ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಕುಂತಲನಾಟಕ ನವೀನಟೀಕೆ ೨h ವದೆ, ಈ ಪ್ರಕಾರವಾಗಿ ಪ್ರಕೃತೋಚಿತವಾದ ವಾಕ್ಯವಂ ಪೇಳುವುದಿ೦ದಲೇ ಪ್ರಿಯಂವದೆಯೆಂಬ ಹೆಸರುಳ್ಳವಳಾದೆ ಎಂದು ಸರಸೋಕ್ತಿಯಂ ನುಡಿಯುತ್ತಿರಲು; ಇತ್ತ ರಾಯನು -ಪ್ರಿಯಂವದೆಯು ಪ್ರಿಯವಾಕ್ಯವನ್ನಾ ದರೂ ಯಥಾ ರ್ಥವಾಗಿ ಹೇಳಿದಳು. ಹೇಗೆಂದರೆ ಈ ಶಕುಂತಲೆಯ ಅಧರವು ಚಿಗುರಿನಂತೆ ಕೆಂಪಾಗಿ ತೋರಿಸುವುದು. ಇವಳ ತೋಳುಗಳು ಮೃದುವಾದ ಕಲ್ಪವೃಕ್ಷದ ಕೊಂ ಬೆಗಳ ಚೆಂದವನ್ನನುಸರಿಸುತ್ತಿಗುವುವು. ಮತ್ತು ಮಕರಂದಭರಿತವಾದ ಪುಷ್ಪದಂತೆ ಆಶೆಯಂ ಪೊಂದಿಸುತ್ತಿರುವ ಯುವನವು ಇವಳ ಸರ್ವಾಂಗದಲ್ಲಿ ಸಂಪೂರ್ಣವಾ ಗಿರುವುದೆಂದು, ಸಂತುಷ್ಟ ಹೃದಯನಾಗಿ ಆ ಶಕುಂತಲೆಯಂ ನೋಡುತ್ತಿರಲು. ಇತ್ತಲಾ ಅನಸೂಯೆಯು ಆ ಶಕುಂತಳೆಯಂ ಕು” ತು- * ಎಲೆ ಶಕುಂ ತಳೆ, ಮುಂಭಾಗದಲ್ಲಿರುವ ಸೀಮಾವಿನ ಮರಕ್ಕೆ ವಿವಾಹಯಂತೆ ಮೆರೆಯುವ ವನಜ್ಯೋತ್ಸೆ ಯೆಂಬ ನಾಮವಂ ಪಡೆದಿರುವೀಯಿರುವಂತಿಗೆಯ ಲತೆಯಂ ನೀನು ಮರೆತಿರುವಂತೆ ತೋಜುವು'ದೆನ್ನಲು ; ಶಕುಂತಳೆಯು- ಎಲೆ ಅನು ಸೂಯೆ, ನೀನು ಹೇಳಿದಂತೆ ಈ ಲತೆಯಂ ಮರೆತವಳಾದರೆ ಎನ್ನ ದೇಹವಂ ಮಹಿಳೆಯುವುದಲ್ಲಿ ಸಂದೇಹವಿಲ್ಲ ” ಎಂದು ನುಡಿದು, ಆ ಇರುವಂತಿಗೆಯ ಬಳ್ಳಿಯ ಸಮೀಪವಂ ಸೇರಿ- 46ಎಲ್‌ ಸಖಿಯರುಗಳಿರಾ, ಮನೋಹರವಾದ ಈ ವಸಂತಕಾಲದಲ್ಲಿ ಇರುವಂತಿಗೆಯ ತೆಗೂ ಈ ಸೀಮಾವಿನ ಮರಕ್ಕೂ ಸಂಬಂಧವು ಚೆನ್ನಾಗಿ ಉಂಟಾದುದು. ಮತ್ತು ನೂತನವಾದ ಪುಷ್ಪಗಳಿ೦ ಭರಿತವಾಗಿ ಯೌವ ನಶಾಲಿನಿಯಾದ ಈ ವನಜ್ಯೋಯಂ ಅಧಿಕವಲ್ಲ ವದಿಂ ಯುಕ್ತವಾದ ಈ ಸೀಮಾವಿನ ಮರವು ಎಟಿಪುರುಷನಂತೆ ಅನುಭವಿಸುವುದಕ್ಕೆ ಯೋಗ್ಯವಾಗಿರುವುದು' ಎಂದು ನುಡಿದು, ಆ ಮಾವಿನ ಮರಕ್ಕೆ ಸುತ್ತಿರುವ ಆ ಇರುವಂತಿಗೆಯ ಲತೆಯಂ ಅನುರಾಗದಿಂ ನೋಡುತ್ತಿರಲು; ಪ್ರಿಯಂವದೆಯು ಶಕುಂತಳೆಯಂ ನೋಡಿ, ಮು ಗುಳುನಗೆಯಿಂ ಯುಕ್ತಳಾಗಿ ಅನಸೂಯೆಯಂ ಕು ತು- 6 ಎಲೆ ಅನಸೂಯೇ, ಈ ಮಾವಿನ ಮರಕ್ಕೆ ಸುತ್ತಿರುವ ವನಜ್ಯೋತೃ ಯೆಂಬ ಲತೆಯಂ ಪ್ರೇಮದಿಂ ನೋಡುವ ಈಶಕುಂತಳೆಯ ಅಭಿಪ್ರಾಯವಂ ತಿಳಿದೆಯೋ ಏನು ??” ಎಂದು ಕೇಳಲಾ ಅನುಸೂಯೆಯು_ಎಲೆ ಪ್ರಿಯಂವದೆಯೇ ನಾನಾದೆನು. ನೀನವಳ ಮನೋ ವೃತ್ತಿಯಂ ತಿಳಿದಿದ್ದಲ್ಲಿ ಹೇಳುವುದು ” ಎನ್ನಲಾ ಪ್ರಿಯಂವದೆಯು ಎಲೆ ಅನ ಸೂಯೆ, ಕೇಳು, ಹೇಗೆ ಈ ವನಜ್ಯೋತ್ಸೆಯೆಂಬ ಲತೆಯು ತನಗೆ ಯೋಗ್ಯ ವಾದ ಸೀಮಾವಿನ ಮರದೊಡನೆ ಕೂಡಿರುವುದೊ ಹಾಗೆ ತಾನು ತನಗೆ ಅನುರೂಪ