ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ -ಶಾಕುಂತಲನಾಟಕ ನವೀನಟೀಕೆಲ್ಲದೆ ಇರುವೆವಾದ್ದಿ೦ದ ನೀನು ಪೇಳ ವಾಕ್ಯಕ್ಕೆ ಪ್ರತ್ಯುತ್ತರವಂ ಪೇಳಲಾರೆವು. ಆದರೂ ಇವಳ ತಂದೆ ಮಾದ ಕಣ್ವಮುನಿಪತಿಯು ಇವಳಂ ಅನುರೂಪನಾದ ವರನಿಗಿತ್ತು ವಿವಾಹವಂ ಗೆಯ್ಯಬೇಕೆಂದು ಸಂಕಲ್ಪಿಸಿರುವನು” ಎಂದು ನುಡಿಯಲು; ಆರಾಯನು ಪ್ರಿಯಂವದೆಯ ವಾಕ್ಯವಂ ಕೇಳಿ_ಈ ಶಕುಂತಲೆಯ ರೂಪಿಗೆ ಯೋಗ್ಯವಾದ ವರನು ಯಾವ ಲೋಕದಲ್ಲಿಯೂ ಇರಲಾಹನು. ಆದ್ದ೦ದ ಕಣ್ವ ಋಷಿಯ ಪ್ರಾರ್ಥನೆಯು ವ್ಯರ್ಥವಾಗುವುದೆಂದು ನೋಡುವುದು, ಮತ್ತು ಈ ಶಕುಂತಲೆಯು ಕ್ಷತ್ರಿಯ ಪುತ್ರಿಯಾದಿಂದಲೂ ಇವಳಿಗೆ ವಿವಾಹವಂ ವಿರಚಿಸಬೇಕೆಂದು ಋಷಿಗೆ ಸಂಕಲ್ಪವಿರುವುದೆಂದು ಅನುಸೂಯೆ ಪ್ರಿಯಂವದೆ ಯರು ಹೇಳಿದ್ದ ಹಿ೦ದಲೂ ಯಾವವನಾದರೂ ಒಬ್ಬ ಕ್ಷತ್ರಿಯನಿಗೆ ಕೊಟ್ಟು ವಿವಾಹವಂ ಗೆಯ್ಯುವನು. ಈಗ ನಾನು ಈ ಆಶ್ರಮಕ್ಕೆ ಬಂದಿರುವುದಿಂದಲೂ ಸಮಸ್ತ ಭೂಮಂಡಲಕ್ಕೆ ನಾನು ದೊರೆಯಾಗಿರುವುದಿಂದಲೂ ಎನಗೆ ಈ ತಪೋ ವನವಂ ಪ್ರವೇಶಿಸುವಾಗ ಶುಭಶಕುನಗಳಾಗಿರುವುದ೦೦ದಲೂ ಈ ಶಕುಂತಲೆಯಂ ಆ ಕಣ್ವ ಋಷಿಯು ಎನಗೆ ಕೊಟ್ಟು ವಿವಾಹನಂ ಗೆಯ್ಯುವನು. ಹಾಗಲ್ಲ ದಿದ್ದರೆ ಅನುರಾಗನಂ ಸಂಪಾದಿಸಿ ಗಾಂಧರ್ವವಿವಾಹವಂ ಗೆಯ್ಯುವುದಕ್ಕೂ ಯೋಗ್ಯಳಾಗಿ ಇರುವಳು' ಎಂಬ ಸಂತೋಷದಿಂದ ತನ್ನ ಮನವಂ ಕುಕಿ ತು-“ಎಲೈ ಮನವೆ! ನೀನು ಯಾವ ವಸ್ತುವು ಕಂಡು ಬೆಂಕಿಯೆಂದು ಊಹಿಸುತಿರ್ದೆಯೊ ಅದೇ ವಸ್ತುವು ಮುಟ್ಟುವುದಕ್ಕೆ ಯೋಗ್ಯವಾದ ರತ್ನ ವಾದಂತೆ, ಈ ಶಕುಂತಲೆಯು ಯಾವ ಜಾತಿಯವಳೆಂತಲೂ ಇವಳು ವಿವಾಹವಾಗುವಳೋ ಇಲ್ಲವೋ ಎಂತಲೂ ಈಯೆರಡು ಪ್ರಕಾರವಾದ ನಿನ್ನ ಸಂದೇಹವು ಈ ಸಖಿಯರೀರ್ವರು ಮೇಳ ವಾಕ್ಯ ದಿಂ ಪರಿಹಾರವಾದುದ•°ಂದ ನೀನು ಅಭಿಲಾವಾಯುಕ್ತವಾಗಿರು” ಎಂದು ತನ್ನೊಳು ತಾನು ಪೇಳುತಿರಲು; ಆ ಶಕುಂತಲೆಯು ತನ್ನ ಹೃದಯದಲ್ಲಿದ್ದ ಕಾರ್ಯವಂ ಈಪ್ರಿಯಂವದೆಯು ಇನ್ನ ವ್ಯಕ್ತವಂ ಮಾಡುವಳೆಂದು ತಿಳಿದು, ಕಪಟ ಕೋಪವಂ ವಿರಚಿಸಿ-“ಎಲೆ ಅನಸೂ ಯೆ, ನಾನು ಪರ್ಣಶಾಲೆಯಂ ಕುಳಿತು ಪೋಗುವೆ ಎನಲಾಅನಸೂಯೆಯು * ಎಲ್ ಸ್ನೇಹಿತಳಾದ ಶಕುಂತಲೆಯೇ, ಏನು ನಿಮಿತ್ತದಿಂದೀರಮ್ಯವಾದ ಸ್ಥಾನ ವಂ ಬಿಟ್ಟು ಪೋಗುವೆ ?” ಎನಲಾಶಕುಂತಲೆಯು ಹುಬ್ಬುಗಳಂ ಗಂಟಿಕ್ಕಿಕೊಂಡು * ಈ ಪ್ರಿಯಂವದೆಯು ಒಂದಕ್ಕೊಂದು ಸಂದರ್ಭವಿಲ್ಲದ ವಾಕ್ಯವಂ ಮನಬಂದಂತೆ ನುಡಿಯುತ್ತಿರುವಳು. ಇವಳ ವೃತ್ತಾಂತವಂ ಪೂಜ್ಯಳಾದ ಕಣ್ವಮುನೀಶ್ವರನ ತಂಗಿ