ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ - ಕರ್ಣಾಟಕ ಕಾವ್ಯಕಲಾನಿಧಿ, ಅತ್ತ ಶಕುಂತಲೆಯು ಉಬ್ಬಿಬರುವ ಯೌವನಶಾಲಿಯಾಗಿ ಅನಸೂಯೆಯಂ ಕುತು- ಎಲೆ ಅನಸೂಯೆ, ಈ ಪ್ರಿಯಂವದೆಯು ಸ್ವಲ್ಪವಾದರೂ ದಯವಿ ಲ್ಲದೆ ನಾರ ಸೀರೆಯಿಂ ಎನ್ನ ಸ್ವನಂಗಳಂ ಕಟ್ಟಿ ಬಿಗಿದಿರುವಳು. ನೀನು ಜಾಗ್ರತೆಯಿಂ ಎನ್ನ ಎದೆಗಟ್ಟ೦ ಸಡಿಲವಂ ಗೆಯುವು'ದೆಂದು ನುಡಿಯಲಾಅನಸೂಯೆಯು- ಹಾಗೆ ಆಗಲೆಂದು, ಕುಟ್ಟಲಿಕುಚಕ್ಕೆ ಕಟ್ಟಿರುವ ನಾರ ಸೀರೆಯಂ ಸಡಿಲವಂಗೆಯ್ಯುತ್ತಿರಲಾ ಪ್ರಿಯಂವದೆಯು ಎಲೆ ಶಕುಂತಲೆ, ನಿನ್ನ ವಕ್ಷಸ್ಥಲದಲ್ಲಿ ಪ್ರತಿ ಕ್ಷಣದಲ್ಲಿಯ ಕುಚಂಗಳ ವಿಸ್ತಾರವಂ ಗೆಯ್ಯುತ್ತಿರುವ ಯೌವನವಂ ನಿಂದಿಸಬೇಕಲ್ಲದೆ ಪ್ರಿಯಂವ ದೆಯು ನಿರ್ದಯದಿಂ ಬಂಧಿಸಿದಳೆಂದು ಏಕೆ ಎನ್ನಂ ದೂರುತ್ತಿರುವೆ ” ಎಂದು ನುಡಿಯಲು ಇತ್ತಲಾದುಷ್ಯಂತರಾಯನು 66 ಈ ಶಕುಂತಲೆಯು ಸ್ವನಂಗಳಲ್ಲಿ ಧರಿಸಿರುವ ನಾರ ಸೀರೆಯು ಇವಳಿಗೆ ಅಯೋಗ್ಯವಾಗಿ ತೋಜುವುದು. ಆದರೂ ಈ ನಾರಸೀರೆ ಯ) ಈ ಶಕುಂತಲೆಗೆ ಅಲಂಕಾರವಾದ ಕಾಂತಿಯನ್ನು ಂಟುಮಾಡುತ್ತಿರುವದು. ಹೇಗೆಂದರೆ-ಕಮಲವು ಪಾತಿಯಿಂ ಯುಕ್ತವಾಗಿದ್ದರೂ ಹೇಗೆ ಸುಂದರವಾಗಿ ತೋಯುವುದೋ, ಗಗನದಲ್ಲಿ ಚಂದ್ರನು ಕಲಾಮಾತ್ರನಾಗಿ ಮಲಿನವಾಗಿದ್ದರೂ ಹೇಗೆ ಒಂದಾನೊಂದು ಕಾಂತಿಯಂ ಬೀಳುತ್ತಿರುವನೋ, ಅತ್ಯಂತಕೃಶಳಾದ ಈ ಶಕುಂತಲೆಯು ನಾರ ಸೀರೆಯಿಂ ಯುಕ್ತಳಾಗಿದ್ದರೂ ಹೇರಳವಾದ ಸೌಂದರವನ್ನು ಟುಮಾಡುವಳು. ಹಾಗೆಯೇ ಸರಿ ! ಲೋಕದಲ್ಲಿ ಸ್ವಭಾವವಾಗಿ ಸುಂದರಾಕಾರ ವಾದ ಆಕಾರವುಳ್ಳವರಿಗೆ ದಿವ್ಯವಾದ ವಸ್ತ್ರಾಭರಣಗಳು ಅಲಂಕಾರವನ್ನುಂಟು ಮಾಡಲಾಗುವು; ಅವರ ಆಕಾರವೇ ಮನೋಹರವಾಗಿರುವುದು ಎಂದು ಶಕುಂ ತಲೆಯ ಸರ್ವಾಂಗವಂ ನೋಡುತ್ತಿರಲು ಇತ್ತಲಾಶಕುಂತಲೆಯು 66 .ಎಲ್‌ ಸಖಿಯರುಗಳಿರಾ ! ಮುಂಭಾಗದಲ್ಲಿ ವಿರಾಜಿಸುತ್ತಿರುವ ಈ ಕೇಸರವೃಕ್ಷವು ವಾಯುವಿನಿಂದ ಚಲಿಸುತ್ತಿರುವ ತನ್ನ ಚಿಗು ರುಗಳೆಂಬ ಬೆರಳುಗಳಿ೦ ಎನ್ನ ಕರೆಯುವುದೋ ಎಂಬಂತೆ ತೋಡುವುದಾದ್ದ೦ದೀ ವೃಕ್ಷಕ್ಕೆ ಜಲವನೆಂದು ಸಂತೋಷವಂ ಪುಟ್ಟಿಸುತ್ತಿರುವೆ?' ನೆಂದು ಹೇಳುತ್ತಿರಲಾ ಪ್ರಿಯಂವದೆಯು- ಎಲೆ ಶಕುಂತಲೆಯೇ ! ನೀನು ಆ ಕೇಸರವೃಕ್ಷದ ಸಮಾಜಕ್ಕೆ ಹೋಗದೆ ಒಂದು ಮುಹೂರ್ತವಿಲ್ಲೇ ಇರು. ಏಕೆಂದರೆ-ಲತಾಂಗಿಯಾದ ನೀನು ಅದು ಸವಿಾಪಕ್ಕೆ ಪೋಗಲಾಕೇಸರ ವೃಕ್ಷವು ಲತೆಯಿಂದೊಡಗೂಡಿದಂತೆ ತೋರು ವುದೆಂದು ವಿನೋದವಾಕ್ಯವ ನುಡಿಯಲಾಶಕುಂತಲೆಯು_* ಎಲೆ ಪ್ರಿಯಂ