ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಕಂತಲನಾಟಕ ನವೀನಟೀಕೆಪ್ರಥಮಕಲ್ಲೋಲದ ತೃತೀಯರಂಗ ಅನಂತರದಲ್ಲಿ ಆ ಶಕುಂತಲೆಯು ತನ್ನ ಪ್ರಿಯಸಖಿಯರಾದ ಅನಸೂಯೆ ಪ್ರಿಯಂವದೆಯರಿಂದೊಡಗೂಡಿ ಸಂಪಿಗೆ ಪುನ್ನಾಗ ಮೊದಲಾದ ಲತೆಗಳಿಗೆ ನೀರನ್ನೆ ಕತೆ ಯುತ ಆ ಸಖಿಯರುಗಳಂ ಕರೆಯುತಿರಲು ಅನಸೂಯೆಯು_ಎಲೆ ಶಕುಂತಳೆ! ಯಾವ ಕಾರಣದಿಂದೀಯಿರುವಂತಿಗೆ ಯ ಮಾಲೆಯಂತೆ ಮೃದುವಾದ ಶರೀರವ ನಿನ್ನಂ ಈ ವೃಕ್ಷಗಳ ಪಾತಿಗಳಿಗೆ ನೀರೆರೆಯುವಂತೆ ನಿನ್ನ ತಂದೆಯಾದ ಕಣ್ವಮುನಿಯು ನೇಮಿಸಿರುವನೋ ಅದw೦ ನಿನ್ನ ತಂದೆಗೆ ನಿನ್ನ ಮೇಲಣ ಪ್ರೀತಿಗಿಂತಲೂ ಈ ಆಶ್ರಮವೃಕ್ಷಂಗಳಲ್ಲಿ ಅಧಿಕ ಪ್ರೇಮ ವಿರುವುದೆಂದು ಊಹಿಸುತ್ತಿರುವೆನು ” ಎನಲಾಶಕುಂತಲೆಯು_* ಎಲೆ ಅನಸೂಯೆ, ಎನ್ನ ತಂದೆಯ ಆಜ್ಞೆ ಮಾತ್ರ ಮುಖ್ಯವಲ್ಲ, ಎನಗೂ ಈ ವೃಕ್ಷಂಗಳಲ್ಲಿ ಒಡ ಹುಟ್ಟುಗಳಲ್ಲಿರುವ ವಿಶ್ವಾಸವಿರುವುದಿ೦ದಲೇ ಇಂತು ಸಂತೋಷದಿಂದೀ ಪಾತಿ ಗಳಿಗೆ ಜಲವನ್ನೆ ಕರೆಯುವೆ'ನೆಂದು ಹೇಳುತ್ತಿರಲು ; ಆ ದುಷ್ಯಂತರಾಯನು ಶಕುಂತಲೆಯು ಸಖಿಯರಿಂದೊಡಗೂಡಿ ವೃಕ್ಷಂಗ ಳಿಗೆ ಜಲವನ್ನೆ೬ರೆಯುವ ವಿಲಾಸವಂ ನೋಡುತ್ತ ಇಂಥ ಸೌಂದರ್ಯಾತಿಶಯ ವುಳ್ಳ ಶಕುಂತಲೆಯು ಹೇಗೆ ಕಣ್ವಮುನೀಶ್ವರನ ಪುತ್ರಿಯಾಗುವಳು ? ಆದರೂ ಈ ಋಷಿಯು ಮನೋಹರಾಂಗಿಯಾದ ಈ ಶಕುಂತಲೆಯನ್ನು ತಪೋವನಯೋಗ್ಯವಾದ ವೃಕ್ಷಂಗಳಿಗೆ ನೀರೆರೆಯುವ ಕಾವ್ಯದಲ್ಲಿ ನೇಮಿಸಿರುವನಾದ್ದ°ಂದ ಯುಕ್ತಾಯ ಕ್ಯವಾದ ಕಾರ್ಯಂಗಳಂ ತಿಳಿದವನಲ್ಲ ವೆಂದು ತೋರುವುದು. ಮತ್ತು ರಾಜಯೋ ಗೃವಾದ ವಸ್ತ್ರಾಭರಣಂಗಳೇಸಿಲ್ಲದಿದ್ದರೂ ಮನವನ್ನಪಹರಿಸುವ ಈ ಶಕುಂತಲೆಯಂ ಯಾವ ಋಷಿಯು ತನನಂ ಗೆಯ್ಯುವುದಕ್ಕೆ ಯೋಗ್ಯಳನ್ನಾಗಿ ಮಾಡಬೇಕೆಂದು ಇಚ್ಛಿಸುತ್ತಿರುವನೋ ಅವನ ಪ್ರಯತ್ನವು ಕನ್ನೈದಿಲೆಯ ದಳದಿಂದ ಚಂಚಲವಾಗಿ ಕಠಿನವಾಗಿರುವ ಮಿಂಚಿನ ಬಳ್ಳಿಯಂ ಛೇದಿಸಲಿಚ್ಛಿಸುವ ಮನುಜನ ಬುದ್ದಿಯಂತೆ ತೋರುವುದು. ಆದರೂ ಈ ಶಕುಂತಲೆಯು ಸಖಿಯರಿಂದೊಡಗೂಡಿ ನಾನಾವಿಧ ವಿಲಾಸವಂ ಗೆಯ್ಯುತ್ತ ಸವಿನುಡಿಯಂ ನುಡಿಯುವುದು ನೋಡುವುದಕ್ಕೆ ಸದ್ದು ದೊಡ ದಂತೆ ನಿಂತುಕೊಳ್ಳುವೆ " ನೆಂದು ಯೋಚಿಸುತ್ತಿರಲು 2) WM