ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ -ಶಾಕುಂತಲನಾಟಕ ನವೀನಟೀಕೆ-- ವಾಕ್ಯವಂ ಕೇಳಬೇಕೆಂದು ಯೋಚಿಸುತ್ತಿದ್ದೆಯೋ ಅದೇ ವಾಕ್ಯವಂ ಅನಸೂಯೆಯು ಕೇಳುತ್ತಿರುವಳು' ಎಂದು ಅಂತರಂಗದಲ್ಲಿ ನುಡಿದುಕೊಳ್ಳುತ್ತಿರಲು; ಆ ರಾಯನು ಅನಸೂಯೆಯು ಪ್ರಶ್ನೆ ಯಂ ಗೈದ ವಾಕ್ಯವಂ ಕೇಳಿ“ ಈಗ ನಾನು ದೊರೆಯೆಂಬ ಅರ್ಥವಂ ಹೇಗೆ ಪ್ರಕಾಶವಂ ಗೆಯ್ಯಲಿ, ಹೇಗೆತಾನೆ ಅರಸಲ್ಲ ಎಂದು ಅವೃತವಂ ಪೇಳಲಿ ? ” ಎಂದು ತನ್ನೊಳು ತಾನು ಆಲೋಚ ನೆಯಂ ಗೈದು, “ ಆದರೂ ಈಸ್ತ್ರೀಯರುಗಳಿಗೆ ಈಪ್ರಕಾರವಾಗಿ ಪೇಳುವೆ ನೆಂಬ ವಾಕ್ಯವಂ ನಿಶ್ಚಸಿ, ಅನಸೂಯೆಯಂ ಕು ತು _* ಎಲ್ ಬಾಲೆಯೇ, ಪುರುವಂಶದಲ್ಲಿ ಹುಟ್ಟಿದ ಮಹಾರಾಯನಿಂ ನಾನು ಧರ್ಮಾಧಿಕಾರದಲ್ಲಿ ನಿಯುಕ, ನಾಗಿ ಇಲ್ಲಿರುವ ಋಷಿಗಳಿಗೆ ದುಷ್ಪರಿಂದುಂಟಾಗುವ ವಿಷ್ಣು ವಂ ಪರಿಹರಿಸುವುದ ಕ್ಕೋಸ್ಕರ ಈ ಧರ್ಮಾರಣ್ಯವಂ ಕುಲಿತು ಬಂದಿರುವೆನು ” ಎಂದು ನುಡಿಯಲಾ ಅನಸೂಯೆಯು- “ ಎಲೈ ಪೂಜ್ಯನಾದವನೆ, ಈಗ ಧರ್ಮವಂ ಪರಿಪಾಲಿಸುವುದ ಕ್ರೋಸುಗ ಸಂಚರಿಸುವ ನಿನ್ನಿಂದ ನಾವು ರಕ್ಷಕನಿಂದ ಯುಕ್ತರಾದೆವು' ಎಂದು ಸರಸೋಕ್ತಿಯಂ ಪೇಳುತಿರಲು ; ಶಕುಂತಲೆಯು ಓರೆನೋಟದಿಂ ರಾಯನಂ ಬಾರಿಬಾರಿಗೂ ನೋಡಿ ಮುಗು ಳುನಗೆಯಿಂ ಲಜ್ಜೆಯಿಂ ಅನುರಾಗದಿಂ ಯುಕ್ತಳಾಗುತ್ತಿರಲು, ಆ ಅನಸೂಯೆಪ್ರಿಯಂ ವದೆಯರೀರ್ವರು ಶಕುಂತಲೆ ದುಷ್ಯಂತರಾಯರಿಬ್ಬರುಗಳಂ ನೋಡಿ ಅನುರಾಗಭರಿತ ವಾದ ಅನ್ನೋನ್ಯವಾಗಿ ನೋಡುವ ಓರೆನೋಟಗಳಿಂದವರ ಇಂಗಿತವಂ ತಿಳಿದು, ಶಕುಂತಲೆಯ ಮನೋವೃತ್ತಿಯಂ ಪರೀಕ್ಷಿಸಬೇಕೆಂದು ಅವಳಂ ಕುಳಿತು-ಎಲೆ ಶಕುಂತಲೆ, ಈಗ ನಿನ್ನ ತಂದೆಯಾದ ಕಣ್ವಮುನೀಶ್ವರನು ಇಲ್ಲಿಗೆ ಬಂದವನಾದರೆ ಹೇಗೆ! ಎಂದು ನುಡಿಯಲಾ ಶಕುಂತಳೆಯು ಕೋಪಯುಕ್ತಳಾಗಿ- ಎಲ್‌ ಸಖಿಯ ರುಗಳಿರಾ, ಎನ್ನ ತಂದೆತಾನೇ ಬಂದರೇನಾಗುವುದು ? ” ಎನ್ನಲಾ ಸವಿಯ ರೀರ್ವರು- ಆ ಕಣ್ವ ಮಹಾಮುನಿಯೇ ಇಲ್ಲಿಗೆ ಬಂದವನಾದರೆ ತನ್ನ ಪ್ರಾಣ ರೂಪವಾದ ಸಮಸ್ತ ದ್ರವ್ಯದಿಂದೀಗ ಅತಿಥಿಯಾಗಿ ಬಂದಿರುವ ಈ ಪುರುಷನಂ ಕೃತಾರ್ಥನನ್ನಾಗಿ ಮಾಡುವನು ” ಎನಲಾಶಕುಂತಲೆಯು « ಈ ಸಖಿಯರೀ ರ್ವರೂ ಪ್ರಾಣರೂಪದ್ರವ್ಯವನ್ನಿಪುರುಷನಿಗೆ ಕೊಡುವನೆಂದು ನುಡಿದಿರುವರು. ಆಕಣ್ಯಮುನೀಶ್ವರನಿಗೆ ನಾನೇ ಪ್ರಾಣರೂಪಳಾಗಿರುವೆನು. ಎನ್ನಂ ಕೊಡು ವನೆಂಬ ವಾಕ್ಯವಂ ವ್ಯಕ್ತವಾಗಿ ಹೇಳದೆ ಗೂಢವಾಗಿ ಹೇಳಿರುವರಾದ್ದಿ೦ದ ಇವರ ಮುಖವಚನದಿಂ ಚೆನ್ನಾಗಿ ಪೇಳಿಸುವೆ'ನೆಂದು ಮನದಲ್ಲಿ ಯೋಚಿಸಿ ಅವರಂ