ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಕಲ್ಲೋಲದ ದ್ವಿತೀಯ ತರಂಗಂ ಅನಂತರದಲ್ಲಿ ದುಷ್ಯಂತರಾಯನು ಪೇಳ ವಾಕ್ಯವಂ ಕೇಳ ವಿದೂಷಕನು ರಾಯನಂ ಕುರಿತು- ಎಲೈ ಸ್ವಾಮಿಯೇ, ನೀನು ಅಪ್ಪಣೆಯನ್ನಿತ್ತ ವಾಕ್ಯವಂ . ಕೇಳಿ ಅಧಿಕ ಸಂತೋಷವುಂಟಾದುದು. ನೀನಾಶಕುಂತಲೆಯಂ ಜಾಗ್ರತೆಯಾಗಿ ಸ್ವಾಧೀನವಂ ಮಾಡಿಕೊಂಡು ಸಮಸ್ತ ಸೌಖ್ಯವಂ ಪಡಿಸುತ್ತ ಸಂರಕ್ಷಿಸುವುದು, ಅಲ್ಲದೆ ವಿಳಂಬವಂ ಗೆಯ್ದೆ ಯಾದರೆ ಯಾವನಾದರೂ ಒಬ್ಬ ಇಂಗಳದ ಎಣ್ಣೆಯಿಂ ಜಿಡ್ಡಾಗಿರುವ ತಲೆಯುಳ್ಳ ಋಷಿಯ ಹಸ್ತಕ್ಕೆ ಸಿಕ್ಕಿ ಪೋಗುವಳು ” ಎಂದು ನುಡಿ ಯಲು; ರಾಯನು ಎಲೈ ಮಿತ್ರನೇ, ನೀನು ಹೇಳಿದಂತೆ ಈ ಶಕುಂತಲೆಯಂ ಜಾಗ್ರತೆಯಾಗಿ ಸ್ವಾಧೀನವ ಮಾಡಿಕೊಂಡು ಸಲಹುವುದಕ್ಕೆ ತಪೋನಿಧಿಯಾದ ಕಣ್ಯ ಋಷಿಯು ಈ ಆಶ್ರಮದಲ್ಲಿಲ್ಲದೆ ಸ್ನಾನಾರ್ಥವಾಗಿ ಪೋಗಿರುವನು ಎನಲು; ವಿದೂಷಕನು-ಎಲೈ ಸ್ವಾಮಿಯೇ, ನಿನ್ನಲ್ಲಾ ಶಕುಂತಲೆಗೆ ಅನುರಾಗವು ಎಷ್ಟು ಮಟ್ಟಾಗಿರುವುದು, ಅದು ಸಂಗತಿಯಂ ಪೇಳು ” ಎಂದು ನುಡಿಯಲು ;

  • ರಾಯನು- ಎಲೈ ವಿದೂಷಕನೇ, ಋಷಿಪುತ್ರಿಗಳಾದವರು ಉತ್ಪತ್ತಿ ಸಿದ್ದವಾಗಿ ಮುಗ್ಧರಾಗಿ ಪಟ್ಟಣಸ್ತ್ರೀಯರಂತೆ ವಿಳಾಸಗಳಿ೦ ತಮ್ಮ ಇಂಗಿತವಂ ಹೊದೋಜಿಸುವುದಕ್ಕೆ ಸಮರ್ಥರಲ್ಲ ವಾದ್ದ ಹಿ೦ದೆನ್ನಲ್ಲಿ ಅವಳಿಗೆ ಇಷ್ಟು ಮ ಟ್ರಾದ ವಿಶ್ವಾಸವಿರುವುದೆಂದು ಹೇಳುವುದಕ್ಕಾಗದೆ ಇರುವುದು. ಹಾಗಾದರೂ ಸ್ವಲ್ಪ ವಿಶೇಷವಿರುವುದು, ಪೇಳುವೆನು ಕೇಳು. ನಾನು ಆ ಶಕುಂತಲೆಗೆ ಅಭಿ ಮುಖನಾಗಲು, ಎನ್ನಂ ನೋಡುತಿರ್ದ ದೃಷ್ಟಿಯಂ ಲಜ್ಜೆಯಿಂ ಹೊಕ್ತಟ್ಟುವಳು; ಎನಗೋಸುಗ ಬಂದ ನಗುವಂ ತಡೆದು ಸಖಿಯರ ಮುಖವಂ ನೋಡಿ ನಗುವಳು, ತನ್ನ ಸದ್ದು ಣಾದಿಗಳಿ೦ ತಡೆಯಲ್ಪಟ್ಟ ಮನ್ಮಥವಿಕಾರವಂ ಹೊಂದೋ ಯ ತೋ' ಸದಂತೆ ನಟಿಸುವಳು. ” ಎಂದು ನುಡಿಯಲು;

ವಿದೂಷಕನು- ಎಲೈ ಸ್ವಾಮಿಯೇ, ಅರಣ್ಯವಾಸಿಯಾದ ಆ ಶಕುಂತ ಲೆಯು ನೀನು ನೋಡಿದಮಾತ್ರದಿಂದಲೇ ನಿನ್ನ ತೊಡೆಯನ್ನೆಯಿವಳೆ ? ” ಎನಲು, ರಾಯನು-- ಎಲೈ ಮಿತ್ರನೇ ! ಪೂಜ್ಯಳಾದ ಆ ಶಕುಂತಳೆಯು ಸವಿ