ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಕರ್ಣಾಟಕ ಕಾವ್ಯ ಕಲಾನಿಧಿ ದಲ್ಲಿ ಏನೋ ಒಂದು ಯೋಚನೆಯಂ ಗೆಯ್ಯುತ್ತಿರುವನಂತೆ ತೋರುವೆ ನಾನು ನಿನ್ನೊಡನೆ ಪೇಳಿದ ವಾಕ್ಯವು ಅರಣ್ಯರೋದನವಂ ಗೆಯ್ದಂತಾದುದು ” ಎಂದು ನುಡಿಯಲು; ಆರಾಯನು ನಸುನಕ್ಕು (ಎಲೈ ವಿದೂಷಕನೇ ಮಿತ್ರನಾದ ನಿನ್ನ ವಚ ನವನ್ನತಿಕ್ರಮಿಸಿ ಪೋಗಬಾರದೆಂದು ನಿಂತಿರುವೆನು. ನೀನು ಮನಬಂದಂತೆ ವಚನವಂ ಹೇಳುತಿರುವೆ” ಎನ್ನಲಾ ವಿದೂಷಕನು - ಎಲೈ ಸ್ವಾಮಿಯೆ ನೀನು ಚಿರಂಜೀವಿ ಯಾಗಿ ಈ ಆಶ್ರಮದಲ್ಲಿ ಸೌಖ್ಯವಾಗಿರುವುದು ; ಎನ್ನೊ ಡನೆ ವಿಶ್ವಾಸವಾಗಿ ಸಲ್ಲಾ ಪವಂಗೈಯ್ಯದೆ ಇರುವೆಯಾದ್ದರಿಂ ನಾನು ಪೋಗುವೆನೆನಲು ” ಆ ರಾಯನು CC ಎಲೈ ವಿದೂಷಕನೆ ನಿಲ್ಲು ನಿಲ್ಲು ; ನಿನ್ನೊಡನೆ ಇನ್ನು ಕೆಲವು ಪೇಳತಕ್ಕದ್ದಿರುವ ದೆಂದು ಪೋಗುತ್ತಿರುವನಂತಡೆದು ನಿಲ್ಲಿಸಲಾವಿದೂಷಕನು, “ಎಲೈ ಸ್ವಾಮಿಯೆ ನಿನ್ನ ಹೃದಯಾಭಿಪ್ರಾಯವೇನಿರುವುದೋ ಅದಂ ಎನ್ನೊ ಡನೆ ಪೇಳಬಹುದು' ಎನ ಲಾರಾಯನು, 11 ಎಲೈ ವಿದೂಷಕನೆ ಚನ್ನಾಗಿ ನೀನು ಚೇತರಿಸಿಕೊಂಡು ಆಯಾಸ ವಿಲ್ಲದ ಕಾರ್ಯದಲ್ಲಿ ಎನಗೆ ಸಹಾಯವಂಗೈಯಬೇಕು' ಎಂದು ಹೇಳಲಾವಿದೂ ಷಕನು ಪೂರ್ಣಗಡುಬಿನಲ್ಲಾದರೆ ಆಯಾ ವಿಲ್ಲದೆ ಇರುವದು ಅದರಲ್ಲಾದರೆ ಸಹಾಯವಂಗೈಯ್ಯುವೆನೆನಲಾರಾಯನು ಮುಗುಳ್ಳಗೆಮಾಡಿ (ಎಲೈ ವಿದೂಷಕನೆ ನೀನು ಬೇಳಿದ ವಾಕ್ಯವದಂತಿರಲಿ, ಎನ್ನ ಮನದಲ್ಲಿರುವ ಸಮಸ್ತ ವೃತ್ತಾಂತವಂ ಪೇಳುವೆನು ” ಎಂದು ನುಡಿದು ಸ್ವಲ್ಪ ದೂರದಲ್ಲಿದ್ದ ಚಾರನಂಕರೆದು ರೈವತಕ ನಾದ ಸೇನಾಪತಿಯಂ ಕರದುಕೊಂಡು ಬರುವದೆಂದಾಜ್ಞೆಯನ್ನೀಯಲಾಚಾರನು ರಾಜಾಜ್ಞೆಯಂ ಶಿರದೊಳಾಂತು ಸೇನಾಪತಿಯ ಸಮೀಪವಂಸಾರ್ದು ಅಯ್ಯಾ ಸೇನಾಪತಿಯೆ ರಾಯನು ಏನೋ ಒಂದು ಕಾರ್ಯವಂ ಆಜ್ಞಾಪಿಸುವುದರಲ್ಲಿ ಅಭಿ ಲಾಷೆಯುಳ್ಳವನಾಗಿ ನೀನು ಬರುವಮಾರ್ಗವಂ ಇದಿರುನೋಡುತ್ತಿರುವನಾದ್ದರಿಂ ಜಾಗ್ರತೆಯಿಂನಡೆ ” ಎಂದು ಹೇಳುತ ಅವನಂಕರದು ಕಂಡು ಬರುತಿರಲಾಸೇನಾ ಪತಿಯು ಸ್ವಲ್ಪ ದೂರದಲ್ಲಿ ರಾಯನಂ ನೋಡಿ ?ಾಮಿಯಾದ ರಾಯನಲ್ಲಿ ದೋಷ ರಹಿತವಾದ ಮೃಗಯಾವ್ಯಾಪಾರವು ಹೇರಳವಾದ ಗುಣವುಳ್ಳದ್ದಾಗಿ ತೋರುವುದು ಈರಾಯನಶರೀರವು ನಿರಂತರದಲ್ಲಿಯ ಮೃಗಗಳಂ ಸಂಹಾರವಂಗೈಯ್ಯುವುದ ಕ್ಲೋಸುಗ ನಾರಿಯಂ ಸೆಳೆಯುತ್ತಿದ್ದರಿಂ ಕ್ರೂರವಾದ ಮುಂಭ - ಗದಿಂ ಸೂರ್ಯ ಕಿರಣಂಗಳಂ ಸಹಿಸಿದ್ದರಿಂ ಬೆಮರ್ಬಿಂದುಗಳಿ೦ಯುಕ್ತವಾಗಿ ಅತಿಕೃಶವಾಗಿದ್ದರೂ ದೃಢವಾಗಿ ತೋರುತ ಪರ್ವತದಲ್ಲಿ ಸಂಚರಿಸುವ ಮದ್ದಾನೆಯಂತೆ ಪ್ರಾಣಸತ್ವವಂ ಧರಿಸಿರುವನೆಂದು ನುಡಿಯಲಾರಾಯನ ಸಮೀಪವಂ ಸೇರಿ ನಮಸ್ಕಾರವಂಗೈದು,