ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅತಿ -ಕರ್ಣಾಟಕ ಕಾವ್ಯಕಲಾನಿಧಿನಾದ ಪುರುಷನಂ ಪೊಂದಬೇಕೆಂಬ ಅಭಿಲಾಷೆಯಿಂದೀಶಕುಂತಳೆಯು ಆ ಬಳ್ಳಿ ಯಂ ಬಹಳವಾಗಿ ನೋಡುತಿರುವಳು ” ಎಂದು ನುಡಿಯಲಾವಾಕ್ಯಕ್ಕೆ ಶಕುಂತ ಆಯು_C6 ಎಲೆ ಪ್ರಿಯಂವದೆ, ಎನ್ನ ಹೃದಯಗತವಾದ ಮನೋರಥಮಂ ಯಥಾ ರ್ಥವಾಗಿ ಹೇಳಿರುವೆ” ಎಂದು ನುಡಿದು, ಹಸ್ತದಲ್ಲಿರುವ ಕುಂಭದಿಂದಾವೃಕ್ಷಂಗ ಳಿಗೆ ಜಲವಂ ಪೊಯ್ಯುತ್ತಿರಲು ಇತ್ತಲಾ ದುಷ್ಯಂತರಾಯನು - ಈ ಶಕುಂತಳೆಯು ಋತೀಶ್ವರನಾದ ಕಣ್ಣ ಮುನೀಶ್ವರನಿಗೆ ಕ್ಷತ್ರಿಯ ಜಾತಿಯ ಪತ್ನಿ ಯಲ್ಲಿ ಇಟ್ಟಿರುವಳೋ, ಬ್ರಾಹ್ಮಣ ಜಾತಿಯ ಪತ್ನಿ ಯಲ್ಲಿ ಇಟ್ಟಿರುವಳೋ ತಿಳಿಯದು. ಎನ್ನ ಮನೋರಥವಿದ್ದಂತೆ ಈ ಶಕುಂತಳೆಯು ಕ್ಷತ್ರಿಯ ಜಾತಿಯ ಪತ್ನಿ ಯಲ್ಲೇ ಪುಟ್ಟಿ ದವಳಾದರೆ ಎನ್ನ ಸಂದೇಹದಿಂ ಪ್ರಯೋಜನವೇ ಇಲ್ಲ ಎಂದು ಆಲೋಚನೆಯಂ ಗೆಯ್ಯುತ್ತ-ಇವಳು ಕ್ಷತ್ರಿಯ ಪುತ್ರಿಯೇ ಸರಿ. ಹೇಗೆಂದರೆ ಯಾವ ಕಾರಣದಿಂದೀಶಕುಂತಳೆಯಲ್ಲಿ ಪೂಜ್ಯವಾದ ಎನ್ನ ಮನವು ಅಭಿಲಾಷೆಯುಳ್ಳದಾಗಿರುವುದೂ ಆದಂದಿವಳು ಕ್ಷತ್ರಿಯ ಪುರುಷನಿಂ ವಿವಾಹ ಮಾಡಿಕೊಳ್ಳುವುದಕ್ಕೆ ಯೋಗ್ಯಳಾಗಿರುವಳು. ಹೇಗೆಂದರೆ ಲೋಕದಲ್ಲಿ ಸತ್ಪುರುಷರಾದವರಿಗೆ ಪದಾರ್ಥoಗಳಲ್ಲಿ ಸಂದೇಹವುಂ ಟಾಗುತಿರಲಾಗಿ ಅವರ ಮನೋವೃತ್ತಿಗಳೇ ಸಂದೇಹವಂ ಪರಿಹರಿಸುವುದಲ್ಲಿ ಪ್ರಮಾಣಗಳಾಗಿರುವುವು, ಎಂದು ಊಹಿಸುತ್ತ, ಹೇಗಾದರೂ ಯಥಾರ್ಥವಾಗಿ ಈ ಶಕುಂತಳೆಯ ವೃತ್ತಾಂತವನ್ನು ತಿಳೆಯಬೇಕೆಂದು ಯೋಚಿಸುತ್ತಿರಲು ಆ ಬಳಿಕ ಶಕುಂತಳೆಯು ತ್ವರೆಯಿಂದೊಡಗೂಡಿ ಬಂದು-ಎಲೆ ಪ್ರಿಯಸ ಖಿಯರುಗಳಿರಾ! ಇರುವಂತಿಗೆಯ ಲತಗೆ ಜಲವನ್ನೆ ಜತೆಯಲು ಭ್ರಮರವು ಆ ಲತೆ ಯಂ ಬಿಟ್ಟು ಬೇಗದಿಂದೆನ್ನ ಮುಖಕ್ಕೆ ಎದುರಾಗಿ ಬರುವುದೆಂದು ನುಡಿದು ಆ ತುಂ ಬೆಯ ಬಾಧೆಗೆ ಭಯ ಪಡುತ್ತಿರಲು ಆ ದುಷ್ಯಂತರಾಯನು ಶಕುಂತಳೆಯ ವಾಕ್ಯವಂ ಕೇಳಿ, ಆ ಭ್ರಮರದ ಬಾಧೆಗೆ ಭಯಪಡುತ್ತಿರುವ ಶಕುಂತಳೆಯಂ ನೋಡಿ, ಅವಳ ಮುಖಕಮಲಕ್ಕೆ ಎಸ್ ಗುತ್ತಿರುವ ತುಂಬಿಯಂ ಕು ತು-ಎಲೈ ತುಂಬಿಯೇ, ಚಂಚಲವಾದ ಕಡೆಗಣ್ಣ ನೋಟವುಂಟಾಗುವಂತೆ ನೇತ್ರಂಗಳಿಂ ನೋಡುತ್ತಿರುವ, ಭಯದಿಂ ನಡಗುತ್ತಿರುವ ಶಕುಂತಳೆಯಂ ಬಹಳವಾಗಿ ಸ್ಪರ್ಶನವಂ ಗೆಯ್ಯುತ್ತಿರುವೆ ; ಏಕಾಂತವಾಗಿ ಏನೋ ಒಂದು ವಾಕ್ಯವಂ ಪೇಳುವನಂತೆ ಅವಳ ಕರ್ಣಂಗಳ ಸಮೀಪದಲ್ಲಿ ಮೃದು ವಾಗಿ ಸಂಚರಿಸುತ್ತಿರುವೆ; ಎರಡು ಕರಂಗಳಂ ಕೊಡುಹುತ್ತಿರುವ ಆ ಶಕುಂಕಳೆಯ