ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬. ಕರ್ಣಾಟಕ ಕಾವ್ಯಕಲಾನಿಧಿ ರೊಡನೆ ಸರಸೋಕ್ತಿಯಂ ಪೇಳ ಸೊಗಸಂ ಬೆಡಗುಗೂಡಿ ಅಡಿಯಿಟ್ಟು ಪೋದ ಬಿತ್ತ ರವಂ-ಇವು ಮೊದಲಾದ ಅವಳ ವಿಲಾಸವಾದ ವ್ಯಾಪಾರದಲ್ಲಿ ತಗಲಿಕೊಂಡಿರುವ ಎನ್ನ ಬುದ್ಧಿಯಂ ಹಿಂದಿರುಗಿಸುವುದಕ್ಕೆ ಸಮರ್ಥನಾಗಲಾರೆನು. ಎದುರುಗಾಳಿಗೆ ತೆಗೆದುಕೊಂಡು ಪೋಗುವ ಧ್ವಜದಂಡವು ಮುಂದು ಸಾರಿ ಫೋಗುತ್ತ ಅದಲ್ಲಿರುವ ನಯವಾದ ವಸ್ತ್ರವು ಹೇಗೆ ಹಿಂದು ಸಾರುವುದೋ, ಅದರಂತೆ ಧೈರ್ಯಶಾಲಿಯಾದ ಎನ್ನ ಮನವು ಅವಳಲ್ಲಿ ಪರಿಚಯವಿಲ್ಲದೆ ಇರ್ದರೂ ಆ ಶಕುಂತಲೆಯನ್ನನುಸರಿಸಿ ಹಿಂದಕ್ಕೆ ಓಡುತಿರುವುದು ' ಎಂದು ತನ್ನೊಳು ತಾನು ಚಿಂತಿಸುತ್ತ ಸೇನಾಸಾ ಸವಂ ಕುಳಿತು ಬರುತಿರ್ದನು. ಎಂಬಲ್ಲಿಗೆ ಗದ್ಯ - ಚಂಡಕರಮಂಡಲೋಚ೦ಡತೇಜಃಪ್ರ ಕಾಂಡಕಾಂಡಷಂಡಖಂಡಿತಾಖಂಡಶೌರ್ಯ ಪರಿಮಂಡಿತ ಭಂಡನೋದ್ದಂಡಾರಿಮುಂಡ ಕಂಡಲದೋರ್ದಂಡಪಾಂಡಿತ್ಯ ಪಾಂಡುರುಚಖಂಡಡಿಂ ಡೀರಪುಂಡರೀಕ ಪರಿಪಾಂಡುರಯಶಃ ಪಿಚಂಡಿ ಬ್ರಹ್ಮಾಂಡಭಾಂಡದ್ದಟ ಕಾಲಕೂಟಪ್ರತಿಭಟ ಕಟುಕಪಟನಿಶಾಟಕೂಟ ಪಾಟನಲಂಪಟ ನಿಟಿಲಪುಟಘಟಿತ ವಿಕಟ ಕೃಪೀಟಿಯೋನಿ ಕುಟಿಲಮೋಹಾಂ ಧಕಾರಚಟಾವಿಘಟನ ಪಟುವಟಿನ್ಮಹಾನಟ ಮಕುಟತಟ ಪಟಟಿನೀತಳಾಂತರಿಂಗದಭಂಗೊ ತುಂಗತರಂಗ ಸಂಗರಭಂಗಸಂಭ್ರಮೋಜೃಂಭಮಾಣ ಗಂಭೀರವಾಗುಂಭಸಂಭಾವಿತ ಗರನಗರ “ವರನಿಲಯ ಚಂದ್ರಚೂಡ ಚರಣಾರವಿಂದ ಸೇವಾವರಂದ ನಿರಂತರ ನಿಷೇವಣ ಸ್ವಯಂವೃತಕವಿತಾ ವಧ್ರರತ್ನ ರಾಜಾಧಿರಾಜ ಮಹಾರಾಜ ಶ್ರೀಚಾಮರಾಜಪುತ್ರಾಯಸಗೋತ್ರ ಪವಿತ್ರಚರಿತ್ರ ಶಂಖ ಚಕ್ರ ಮಕರ ಮತ್ಥ ಶರಭ ಸಾಳ್ಳ ಗಂಡಭೇರುಂಡ ಧರಣಿವರಾಹ ಹನುಮದ್ಧ ರುಡ ಕಂಠಿ ರವಾದ್ಯನೇಕ ಬಿರುದಾಂಕಿತ ನರ ಸತಿಬಿರದ ಶ್ರೀಚಾಮುಂಡಿಕಾವರಪ್ರಸಾದಲಬ್ದ ಮಹಿಶೂರಮಹಾ ಸಂಸ್ಥಾನದೇದೀಪ್ಯಮಾನಕುಲಕ್ರಮಾಗತದಿವ್ಯರತ್ನಸಿಂಹಾಸನಾರೂಢಶ್ರೀಕೃಷ್ಣ ರಾಜಕಂಠೀರವರು ಸರಸಜನಾನಂದಕರವಾಗಿ ಲೋಕೋಪಕಾರಾಕ್ಷಮಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂ ವಿರಚಿಸಿದ ಕೃಷ್ಣರಾಜವಾಣೀವಿಲಾಸರತ್ನಾಕರವೆಂಬ ಶಾಕುಂತಳನಾಟಕದ ನವೀನ ಟೀಕೆಯಲ್ಲಿ ದುಷ್ಯಂತರಾಯನು ತನ್ನ ಸೇನಾಸಮೀಪಕ್ಕೆ ಬರುತಿರ್ದನೆಂಬ ಪ್ರಥಮಕಲ್ಲೊಲದಲ್ಲಿ ಚತುರ್ಥ ತರಂಗಂ. ಪ್ರಥಮಕಲ್ಲೋಲಂ ಸಮಾಪ್ತಂ