ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯ -ಶಾಕುಂತಲನಾಟಕ ನವೀನಟೀಕೆ ಆ ರಾಯನು ಮಂದಹಾಸವಂ ಗೆಯ್ಯುತ, ಅವನು ವಕ್ರಾಂಗನಾಗಿ ದಂಡ ವನ್ನವಲಂಬಿಸಿ ನಿಂದಿರುವುದಂ ಕಂಡು- ಎಲೈ ವಿದೂಷಕನೇ, ಯಾರಿಂದ ನಿನ್ನ ಶರೀರಕ್ಕೆ ಘಾತಿಯುಂಟಾದುದು? ಎಂದು ಕೇಳಲಾವಿದೂಷಕನು- ಎಲೆ ಮಹಾರಾಜನೇ, ನೀನು ಎನ್ನ ಕಣ್ಣುಗಳಂ ಚುಚ್ಚಿ ಕಣ್ಣೀರು ಬರುವುದಕ್ಕೆ ಕಾರಣ ವೇನೆಂದು ಏಕೆ ಕೇಳುತ್ತಿರುವೆಯೋ ತಿಳಿಯದು ? ” ಎನಲು ಆ ರಾಯನು (ಎಲೈ ವಿದೂಷಕನೇ, ನೀನು ಹೇಳುವ ವಾಕ್ಯಾಭಿಪ್ರಾಯವು ನನಗೆ ತಿಳಿಯದು ಎನಲಾವಿದೂಷಕನು- ಎಲೈ ಮಿತ್ರನಾದ ರಾಜನೇ, ಕೇಳು ನದೀಮಧ್ಯದಲ್ಲಿರುವ ನೀರಂಜಿವೃಕ್ಷವು ತಲೆಯಂ ಬಗ್ಗಿ ತೊನೆಯುತ್ತ ಕುಬ್ಬ ಲೀಲೆಯಂ ವಿರಚಿಸುತಿರು ವುದು ಆ ವೃಕ್ಷವು ಬಗ್ಗಿ ತೊನೆಯುವುದು ತನ್ನ ಪ್ರಭಾವದಿಂದಲೋ, ಅಲ್ಲವಾದ ಲ್ಲಿ ನದೀವೇಗದಿಂದಲೋ ಪೇಳು ಎನಲು ಆ ರಾಯನು ಆ ವೃಕ್ಷವು ಬಗ್ಗಿ ತೊನೆ ಯುವುದಕ್ಕೆ ನದಿವೇಗವೇ ಕಾರಣವಾಗಿರುವುದು ; ಎನಲು ಆ ವಿದೂಷಕನು ಇಲ್ಲಿ ಎನ್ನ ಕೈ ಕಾಲುಗಳು ಘಾತಿಯಂ ಪೊಂದುವುದಕ್ಕೆ ನೀನೇ ಕಾರಣವು ಎಂದು ನುಡಿಯಲು; ಆ ರಾಯನು ಎಲೈ ಮಂದಮತಿಯೇ, ನಿನ್ನ ಅಂಗಘಾತಿಗೆ ನಾ ನೆಂತು ಕಾರಣನಾಗುವೆನು ” ಎನ್ನಲಾವಿದೂಷಕನು « ಯಾವ ಕಾರಣದಿಂ ನೀನು ಸಮಸ್ತವಾದ ರಾಜಕಾರಂಗಳಂ ಬಿಟ್ಟು ಹಳ್ಳಗಳಿಂ ಪೋಗುವುದಕ್ಕಾಗದೆ ಇರುವ ಅರಣ್ಯ ಪ್ರದೇಶದಲ್ಲಿ ವನಚರರಾದ ಬೇಡರ ವೃತ್ತಿಯನ್ನಾಶ್ರಯಿಸಿ ಸಂಚರಿಸುತ್ತಿರುವೆ ಯೋ ಆದಿ೦ ನಿನ್ನೊಡನೆ ನಿತ್ಯದಲ್ಲೂ ತಿರುಗುತ್ತ ದುಷ್ಟ ಮೃಗಗಳಂ ಓಡಿಸುತ್ತಿ ರುವುದರಿ೦ದೆನ್ನ ಅಂಗಗಳ ಕೀಲುಗಳೆಲ್ಲಾ ಜರ್ಝರಿತವಾಗಲಾಗಿ ಪದಚಲನೆಯಂ ಗೈಯ್ಯುವುದಕ್ಕೂ ಶಕ್ತಿಯಿಲ್ಲದೆ ಇರುವೆನು. ಒಂದು ದಿವಸವಾದರೂ ಎನ್ನ ಬಿಟ್ಟು ಕಳುಹಿದೆಯಾದರೆ ಎನ್ನ ಶರೀರಕ್ಕೆ ಉಪಚಾರವಂ ಮಾಡಿಕೊಳ್ಳುವೆನು ಎಂದು ನುಡಿ ಯಲು; ಆ ರಾಯನು – ಆ ವಿದೂಷಕನು ಅರಣ್ಯವಂ ಸುತ್ತಲಾರೆನೆಂದು ನುಡಿ ಯುತ್ತಿರುವನು, ಎನ್ನ ಮನವಾದರೋ ಆ ಖುಷಿ ಪುತ್ರಿಯಾದ ಶಕುಂತಲೆಯಂ ಸ್ಮರಿಸಿಕೊಂಡು ಬೇಟೆಯಾಡುವುದಕ್ಕೂ ಮುಂದರಿದು ಪೋಗದೆ ವಿಮುಖವಾಗಿರು ವುದು. - ಮತ್ತಮಾಶಕುಂತಲೆಯೊಡನೆ ಸಹವಾಸವಂ ಗೆಯ್ಯುತ ಅವಳಿಗೆ ವಿಲಾಸ ವಾಗಿ ನೋಡುವುದು ಉಪದೇಶವಂ ಗೈದಿರುವುವೋ ಎಂಬಂತಿರುವ ಹುಲ್ಲೆಗಳ ಸಮಯದಲ್ಲಿಯ ನಾರಿಯಿಂ ಸೇರಿರುವ ಧನು ಸೃಎತ್ತಿ ಬಾಣವಂ ಬಿಡುವುದಕ್ಕೆ ಸಮರ್ಥನಾಗಲಶಏತನು” ಎಂದು ತನ್ನ ಮನದಾಲೋಚನೆಯಂ `ಗೆಯುತ್ತಿರಲಾ ವಿದೂಷಕನು ಕಾಯನ ಮುಖವ ನೋಡಿ- ' ಎಲೈ ರಾಯನೇ, ನೀನು ಹೃದಯ