ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ - ಆರಾಯನು ( ಈ ಶಕುಂತಲೆಯು ನಾನು ಪೇಳ ಮಾತಿನೊಡನೆ ತನ್ನ ಮಾತಂ ಜತೆಗೊಳಿಸದೆ ಮಾತನಾಡುವಳು. ಅಭಿಮುಖನಾಗಿ ನಾನು ಮಾತನಾ ಡುತ್ತಿರಲು ಆ ವಚನವ ಕೇಳಲಿಚ್ಛೆಯಿಂ ಕಿವಿಗೊಡುವಳು. ಚೆನ್ನಾಗಿ ಎನ್ನ ಮುಖದೆದುರಿಗೆ ತನ್ನ ಮುಖವನ್ನಿತ್ತು ನಿಲ್ಲದೆ ಲಜ್ಜೆಯಿಂ ಹೊಲಸಾರುವಳು. ಇವಳ ದೃಷ್ಟಿಯು ಒಂದು ಪದಾರ್ಥದಲ್ಲಿಯೂ ನಿಲ್ಲದೆ ಚಂಚಲವಾಗಿ ಎನ್ನ ದೃಷ್ಟಿ ಯಂ ವಂಚಿಸಿ ಓರೆನೋಟದಿಂ ಬಾ ಬಾ ಗೂ ನೋಡುವುದಿಲ್ಲ ನಾನು ಹೇಗೆ ಈ ಶಕುಂತಲೆಯಲ್ಲಿ ಅಭಿಲಾಷೆಯುಳ್ಳವನಾಗಿರುವೆನೋ ಹಾಗೆ ಅವಳು ಎನ್ನ ಅಭಿಲಾಷೆಯುಳ್ಳವಳಾಗಿ ಇರುವಳೆಂದು ಇವಳು ಮಾಲ್ಪ ಚೇಷ್ಟೆಯಿಂದಲೇ ತಿಳಿಯುವುದು. ಆದ್ದ ಹಿ೦ದೆನ್ನ ಪ್ರಾರ್ಥನೆಗೆ ಸ್ಥಳ ದೊರಕಿತು ” ಎಂದು ತನ್ನ ಮನದೊಳಾಲೋಚಿಸುತ್ತಿರಲು ಅಷ್ಟ ಅಲ್ಲೇ ಕೆಲವು ಋಷಿಗಳು ಬಂದು ಈ ತಪೋವನದಲ್ಲಿರುವ ಪ್ರಾಣಿಗಳಂ ಸಂರಕ್ಷಿಸುವುದಕ್ಕೋಸುಗ ಮಹಾರಾಜನಾದ ದುಷ್ಯಂತರಾಯನು ಬಂದಿರುವ ನೆಂದು ತಮ್ಮೊಳು ತಾವು ಮಾತನಾಡುತ್ತಿರುವಲ್ಲಿ ಅವರಲ್ಲೋರ್ವನು ಮಿಕ್ಕವರಂ ಕು' ತು- ಎಲೈ ಋಷಿಗಳಿರಾ, ಈ ದುಷ್ಯಂತರಾಯನ ಅಶ್ವಖುರಪ್ರಟದಿಂದೆದ್ದ ಕೆಂದೂಳು ಪ್ರಾತಃಕಾಲದ ಅರುಣಕಾಂತಿಯಂತೆ ಪ್ರಕಾಶಮಾನವಾಗಿ, ವೃಕ್ಷಗಳ ಕೊಂಬೆಗಳಲ್ಲಿ ಕಟ್ಟಿರುವ ಜಲದಿಂ ನನೆಸಿರುವ ನಾಯಿಮಡಿಗಳಲ್ಲಿ ಬಿದ್ದು, ಈ ವೃಕ್ಷ ಗಳಲ್ಲಿ ರಕ್ತವರ್ಣವಾದ ಶಲಭಗಳ ಸಮೂಹಗಳಿರುವುವೋ ಎಂಬ ಸಂಶಯವನ್ನು ಟುಮಾಡುತ್ತಿರುವುದು. ಮತ್ತು ಈ ರಾಯನ ಆನೆಯು ತೀವ್ರವಾದ ಪ್ರಹಾರವಂ ಗೈದುದಕ೦ ವೃಕ್ಷಗಳಲ್ಲಿ ತಗಲಿಕೊಂಡಿರುವುದೊಂದು ಕೊಂಬುಳ್ಳುಗಾಗಿ, ಎದೆ ಯಿಂದ ಅನೇಕವಾದ ಲತೆಗಳನ್ನೆ ಎಳೆದುಕೊಂಡು ಬರುವುದಕಂ ತನ್ನಂ ಹಗ್ಗಗಳಿ೦ ಸುತ್ತಿರುವರೋ ಎಂಬ ಭ್ರಾಂತಿಯನ್ನು ಂಟುಮಾಡುತ್ತ, ತಾನು ಬರುವ ರಭಸಕ್ಕೆ ಅನೇಕ ಹುಲ್ಲೆಗಳಂ ಓಡಿಸುತ್ತ, ನಮ್ಮ ತಪಗಳಿಗೆ ಮೂರ್ತೀಭವಿಸಿರುವ ವಿಘ್ನ ವೋ ಎಂಬಂತೆ ಇರುತ್ತ, ಈ ರಾಯನ ರಥವಂ ನೋಡಿ ಭಯವಂ ಪೊಂದು, ಧರ್ಮಪ್ರ ಧಾನವಾದ ಈ ನಮ್ಮ ಆಶ್ರಮವಂ ಪ್ರವೇಶಂಗೆಯ್ಯುತಿರುವುದು ” ಎಂದು ನುಡಿ ಯಲು ಆವಾಕ್ಯವಂ ಕೇಳಿ, ಆ ಸ್ತ್ರೀಯರುಗಳು ಇವನು ದುಷ್ಯಂತರಾಯನೆಂಬು ವುದು ನಿಶ್ಚಯವಾಗಿ ತಿಳಿದು, ಮದ್ದಾನೆಯು ಬರುವುದೆಂಬ ನುಡಿಗೆ ಭಯಭ್ರಾಂತ ಕಾಗುತ್ತಿರಲು; ಆ ರಾಯನು ಆ ಋಷಿಗಳ ವಾಕ್ಯವಂ ಕೇಳಿ, ನೀಚರಾದ ಸೇನಾಜ