ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಕರ್ಣಾಟಕ ಕಾವ್ಯಕಲಾನಿಧಿ ಆರಾಯನು-«« ಎಲೈ ವಿದೂಷಕನೇ, ನೀನಾಶಕುಂತಲೆಯಂ ನೋಡಿದ್ದೆ ಯಾ ದರೆ ಈ ಪ್ರಕಾರವಾದ ವಿರೋಧವಾಕ್ಯವಂ ಪೇಳುವುದಕ್ಕೆ ನಿನಗೆ ಮನಬಾರದೆ ಇರುವುದು ” ಎಂದು ನುಡಿಯಲು; ವಿದೂಷಕನು “ಎಲೈ ಸ್ವಾಮಿಯೇ, ಅನೇಕ ಸುಂದರಸ್ತ್ರೀಯರು ನೋಡಿ ರುವ ನಿನಗೂ ಆಶ್ಚರ್ಯವನ್ನುಂಟುಮಾಡುತಿರುವಳಾದ್ದ ೫೦ ಶಕುಂತಲೆಯು ಮನೋಹರವಾದ ರೂಪವುಳ್ಳವಳೆಂದು ತೋಟವಳು ” ಎನ್ನಲು; ರಾಯನು-(ಎಲೈ ಮಿತ್ರನೇ, ಆ ಶಕುಂತಲೆಯ ರೂಪರೇಖಾವಿಭ್ರಮ ಮೊದೆ ಲಾದ ಚರ್ಯವಂ ಪೇಳುವುದಕ್ಕಾಗದೆ ಇರುವುದು. ಆದರೂ ಸ್ವಲ್ಪವಾಗಿ ವಿವರಿ ಸುವೆನು, ಕೇಳು. ಬ್ರಹ್ಮನು ಮೊದಲು ಈ ಶಕುಂತಲೆಯ ಅವಯವಗಳಂ ಚಿತ್ರ ದಲ್ಲಿ ಬರೆದುಕೊಂಡು ಆ ಚಿತ್ರವಂ ನೋಡಿ ಸೃಷ್ಟಿಯಂ ವಿರಚಿಸಿ ಇರುವನೋ! ಹಾಗ ಲ್ಲದಿದ್ದರೆ ಜಗತ್ತಿನಲ್ಲಿ ಸೌಂದರ್ಯವೆಲ್ಲ ವಂ ಒಟ್ಟುಗೂಡಿಸಿ ನಿರ್ಮಾಣವಂ ಗೆಯ್ದಿರು ವನೋ! ಅಂತುಮಲ್ಲದಿರೆ ಹಸ್ತದಿಂ ನಿರ್ಮಿಸಲು ಮೃದುವಾದ ಇವಳ ಶರೀರವು ಕಂದಿ ಪೋಗುವುದು, ಅಧಿಕ ರಮಣೀಯವಾಗಲಾದೆಂದು ತನ್ನ ಮನಸ್ಸಿನಿಂದಲೇ ನಿರ್ಮಾಣವಂ ಗೆಯ್ದಿರುವನೋ ತಿಳಿಯದು. ರಂಭೆ, ಊರ್ವಶಿ ಮೊದಲಾದ ಸುಂದರ ಸ್ತ್ರೀಯರು ನಿರ್ಮಿಸಿರುವ ಬ್ರಹ್ಮನ ಸೃಷ್ಟಿ ಕ್ರಮವಂ ಲೋಕೋತ್ತಮವಾದ ಈ ಶಕುಂತಲೆಯು ದೇಹವಂ ನೋಡಿ ಊಹಿಸುತ್ತಿರುವ ಎನಗೆ ಸ್ತ್ರೀಯರಲ್ಲಿ ಶ್ರೇಷ್ಟಳಾದ ಈ ಶಕುಂತಲೆಯ ನಿರ್ಮಾಣಮಂ ಇನ್ನೊಬ್ಬ ಬ್ರಹ್ಮನು ಎರಚಿಸಿರುವಂತೆಯೇ ತೋರುವುದು ಎಂದು ನುಡಿಯಲು; ವಿದೂಷಕನು- ಎಲೈ ಸ್ವಾಮಿಯೇ, ನೀನು ಹೇಳುವ ವಾಕ್ಯವಂ ಕೇಳು ವಲ್ಲಿ ರೂಪವತಿಯರಾದ ಸ್ತ್ರೀಯರುಗಳನ್ನಾ ಶಕುಂತಲೆಯು ತನ್ನ ದೇಹಕಾಂತಿಯಿಂ ತಿರಸ್ಕಾರವಂ ಗೆಯ್ಯುವಂತೆ ತೋರುವುದು ಎನ್ನಲು; ಆ ರಾಯನು- ಎಲೈ ಮಿತ್ರನೇ, ಎನ್ನ ಮನದಲ್ಲಿ ತೋಯುವ ರೀತಿಯಂ ಪೇಳುವೆನು, ಕೇಳು. ಈ ಶಕುಂತಲೆಯು ಭ್ರಮರ ಮೊದಲಾದುವ೦ ವಾಸ ನೆಗೊಳ್ಳದೆ ನೂತನವಾಗಿ ವಿಕಾಸವಾದ ಪುಷ್ಪದಂತೆ ಪರಿಮಳಭರಿತಳಾಗಿರುವು >೦ ಪದ್ಧಿ ನೀಜಾತಿಯಾಗಿರುವಳೆಂತಲೂ, ಉಗುರುಗಳಿ೦ ಜಿಗಟದೆ ಇರುವ ಚಿಗುರಿನಂತೆ ಕೋಮಲವಾಗಿದ್ದುದ°೦ ಅತಿ ಮೃದುವಾದ ಅಂಗಗಳುಳ್ಳವಳಾಗಿ ರುವಳೆಂತಲೂ, ಸೂಜಿಯಿಂ ರಂಧ್ರವಂ ಗೆಯ್ಯದೆ ಇರುವ ಮುತ್ತಿನಂತ ಕಾಂತಿಯು ಕ್ರಳಾಗಿರುವಳಾದ್ಯ೫೦ ನೂತನ ಯವನಶಾಲಿಯಾಗಿ ರಾಜಿಸುವಳೆಂತಲೂ