ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಕರ್ಣಾಟಕ ಕಾವ್ಯಕಲಾನಿಧಿ “ ದುರ್ಮಾರ್ಗನಿರತರಾದ ಜನರುಗಳಿಗೆ ಶಿಕ್ಷಕನಾಗಿ ಪುರುವಂಶದಲ್ಲಿ ಹುಟ್ಟಿರುವ ದುಷ್ಯಂತರಾಯನು ಧರ್ಮದಿಂ ರಾಜವಂ ಪರಿಪಾಲನೆಯಂ ಗೆಯ್ಯುವಲ್ಲಿ ಸುಂದ ರಾಕಾರವಾಗಿ ಏನನ್ನೂ ತಿಳಿಯದೆ ಇರುವ ಈ ಋಷಿಕ ಕೆಯರುಗಳಲ್ಲಿ ದುಷ್ಟ ವ್ಯಾಪಾರವಂ ಗೆಯುವನಾರು ? ” ಎಂದು ಗರ್ಜಿಸಿ ನುಡಿಯಲು; ಅನಸೂಯೆ ಪ್ರಿಯಂವದೆ ಶಕುಂತಲೆ ಈ ಮಮಂದಿ ಸ್ತ್ರೀಯರೂ, ಶುಭ ಲಕ್ಷಣದಿಂ ಯುಕ್ತನಾದ ಆ ದುಷ್ಯಂತರಾಯನಂ ಕಂಡು ಭಯಭ್ರಾಂತರಾಗಿ, ಇವನಾರೆಂಬುದನಿಯದೆ, ನಿಂದಿರಲು ; ಅಷ್ಟ ಇಲ್ಲೆ ಅನಸೂಯೆಯು ಧೈರ್ಯವಂ ತಂದು ರಾಯನಂ ಕು೫.೨ ತು-- 16 ಎಲೆ ಪೂಜಾಕಾರನಾದ ಪುರುಷನೇ, ಸ್ತ್ರೀಯರಾದ ನಮಗೆ ಮತ್ತೇನು ಮಹತ್ತಾದ ಭಯವಿಲ್ಲ. ನಮ್ಮ ಪ್ರಿಯ ಸಖಿಯಾದ ಈ ಶಕುಂತಲೆಯು ಭ್ರಮರದಿಂ ಭಯಪಟ್ಟು ಕೂಗಿದಳು ಎಂದು ರಾಯಂಗೆ ಆ ಶಕುಂತಲೆಯಂ ತೋ? ಸಲಾ ರಾಯನು ಶಕುಂತಲೆಗೆ ಅಭಿಮುಖನಾಗಿ ನಿಂತು_ಎಲ್‌ ಶಕುಂತಲೆಯೆ, ನಿನ್ನ ತಪಸ್ಸು ಎಷ್ಟವಿಲ್ಲದೆ ವೃದ್ಧಿಯಂ ಪೊಂದುತ್ತಿರುವುದೇ ? ” ಎಂದು ನುಡಿಯಲಾ ಶಕುಂತಲೆಯು ಲಜ್ಜೆಯಿಂ ಪ್ರತ್ಯುತ್ತರವನ್ನಿಯದೆ, ಶಿರವಂ ಬಾಗಿಸಿ ನಿಲ್ಲಲಾ ಅನಸೂಯೆಯು ಆ ಶಕುಂತಳೆಯಂ ಕುತು- ಎಲೆ ಶಕುಂತಲೆ, ಈಗ ನಮಗೆ ವಿಶೇಷವಾದ ಅತಿಥಿಲಾಭ ವುಂಟಾಗಿರುವುದು. ಇವನಂ ಪೂಜೆಯಂ ಗೆಯ್ಯುವುದಕ್ಕೋಸುಗ ನೀನು ಜಾಗ್ರತೆಯಾಗಿ ನಮ್ಮ ಪರ್ಣಶಾಲೆಗೆ ಪೋಗಿ ಫಲ ದಿಂದೊಡಗೂಡಿದ ಆರ್ಸ್ಟ ಜಲವಂ ತೆಗೆದುಕೊಂಡು ಬರುವುದು. ಇಲ್ಲಿರುವ ಜಲವು ಪಾದಗಳಂ ತೊಳೆಯುವುದಕ್ಕೆ ಯೋಗ್ಯವಾಗುವುದು ?' ಎಂದು ನುಡಿಯಲಾ ರಾಯನು” ಎಕೌ ಕೋಮಲಾಂಗಿಯರುಗಳಿರಾ! ನಿಮ್ಮ ಸೊಗಸುಗೂಡಿದ ನುಡಿ ಗಳಿ೦ ಎನಗೆ ಸತ್ಕಾರವು ಮಾಡಿದಂತಾದುದು. ಎನಗೋಸುಗ ಅಧಿಕಾಯಾಸವಂ ಪೊಂದಬೇಡಿ ರೆಂದು ನುಡಿಯಲಾ ಅನಸೂಯೆಯುಆದುಷ್ಯಂತರಾಯನಂ ಕಏ ತು, * ಎಲೈ ಪೂಜ್ಯನಾದವನೇ, ನೀನು ಈ ಮುಂಭಾಗದಲ್ಲಿರುವ, ಅಧಿಕವಾದ ನೆರಳಿನಿಂ ಕೀ ತಳವಾದ ಎಲೆಯ ಬಾಲೆಯ ಗಿಡಂಗಳಿಂ ಬಳಸಿರುವ ಜಗಲಿಯಲ್ಲಿ ಕುಳಿತು ಮಾರ್ಗ ಯಾಸವು ಪೊಗುವಂತೆ ಮಾಡಬಹುದು' ಎಂದು ನುಡಿಯಲಾ ರಾಯನು ಸಂತುಷ್ಟ ಚಿತ್ತನಾಗಿ ಎಲೌ ಕೋಮಲಾಂಗಿಯರುಗಳಿರಾ! ನೀವು ವೃಕ್ಷಗಳಿಗೆ ಜಲಸೇಚನೆ ಮೊದಲಾದ ಅನೇಕ ಕಾರ೦ಗಳಂ ಮಾಡಿ - ಬಹಳವಾಗಿ ಬಲಿರುವ ರಾದ್ಧ೦ದೀ ನೆರಳಿನಲ್ಲಿ ಕುಳಿತು ಆಯಾಸವಂ ಪರಿಹರಿಸಿಕೊಳ್ಳಬಹುದು' ಎಂದು ನುಡಿಯಲ್ಲಾ ಅನಸೂಯೆಯು ಶಕುಂತಲೆಯಲ್ಲಿ ಕುಂತು « ಎಲೆ ಸಖಿಯೇ