ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆಪೇಳಿ, ರಾಯನಿಂದೊಡಗೊಂಡು ಬಂದಾವೃಕ್ಷಾಯೆಯಲ್ಲಿ ರಾಯಸಹಿತನಾಗಿ ಕುಳಿತುಕೊಳ್ಳಲು; ರಾಯನು ವಿದೂಷಕನಂ ಕುಯಿತು- ಎಲೈ ಮಾಂಡವ್ಯನೇ, ನೀನು ನೋಡ ತಕ್ಕಂಥ ವಸ್ತು ವಂ ನೋಡದಿರುವೆಯಾದ ಅ೦ ಪಡೆಯದೆ ಇರುವ ನೇತ್ರಾನಂದವು ಳ್ಳವನಾದೆ ” ಎಂದು ನುಡಿಯಲು ಆ ವಿದೂಷಕನು- ಎಲೈ ರಾಯನೇ, ಪೂಜ್ಯನಾದ ನೀನು ಎನ್ನ ಮುಂಭಾ ಗದಲ್ಲಿರುವಲ್ಲಿ ಎನಗೆ ನೇತ್ರಾನಂದವುಂಟಾಗಿಯೇ ಇರುವುದು ” ಎನ್ನಲು; ರಾಯನು_ಲೋಕದಲ್ಲಿ ಸಮಸ್ತ ಜನರು ಸ್ವಕೀಯವಾದ ವಸ್ತುವನ್ನೇ ರಮಣೀಯವೆಂದು ತಿಳಿಯುವರು” ಎಂದು ನುಡಿದು, « ಎನ್ನ೦ ಸ್ತೋತ್ರಂಗೆಯ್ಯುವ ವಾಕ್ಯವಂತಿರಲಿ; ನಾನು ಈ ಆಶ್ರಮಕ್ಕೆ ಅಲಂಕಾರಸ್ವರೂಪಳಾದ ಶಕುಂತಲೆಯಂ ಪೇಳುವೆನು ” ಎನಲು; ವಿದೂಷಕನು ಈದುಷ್ಯಂತರಾಯನು ಶಕುಂತಲೆಯ ವೃತ್ತಾಂತವಂಗೆಯ್ದು ವುದಕ್ಕೆ ಆಸ್ಪದವುಂಟಾಗದಂತೆ ಸಲ್ಲಾಪವಂ ಗೆಯ್ಯುವೆನೆಂದು ತನ್ನ ಮನದಲ್ಲಾಲೋ ಚಿಕ್ಕಿ-ಅಯ್ಯಾ, ಸ್ನೇಹಿತನಾದ ರಾಯನೇ, ಈಗ ಆತಾಪಸಕನ್ಯಕೆಯಾದ ಶಕುಂತ ಲೆಯನ್ನೂ ಕೂಡ ಎನಗೆ ಬೇಕೆಂದು ಕೇಳುವುದು ಯುಕ್ತವಾಗಿ ತೋರುತ್ತದಲ್ಲವೆ!” ಎನ್ನಲು; ರಾಯನು- ೨ಿ ಸ್ನೇಹಿತನೇ, ಪುರುವಂಶದಲ್ಲಿ ಹುಟ್ಟಿರುವ ನನ್ನ ಮನವು ಯೋಗ್ಯವಲ್ಲದ ವಸ್ತುವಿನಲ್ಲಿ ಮುಂಬರಿದು ಪೋಗಲಾದು. ಅವಳ ವೃತ್ತಾಂತವಂ ಪೇಳುವೆನು ಕೇಳು. ಪೂರ್ವದಲ್ಲಿ ಈಶಕುಂತಲೆಯು ಅಸ್ಥರಸ್ತ್ರೀಯಾದ ಮೇನಕೆಯ ಗರ್ಭದಲ್ಲಿ ರಾಜರ್ಷಿಯಾದ ವಿಶ್ವಾಮಿತ್ರನಿಂ ಪುಟ್ಟಲು, ಆಮೇನಕೆಯು ಅವಳಂ ಬಿಟ್ಟು ದೇವಲೋಕವಂ ಕು ತು ಪೋದುದಿ೦ದೀಕಣ್ಯ ಮುನಿಯು ಅವಳಂ ತಗೆ ದು ಕೊಂಡು ಬಂದು ಸಂರಕ್ಷಿಸುವುದwಂದಿವಳು ಎಕ್ಕದ ಗಿಡದ ಮೇಲೆ ಬಿದ್ದ ನೂತ ನವಾದ ಪುಷ್ಪ ಮಾಲೆಯಂತೆ ಆ ಋಷಿಗಳಾಶ್ರಮದಲ್ಲಿರುವಳು ” ಎಂದು ಹೇಳಲು; ವಿದೂಷಕನು ಗಹಗಹಿಸಿ ನಕ್ಕು.. ಎಲೈ ಮಿತ್ರನಾದ ರಾಯನೇ, ಪಿಂಡ ಖರ್ಜೂರದಲ್ಲಿ ಜುಗುಪ್ಪೆಯುಂಟಾದ ಪುರುಷನಿಗೆ ಹುಣಿಸೆಯ ಹಣ್ಣಿನಲ್ಲಿ ಸಹಜ ವಾಗಿ ಅಭಿಲಾಷೆಯುಂಟಾಗುವುದು. ಹಾಗೆ ಅಂಥ ಮನೋಹರರಾದ ಶ್ರೇಷ್ಟರಾದ ಸ್ತ್ರೀಯರುಗಳ ಸರಸದಲ್ಲಿಯ ಆಸೆಯಿಲ್ಲದಿರುವ ನಿನಗೆ ಈ ಶಕುಂತಲೆಯಂ ಪ್ರಾರ್ಥನೆಯಂ ಗೆಯ್ಯುವುದು ಏನು! ” ಎಂದು ಹೇಳಲು;