ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ - ಕರ್ಣಾಟಕ ಕಾವ್ಯಕಲಾನಿಧಿ ಕು' ತು_ಎಲ್ ಸಖಿಯರುಗಳಿರಾ, ನೀವಿಬ್ಬರೂ ಏನೋ ಒಂದು ಭಾವವಂ ಹೃದಯದಲ್ಲಿಟ್ಟು ಕೊಂಡು ನಿನ್ನೊಳು ನೀವು ಮಾತನಾಡಿಕೊಳ್ಳುತ್ತಿರುವಿರಾದ್ದಿ೦ದ ನಾನು ನಿಮ್ಮ ವಚನಂಗಳಂ ಕೇಳಲೊಲ್ಲೆನು” ಎಂದು ನುಡಿಯುತ್ತಿರಲು ; ಅಷ್ಟ ಅಲ್ಲೆ ರಾಯನು ಅವರೀರ್ವಸಖಿಯರಂ ಕುಬಿ ತು_ ಎಲೌ ಸಖಿ ಯರುಗಳಿರಾ, ನಿಮಗೆ ಸ್ನೇಹಿತಳಾದ ಶಕುಂತಲೆಯ ವೃತ್ತಾಂತವಂ ನಾನು ಕೇಳಲಿ ಜೈಸುತಿರುವೆ ನೆಂದು ನುಡಿಯಲಾಸಖಿಯರೀಶ್ವರು_“ಎಲೈ ಪೂಜ್ಯನೆ, ಈಗ ನೀನು ಅಪ್ಪಣೆಯನ್ನೀಯುವ ವಾಕ್ಯವು ಅನುಗ್ರಹರೂಪವಾಗಿರುವುದು. ಏನು ಕೇಳಿದರೂ ಅದಂ ಪೇಳುತ್ತಿರುವೆವು ” ಎಂದು ನುಡಿಯಲಾ ರಾಯನು 66 ಎಕೌ ಬಾಲೆಯರುಗ ಳಿರಾ, ಪೂಜ್ಯನಾದ ಷಡ್ಗುಣೈಶ್ವರ್ಯಸಂಪನ್ನನಾದ ಕಣ್ವಮುನೀಶ್ವರನು ಶಾಶ್ವತ ವಾದ ಬ್ರಹ್ಮಧ್ಯಾನಾಸಕ್ತನಾಗಿರುವಲ್ಲಿ ಈ ನಿಮ್ಮ ಸ್ನೇಹಿತಳಾದ ಶಕುಂತಳೆಯು ಆ ಋಷಿಗೆ ಪುತ್ರಿಯೆಂತಾದಳು? ಅದಂ ಪೇಳಬೇಕು' ಎನ್ನಲು; ಅನಸೂಯೆಯು-ಎಲೈ ಪೂಜ್ಯನೇ, ಕೇಳು ಪೇಳುವೆನು. ಮಹಾಪ್ರಭಾವಶಾಲಿಯಾದ ರಾಜಋಷಿಯಾದ ವಿಶ್ವಾಮಿತ್ರನೆಂಬ ನಾಮಧೇಯವುಳ್ಳವನೊಬ್ಬನಿದ್ದಾನೆಂದು ನುಡಿಯಲಾರಾಯನು “ವಿಶ್ವಾಮಿತ್ರನೆಂಬ ಋಷಿಯು ಇರುವುದಂ ನಾನು ತಿಳಿದಿರುವೆನು'ಎನ್ನಲಾಸಪಿಯು ಎಲೈ ಪೂಜ್ಯನೇ ( ಆಮಹಾಮಹಿಮನಾದ ವಿಶ್ವಾಮಿತ್ರ ಋಷಿಯಿಂದ ನಮ್ಮ ಪ್ರಿಯ ಸಖಿಯಾದ ಶಕುಂತಲೆಯು ಹುಟ್ಟಿದಳೆಂಬುವುದು ತಿಳಿಯತಕ್ಕದ್ದು. ಆ ವಿಶ್ವಾಮಿ ತ್ರನು ಈ ಶಕುಂತಲೆಯಂ ಬಿಟ್ಟು ಪೋಗಲಾಗಿ ನಮ್ಮ ಕಣ್ವಋತೀಶ್ವರನು ಈಶಕುಂ ತಲೆಯಂ ಸಲಹಿದ್ದ ಹಿಂದಿವಳಿಗೆ ತಂದೆಯಾದನು' ಎಂದು ನುಡಿಯಲಾರಾಯನು - ಎಲ್‌ ಅನಸೂಯಯೇ, ಆ ವಿಶ್ವಾಮಿತ್ರನು ಇವಳಂ ಬಿಟ್ಟು ಪೋದೆನೆಂದು ನುಡಿದ ವಾಕ್ಯವು ಎನಗೆ ಕುತೂಹಲವನ್ನು ಂಟುಮಾಡಿರುವುದಾದಂದೀ ಶಕುಂತಲೆಯು ಯಾವ ಸ್ತ್ರೀಗರ್ಭದಲ್ಲಿ ಪುಟ್ಟಿದಳು?ಏನು ನಿಮಿತ್ತದಿಂ ಬಿಟ್ಟು ಪೋದನು? ಆವೃತ್ತಾಂ ತವಂ ತುದಿಮೊದಲಾಗಿ ಕೇಳಲಿಚ್ಚಿಸುತ್ತಿರುವೆನು ಎಂದು ಹೇಳಟು; ಆ ಅನಸೂಯೆ ಯು-ಕೇಳ್ಳೆ ಪೂಜ್ಯನೇ, ಪೂರ್ವದಲ್ಲಿ ದೇವತೆಗಳು ಕೂರವಾದ ತಪವಂ ಗೆಯು ತಿರುವ ವಿಶ್ವಾಮಿತ್ರ ಋಷಿಯಂ ನೋಡಿ ಈತಪಃಪ್ರಭಾವದಿಂದಿವನು ಬ್ರಹ್ಮರ್ಷಿಯಾ ಗುವನೆಂಬ ಸಂದೇಹದಿಂದವನ ತಪೋವಿಘ್ನ ವಂ ಗೆಯ್ಯುವುದಕ್ಕೋಸುಗ ಮೇನಕೆ ಯೆಂಬ ಅಪ್ಪರಸ್ತ್ರೀಯಂ ಕಳುಹಿಸಿದರು ಎನಲಾರಾಯನು ಎಲ್‌ ಅನಸೂಯೆಯೇ, ದೇವತೆಗಳಿಗೆ ಯಾರು ತಪಸ್ಸಂ ಗೆಯ್ಯುತಿರ್ದರೂ ಆತಪಃಪ್ರಭಾವದಿಂದವರು ತಮ್ಮ ಪದವಿಗೆ ಬರುವರೆಂಬ ಭೀತಿಯುಂಟಾಗುವುದು ಎಂದು ನುಡಿಯಲಾ ಅನಸೂಯೆ