ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೨೫ ರತಿಗೆ ಮೂಲಧನವಾದ ಅಧರವಂ ಪಾನವಂ ಗೆಯುತ್ತಿರುವೆ. ಇಂಥ ಮನೋ ಹರಳಾದ ಈ ಶಕುಂತಲೆಗೆ ಮೊದಲು ಹೇಳಿದ ಕಾರ್ಯಂಗಳಂ ನಡೆಸಿ ಇರುವೆಯಾ ದಿ೦ದ ನೀನು ಬುದ್ದಿಶಾಲಿಯಾಗಿ ತೋಯುತಿರುವೆ. ನಾನು ಈ ಶಕುಂತ ಲೆಯು ಯಾವ ಜಾತಿಯವಳೆಂದು ಯಥಾರ್ಥವಂ ಹುಡುಕುವದಿ೦ದಲೇ ವಂಚಿ ತನಾಗಿರುವೆನು, ಎಂದು ಆ ಭ್ರಮರವಂ ಸ್ತೋತ್ರವಂ ಗೈದು-ಆ ತುಂಬಿಯಂತೆ ಎನಗೆ ಆ ಶಕುಂತಲೆಯ ಅಂಗಸಂಗವು ದೊರಕಲಿಲ್ಲವಲ್ಲಾ, ಎಂದು ಚಿಂತಿಸುತ್ತಿರಲು, ಆ ಶಕುಂತಲೆಯು ಸದ್ದಿನೀಜಾತಿ ಸ್ತ್ರೀಯಾದ್ದ.”೦ದ ಭ್ರಮರವು ಕಮಲಗಂ ಧವಳ ಆ ಶಕುಂತಲೆಯ ಮುಖವನ್ನನುಸರಿಸಿ ಬರುತಿರಲು; ಆ ಶಕುಂತಲೆಯು ಎಲ್‌ ಸಖಿಯರುಗಳಿರಾ, ದುಷ್ಟವಾದ ಈ ತುಂಬಿಯಿಂ ತಿರಸ್ಕಾರವಂ ಪಡೆದಿರುವ ಎನ್ನ೦ ಸಂರಕ್ಷಿಸಿ ಸಂರಕ್ಷಿಸಿ ” ಎಂದು ಅಧಿಕವಾಗಿ ಕೂಗಲು ; ಸಖಿಯರೀಲ್ವರು ಆ ಶಕುಂತಲೆಯು ವಾಕ್ಯವಂ ಕೇಳಿ ಮಗಳ್ಳಗೆಯಿಂದೊಡಗೂಡಿ-ಎಲೆ ಶಕುಂತಲೆ, ನಿನ್ನಂ ಸಂರಕ್ಷಿಸುವುದಕ್ಕೆ ನಾವಾರು ? ಈ ತಪೋವನವು ದೊರೆಯಾದವನು ಸಂರಕ್ಷಿಸುವನಾದ್ದಿ೦ದ ದುಷ್ಯಂತರಾಯನಂ ಕೂಗಿದಲ್ಲಿ ನಿನ್ನಂ ಸಂರಕ್ಷಿಸು ವನು ಎಂದು ವಿನೋದವಂ ಗೆಯ್ಯಲು -- ಆ ದುಷ್ಯಂತರಾಯನಾವಾಕ್ಯವಂ ಕೇಳಿ, ಎನ್ನ ಶರೀರವಂ ಈ ಸ್ತ್ರೀಯರಿಗೆ ತೋಚಿಸುವುದಕ್ಕೆ ಇದೇ ಸಮಯವು ಚೆನ್ನಾಗಿರುವುದೆಂದು ಮನದಲ್ಲಿ ತಿಳಿದು, ಮುಂಬರಿದು ಬಂದು, “ ಎಲ್ ಇವನಾರು ಈ ಸ್ತ್ರೀಯರಲ್ಲಿ ದುವ್ಯಾಪಾರನಂ ಗೆಯ್ಯುವನು? ಎಂದು ಅರ್ಧವಚನವಂ ನುಡಿದು, ಅಷ್ಟಜಿಲ್ಲೆ: ಯೋಚಿಸಿ, 'ನಾನು ದೊರೆಯಾದ ದುಷ್ಯಂತರಾಯನೆಂಬುವುದು ಈ ಸ್ತ್ರೀಯರುಗಳಿಗೆ ತಿಳಿಯಗೊಡಬಾ ರದು. ಅದ್ದಿ೦ದ ಇನ್ನೊಂದು ಪ್ರಕಾರವಾದ ವಂಚನೆಯ ವಚನವಂ ನುಡಿಯು ವೆನು' ಎಂದು ಆಲೋಚನೆಯ, ಗೆಯ್ಯುತ್ತಿರಲು ಶಕುಂತಳೆಯು ತನ್ನನ್ನೇ ಅನುಸರಿಸಿ ಬರುವ ಭ್ರಮರವಂ ಕಂಡು-ಎಲ್‌ ಸಖಿಯರುಗಳಿರಾ! ಈ ದುಷ್ಟವಾದ ಭ್ರಮರವು ಎನ್ನ ಬಿಟ್ಟು ಪೋಗದೆ ಇರು ವುದು. ಆದ್ದರಿಂದ ಇನ್ನೊಂದು ಸ್ಥಳಕ್ಕೆ ಪೋಗುವೆನು ಎಂದು ಕೆಲವು ಅಡಿಯಿಟ್ಟು ಹಿಂದಿರಿಗಿ ನೋಡಿ ಇಲ್ಲಿಗೂ ಈ ತುಂಬೆಯು ಎನ್ನು ಅನುಸರಿಸಿ ಬರುವುದು. ಏನು ಮಾಡಲಿ ?” ಎಂದು ನುಡಿಯುತಿರಲು ದುಷ್ಯಂತರಾಯನು ಶಕುಂತಳೆ ಆಡಿದ ವಾಕ್ಯವಂ ಕೇಳಿ, ತಾನಿದ್ದ ವೃಕ್ಷದ ಮ ಜಯಂ ಬಿಟ್ಟು, ತ್ವರೆಯಿಂದೊಡಗೂಡಿ ಆ ಸ್ತ್ರೀಯರ ಮುಂಭಾಗದಲ್ಲಿ ಬಂದು ನಿಂದು