ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ -- ಶಾಕುಂತಲನಾಟಕ ನವೀನಟೀಕೆ ಪೂಜ್ಯನಾದ ಈ ಪುರುಷನ ಸೇವೆಯಂ ಮಾಡುವುದು ಯುಕ್ತವಾಗಿರುವುದಾದ ಇ೦ದಿವನು ಹೇಳಿದಂತೆ ಎಲ್ಲರೂ ಈ ಮಲ್ಲಿಗೆಯ ಪುಷ್ಪಗಳ ವಾಸನೆಗೆಳಗುತಿರುವ ಶೃಂಗೀಸಂಗೀತದಿಂ ಸಂಗತವಾದ ಈ ವೇದಿಕೆಯಲ್ಲಿ ಕುಳಿತು ಕೊಳ್ಳುವ ಎಂದು ರಾಯನು ಸಹಿತವಾಗಿ ಸಂತುಷ್ಟ ಚಿತ್ತರಾಗಿ ಕುಳಿತುಕೊಂಡು ಇದ್ದರು. ಎಂಬಲ್ಲಿಗೆ ಗದ್ಯ-ಚಂಡಕರಮಂಡಲೊಚ೦ಡತೇಜಃಪ್ರ ಕಾಂಡಕಾಂಡಷಂಡಖಂಡಿತಾಖಂಡ ಶೌರ್ಯ ಪರಿಮಂಡಿತ ಭಂಡನೋದ್ದಂಡಾರಿ ಮಂಡಲಕಂಡೂಲದೋರ್ದಂಡಪಾಂಡಿತ್ಯ ಪಾಂಡುರುಚಿಖಂಡಡಿಂ ಡೀರಪುಂಡರೀಕ ಪರಿಪಾಂಡುರಯಶಃ ಪಿಚಂಡಿಲ ಬ್ರಂಹ್ಮಾಂಡಭಾಂಡೋದ್ಭಟ ಕಾಲಕೂಟಪ್ರತಿಭಟ ಕಟುಕಪಟ ನಿಶಾಟಕೂಟ ಪಾಟನಲಂಪಟನಿಟಿಲಪುಟಘಟಿತ ವಿಕಟ ಕೃಪೀಟಯೋನಿ ಕುಟಿಲಮೋಹಾಂ ಧಕಾರಚ್ಚಲಾವಿಘಟನ ಪಟುನಟನ್ಮಹಾನಟ ಮಕುಟತಟ ಪಠ್ಯ ಟಾಟಿನೀತಳಾಂತರಿಂಗದಭಂಗೋ ತುಂಗತರಂಗ ಸಂಗರಭಂಗಸಂಭ್ರಮೋಜೃಂಭಮಾಣಗ:ಭೀರವಾಗ್ಯುಂಭ ಸಂಭಾವಿತ ಗರನಗರ ವರಸಿಲಯ ಚಂದ್ರಚೂಡ ಚರಣಾರವಿಂದ ಸೇವಾಮರಂದ ನಿರಂಶರನಿಕ್ಷೇವಣ ಸ್ವಯಂವೃತಕವಿತಾ ವಧ್ರರತ್ನ ರಾಜಾಧಿರಾಜ ಮಹಾರಾಜ ಶ್ರೀಚಾಮರಾಜಪುತ್ರಾತ್ರೆಯಸಗೋತ್ರ ಪವಿತ್ರಚರಿತ್ರ ಶಂಖ ಚಕ್ರ ಮಕರ ಮತ್ಥ, ಶರಭ ಸಾಳ್ಳ ಗಂಡಭೇರುಂಡ ಧರಣೀವರಾಹ ಹನುಮದ್ಧ ರುಡ ಕಂಠೀ ರವಾದ್ಯನೇಕ ಬಿರುದಾಂಕಿತ ನರವತಿಬಿರುದ ಶ್ರೀ ಚಾಮುಂಡಿಕಾವರಪ್ರಸಾದಲಬ್ದ ಮಹೀಶರಮಹಾ ಸಂಸ್ಥಾನದೇದೀಪ್ಯಮಾನಕುಲಕ ಮಾಗತದಿವ್ಯರತ್ನಸಿಂಹಾಸನಾಳೆಹಿಡfಕೃಷ್ಟ ರಾಜಕಂಠೀರವರು ಸರಸಜನಾನಂದಕರವಾಗಿ ಲೋಕೋಪಕಾರಾರಮಾಗಿ ನವರಸಭರಿತಮಾಗಿ - ಕರ್ಣ್ಣಾಟಕಭಾಷೆಯಿಂ ವಿರಚಿಸಿದ ಕೃಷ್ಣರಾಜವಾಣೀವಿಲಾಸರತ್ನಾಕರವೆಂಬ ಶಾಕುಂತಳನಾಟಕದ ನವೀನ ಟೀಕೆಯಲ್ಲಿ ದುಷ್ಯಂತರಾಯನು ಕಣ್ಣಾಶ್ರಮದಲ್ಲಿ ಶಕುಂತಲೆ ಅನಸೂಯೆ ಪ್ರಿಯಂವದೆಯರಿಂ ಸಂತನಾಗಿ ಲತಾಮಂಟಪದಲ್ಲಿ ಸಖದಿಂದಿರ್ದನೆಂಬ ಪ್ರಥಮಕಲ್ಲೋಲದಲ್ಲಿ ತೃತೀಯ ತರಂಗಂ. -+ %ಳು REGISTRAR BSM.4N! 4 1.1 Y FEASTY,