ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಶಾಕುಂತಲನಾಟಕ ನವೀನಟೀಕೆ ೩೫ ನರು ಎನ್ನ ಹುಡುಕುವುದಕ್ಕೋಸುಗ ಈ ತಪೋವನವನ್ನಾ ಕ್ರಮಿಸುತ್ತಿರುವರು, ಅವರು ಹಿಂದಿರುಗಿ ಪೋಗುವಂತೆ ಮಾಡುವೆನೆಂದು ಆಲೋಚಿಸುತ್ತಿರಲು ಅನಸೂಯೆಯು ಎಲೈ ಮಹಾರಾಜನೇ, ಅರಣ್ಯ ಗಜವು ಬರುವುದೆಂದು ಋಷಿಗಳು ಹೇಳಿದ ವಾರ್ತೆಯಿಂ ನಾವೆಲ್ಲರೂ ಭಯದಿಂ ವ್ಯಾಕುಲರಾಗಿರುವೆ ವಾದ್ದ ೪೦ ಪರ್ಣಶಾಲೆಯಂ ಕುಳಿತು ಪೋಗುವಂತೆ ನಮಗೆ ಅಪ್ಪಣೆಯನೀಯ ಬೇಕು ” ಎಂದು ನುಡಿಯಲಾ ರಾಯನು, ತನ್ನ ಬಿಟ್ಟು ಪೋಗುವರೆಂಬ ವ್ಯಸನ ದಿಂದಲೂ ಋಷಿಗಳು ಕಾಣುವರೆಂಬ ಭಯದಿಂದಲೂ ಯುಕ್ತನಾಗಿ ಆ ಸ್ತ್ರೀಯರ ಕು೫ ತು_ ಎಲೌ ಕೋಮಲಾಂಗಿಯರುಗಳಿರಾ, ನೀವೆಲ್ಲಾ ಪರ್ಣಶಾಲೆಯಂ ಕುಖ ತು ಪೋಗುವುದು. ನಾನು ಈ ತಪೋವನಕ್ಕೆ ಎನ್ನ ಸೇನಾಜನದಿಂ ಬಾಧೆ ಯುಂಟಾಗದಂತೆ ಮಾಡುವೆನು ” ಎಂದು ಅಪ್ಪಣೆಯನ್ನೀಯಲು

  • ಆ ಶಕುಂತಲೆ ಮೊದಲಾದ ಸ್ತ್ರೀಯರು ಆ ಮಾಧವೀಮಂಟಪದಿಂದೆದ್ದು ನಿಂತು, ಅನಸೂಯೆ ಪ್ರಿಯಂವದೆಯರೀರ್ವರು ರಾಯನಂ ಕು' ತು_* ಎಲೆ ಮಹಾರಾಜನೇ, ಫಲಪುಷ್ಪಗಳಿ೦ದುಪಚಾರವಂ ಗೆಯ್ಯದೆ ಇರುವುದಿ೦ ನಿನ್ನಂ ಮರಳಿ ನೋಡುವುದಕ್ಕೂ ಪರ್ಣಶಾಲೆಗೆ ಬರುವಂತೆ ವಿಜ್ಞಾಪನೆಯಂಗೆಯ್ಯುವ ದಕ್ಕೂ ನಮಗೆ ಲಜ್ಜೆಯುಂಟಾಗುವುದು.” ಎಂದು ನುಡಿಯಲು; ಆರಾಯನು

ಎಲ್‌ ಸಖಿಯರುಗಳಿರಾ, ಈ ಪ್ರಕಾರವಾಗಿ ನೀವು ಹೇಳಲಾಗದು. ಮನೋಹರ ವಾದ ನಿಮ್ಮ ಸಂದರ್ಶನದಿಂದಲೇ ನಾನು ಸಮಸ್ತೋಪಚಾರವಂ ಗೈದಂತೆ ಸಂತು ಹೃನಾದೆನು ” ಎಂದು ಹೇಳಲಾಶಕುಂತಲೆಯು ಆ ದುಷ್ಯಂತರಾಯನ ಬಿಟ್ಟು ಪೋಗಲಾಗಿದೆ ಸ್ವಲ್ಪ ಜಾಲವಂ ಗೈದು ಕಾಲವಂ ಕಳೆಯುತ್ತ, ಮುಂದಡಿಯಿಡಲಾ ಇದೆ ಏನೋ ಒಂದು ವಸ್ತುವಂ ಮರೆತವಳಂತೆ ಹಿಂದಿರುಗಿ ಬಾ ಬಾ ಗೂ ರಾಯನಂ ನೋಡುತ, ಅತಿಪ್ರಯಾಸದಿಂದ ಸಖಿಯರಿಂದೊಡಗೂಡಿ ವಿಫ್ಟ್ ಕಾರಿಗ ಇಾಗಿ ಬಂದರೆಂದಾಋಷಿಗಳಂ ಮನದಲ್ಲಿ ನಿಂದಿಸುತ್ತ, ಸರ್ಣ ಶಾಲೆಯ ಕುತು ಪೋಗಲು ಆ ರಾಯನು ಅತ್ಯಂತ ವ್ಯಸನಾತುರನಾಗಿ, << ಈ ಶಕುಂತಲೆಯಂ ಬಿಟ್ಟು ಎನ್ನ ಪಟ್ಟಣಕ್ಕೆ ಪೋಗುವುದಕ್ಕೋಸುಗ ನಿರಾಶನಾಗಿರುವೆನು. ಈಗ ಎನ್ನ ಹುಡುಕುವುದಕ್ಕೆ ಬಂದಿರುವ ಎನ್ನ ಸೇನಾಜನವಂ ಒಡಗೊಂಡು ಈ ತಪೋವನದ ಸಮೀಪದಲ್ಲೇ ಕಟಕರಚನೆಯಂ ಗೆಯ್ಯುವೆನು. ಮತ್ತ ಆ ಶಕುಂತಲೆಯು ಸಖಿಯ ರಿಂದೊಡಗೂಡಿ ವೃಕ್ಷಗಳಿಗೆ ಜಲವಂ ವೊಯ್ಯುತಿರ್ದ ಒಯ್ಯಾರವಂ ಸಖಿಯ