂಗ ಸಂಗರಭಂಗಸಂಭ್ರಮೋಜೃಂಭಮಾಣಗಂಭಿರವಾಗುಂಭ ಸಂಭಾವಿತ ಗರನಗರ ವರನಿಲಯ ಚಂದ್ರಚೂಡಚರಣಾರವಿಂದ ಸೇವಾಕರಂದ ನಿರಂತರನಿಷೇಷಣ ಸ್ವಯಂವೃತಕವಿತಾ ವಧ್ರರತ್ನ ರಾಜಾಧಿರಾಜಮಹಾರಾಜ ಶ್ರೀಚಾಮರಾಜ ಪುತ್ರಾತ್ಯ ಸಗೋತ್ರ ಪವಿತ್ರಚರಿತ್ರ ಶಂಖಚಕ್ರ ಮಕರ ಮತ್ಸ ಶರಭಸಾಳ್ಳ ಗಂಡಭೇರುಂಡ ಧರಣೀವರಾಹ ಹನುಮದ್ಧ ರುಡ ಕಂಠಿ ರವಾದ್ಯನೇಕ ಬಿರುದಾಂಕಿತ ನರಪತಿಬಿರುವ ಶ್ರೀಚಾಮುಂಡಿಕಾವರಪ್ರಸಾದಲಬ್ದ ಮಹೇಶ್ವರಮಹಾ ಸಂಸ್ಥಾನದೇದೀಪ್ಯಮಾನಕುಲಕ್ರಮಾಗತದಿವ್ಯರತ್ನಸಿಂಹಾಸನಾರೂಢ ಶ್ರೀಕೃಷ್ಣರಾಜಕ೦ಠೀರವರು ಸರಸಜನಾನಂದಕರವಾಗಿ ಲೋಕೋಪಕಾರಾರ್ಥವಾಗಿ ನವರಸಭರಿತವಾಗಿ ಕರ್ಣಾಟಕ ಭಾಷೆಯಿಂ ವಿರಚಿಸಿದ ಕೃಷ್ಣರಾಜವಾಣೀವಿಲಾಸರತ್ನಾಕರವೆಂಬ ಶಾಕುಂತಳನಾಟಕದ ನವೀನ ಟೀಕಿನಲ್ಲಿ ದುಷ್ಯಂತರಾಯನು ಕಣ್ಣಾಶ್ರಮವಂ ಪ್ರವೇಶಿಸಿ ಶಕುಂತಲೆ ಮೊದಲಾದವರ ವಿಲಾಸವಂ ನೋಡುತಿರ್ದನೆಂಬ ಪ್ರಥಮಕಲ್ಲೊಲದಲ್ಲಿ ದ್ವಿತೀಯ ತರಂಗಂ.