ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯ -ಶಾಕುಂತಲನಾಟಕ ನವೀನಟೀಕೆ ಯು - 1(ಎಲೆ ರಾಯನೇ, ಆಬಳಿಕ ವಿಶ್ವಾಮಿತ್ರ ಋಷಿಯು ಗಿಣಿ ಕೋಗಿಲೆ ಮೊದಲಾ ದ ಪಕ್ಷಿಗಳ ಕಲಕಲಧ್ವನಿಯಿಂದಲೂ, ಫಲಪುಷ್ಪ ಪಲ್ಲವಂಗಳಿಂದಲೂ, ಶೈತ್ಯಸೌರಭ್ಯ ಮಾಂದ್ಯಗೂಡಿದ ಮಾರುತದಿಂದಲೂ ಯುಕ್ತವಾದ ವಸಂತಕಾಲದಲ್ಲಿ ಆ ಜಗನ್ನೋ ಹನಕರವಾದ ಆ ಮೇನಕಿಯ ರೂಪವಂ ನೋಡಿ.” ಎಂದು ಅರ್ಥೋಕ್ತಿಯಂ ನು ಡಿದು, ಲಜ್ಜೆಯಿಂ ಮುಂದಣ ವಾಕ್ಯವಂ ಪೇಳದಿರಲಾರಾಯನು! ಎಲ್‌ ಅನಸೂ ಯೆಯೇ, ಇವಳು ಮೇನಕಿಯಲ್ಲಿ ಹುಟ್ಟಿದಳೆಂಬುವುದು ನಿನ್ನ ವಾಕ್ಯದಿಂದಲೇ ವ್ಯಕ್ತ ವಾಗಿ ತೋಯುವುದು” ಎಂದು ನುಡಿಯಲಾಅನಸೂಯೆಯು-(ಎಲೈ ಪೂಜ್ಯನೇ, ಆ ಮೇನಕಿಯು ವಿಶ್ವಾಮಿತ್ರನಿಂ ಗರ್ಭವಂ ಪಡೆದು ಈ ಶಕುಂತಲೆಯಂ ಪೆತ್ತು ಆಮು ನಿಯು ಎನ್ನ ತಪಸ್ಸಿಗೆ ವಿಘ್ನ ವಂಗೈದವಳೆಂದು ಶಾಪವನ್ನೀಯುವನೆಂಬ ಭಯದಿಂ ಇವಳಂ ಹಿಮವತ್ಸರ್ವತದ ಸಮಾಪಾಶ್ರಮದಲ್ಲಿ ಬಿಟ್ಟು ಸ್ವರ್ಗವಂ ಕು ತು ಪೋಗ ಲು; ವಿಶ್ವಾಮಿತ್ರನೂ ಕೂಡ ಈ ಪುತ್ರಿಯಲ್ಲಿ ಮಮತೆಯಿಲ್ಲದೆ ಪೋಗಲು; ಇಂತಿರು ವಲ್ಲಿ ಒಂದಾನೊಂದು ದಿನ ಖುಶ್ರೇಷ್ಠನಾದ ಕಣ್ವಮುನಿಯು ಸ್ನಾ ನಾರ್ಥ ವಾಗಿ ಪೋಗಿ ಪಕ್ಷಿಗಳಿಂ ಪರಿಪಾಲಿತವಾಗುತಿರ್ದ ಈ ಶಕುಂತಲೆಯಂ ಕಂಡು ಪುತ್ರಿ ವ್ಯಾಮೋಹದಿಂ ತನ್ನಾಶ್ರಮಕ್ಕೆ ತೆಗೆದುಕೊಂಡು ಬಂದು, ಶಕುಂತಗಳಿ೦ ಸಂರಕ್ಷಿತ ಳಾದ್ದಿ೦ದ ಶಕುಂತಲೆಯೆಂಬ ನಾಮಾಂಕಿತವಂ ಎರಚಿಸಿ, ಇದುವರೆಗೂ ಪರಿಪಾಲ ನೆಯಂ ಗೆಯ್ಯುತ್ತಿರುವನು' ಎಂದು ಬಿನ್ನಿಸಲಾರಾಯನು-ಎಲ್‌ ಅನಸೂಯೆಯೇ ಹಾಗಾದಲ್ಲಿ ಅವಳು ಅಪ್ಪರಸ್ತ್ರೀಗರ್ಭದಲ್ಲಿ ಹುಟ್ಟಿದವಳು ನಿಶ್ಚಯವೇ ಎನ್ನ ಲಾ ಅನ ಸೂಯೆಯು-66 ಆವಾಕ್ಯಕ್ಕೆ ಸಂದೇಹವೇ ಇಲ್ಲ ಎಂದು ನುಡಿಯಲಾರಾಯನು “ಎಲ್‌ ಕೋಮಲಾಂಗಿಯೇ ನೀನು ಹೇಳಿದವಾಕ್ಯವು ನಿಶ್ಚಯವಾಗಿತ್ತುವುದು. ಮನುಷ್ಯ ಸ್ತ್ರೀಯರಲ್ಲಿ ಈ ಶಕುಂತಳೆಯ ರೂಪಿನಂತೆ ರೂಪೋತ್ಪತ್ತಿಯು ಆಗಲಾ ಗದು. ಇಷ್ಟು ಸೌಂದರ್ಯಾತಿಶಯವು ದೇವಸ್ತ್ರೀಯರಲ್ಲೇ ಸರಿಯಾಗಿರುವುದು. ಹೇಗೆಂದರೆ-ಕಾಂತಿಗೂಡಿದ ಚಂಚಲವಾದ ಮಿಂಚಿನ ಬಳ್ಳಿಯು ಮೇಘದಿಂದಲ್ಲದೆ ಭೂಮಿಯಲ್ಲಿ ಹೇಗೆ ಪುಟ್ಟುವುದಿಲ್ಲವೋ, ಹಾಗೆ ಈ ಶಕುಂತಳೆಯ ರೂಪೋತ್ಸ ತ್ರಿಯು ದೇವಸ್ತ್ರೀಯರಲ್ಲಲ್ಲದೆ ಮನುಷ್ಯ ಸ್ತ್ರೀಯರಲ್ಲಿ ಪುಟ್ಟಲಾದು” ಎಂದು ನುಡಿ ಯಲು ; - ಆ ವಾಕ್ಯವಂ ಕೇಳ ಶಕುಂತಳೆಯು ಲಜ್ಜೆಯಿಂದೊಡಗೂಡಿ ಶಿರವಂ ಬಾಗಿಸಿ ತನ್ನ ಅಂಗುಷ್ಟಾಗ್ರದಿಂ ಭೂಮಿಯಂ ಬರೆಯುತ್ತ ಕುಳಿತಿರಲು ; ಆರಾಯನು, ರಾಜರ್ಷಿಯಾದ ವಿಶ್ವಾಮಿತ್ರನ ಪುತ್ರಿಯೆಂದು ಕೇಳಿದ್ದ ಹಿ೦ದ