ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ -ಶಾಕುಂತಲನಾಟಕ ನವೀನಟೀಕೆಯಾವ ಜನರೂ ರುಚಿನೋಡದೆ ಇರುವ ಮದ್ಯದಂತಿರುವುದು ನೋಡಿದಮಾತ್ರ ದಿಂದಲೇ ಸಮಸ್ತ ಕಾಮಪುರುಷರಿಗೆ ಮದವನ್ನುಂಟುಮಾಡಿ ಮರುಳುಗೊಳಿಸುವ ಳೆಂತಲೂ, ಸಮಸ್ತ ಪುಣ್ಯಗಳಿಗೂ ಸಂಪೂರ್ಣಫಲಸ್ವರೂಪಳಾಗಿ ತೋರುವುದಿಲ್ಲ ಅನೇಕ ಸುಕೃತವಂ ಮಾಡಿದ ಪುರುಷನಿಗೆ ದೊರಕುವಳಲ್ಲದೆ ಸ್ವಲ್ಪ ಪುಣ್ಯವಂತನಿಗೆ ಸಿಕ್ಕಲಾಗಳೆಂತಲೂ ತೋಚುವುದು ಆದರೂ ಬ್ರಹ್ಮನು ಇವಳಂ ಅನುಭವಿಸುವುದಕ್ಕೆ ಯಾವ ಪುರುಷನಂ ನಿರ್ಮಾಣವಂ ಗೆಯ್ದಿರುವನೋ, ತಿಳಿಯದೆಂದು ಯೋಜನೆಯಂ ಗೆಯ್ಯುವೆನು ?” ಎಂದು ನುಡಿಯುತಿರ್ದನು. ಎಂಬಲ್ಲಿಗೆ ಶ್ರೀಕೃಷ್ಣರಾಜಕಂಠೀರವರು ಲೋಕೋಪಕಾರಾರ್ಥವಾಗಿ ವಿರಚಿಸಿದ ಕೃಷ್ಣರಾಜ ವಾಣೀವಿಲಾಸರತ್ನಾಕರವೆಂಬ ಶಾಕುಂತಲನಾಟಕ ನವೀನಟೀಕಿನಲ್ಲಿ ದುಷ್ಯಂತರಾಯನು ವಿದೂ ಷಕನೊಡನೆ ಶಕುಂತಲೆಯ ಸೌಂದಯ್ಯ ವರ್ಣನೆಯಂ ಗೆಯ್ಯುತಿರ್ದನೆಂಬ ದ್ವಿತೀಯಕಲ್ಲೋಲದಲ್ಲಿ ಪ್ರಥಮ ತರಂಗಂ ಸಂಪೂರ್ಣ೦. - - 9f%